ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡಳು.. – ವಿಚಿತ್ರ ರೋಗಕ್ಕೆ ಮಹಿಳೆ ಬಲಿ!
ಏಕಾಏಕಿ ತೂಕ ಇಳಿಸಬೇಕು. ಸಣ್ಣಗೆ, ಸುಂದರವಾಗಿ ಕಾಣಬೇಕು ಅಂತಾ ಅನೇಕರು ಬಯಸುತ್ತಾರೆ. ಹೀಗಾಗಿ ಅನೇಕರು ಡಯೆಟ್ ಮಾಡೋದು, ಜಿಮ್ಗೆ ಹೋಗಿ ಏನೇನೋ ಸರ್ಕಸ್ ಮಾಡುತ್ತಾರೆ. ಹೀಗೆ ಏಕಾಏಕಿ ಹೋಗಿ, ತೂಕ ಇಳಿಸುವುದು ಎಷ್ಟು ಸೇಫ್ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದೀಗ ಯುವತಿಯೊಬ್ಬಳು ಒಂದೇ ವರ್ಷದಲ್ಲಿ 45 ಕೆಜಿ ಕಳೆದುಕೊಂಡು ವಿಚಿತ್ರ ರೋಗದಿಂದ ಮೃತಪಟ್ಟಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಇದನ್ನೂ ಓದಿ: ಏಡಿ ಖಾದ್ಯ ತಿಂದ ಬಳಿಕ ಮಹಿಳೆಗೆ ಕಾದಿತ್ತು ಶಾಕ್! – ಗ್ರಾಹಕಿ ಪೊಲೀಸರಿಗೆ ಕರೆ ಮಾಡಿದ್ದೇಕೆ?
ಅಡ್ರಿಯಾನಾ ಥೈಸೆನ್ (49) ವಿಚಿತ್ರ ರೋಗಕ್ಕೆ ಬಲಿಯಾದ ಮಹಿಳೆ. ಬ್ರೆಜಿಲ್ನ ನಿವಾಸಿಯಾಗಿದ್ದ ಈಕೆ, ಹೆಲ್ತ್ ಇನ್ಫ್ಲುಯೆನ್ಸರ್ ಸೋಶಿಯಲ್ ಮೀಡಿಯಾ ಮೂಲಕವಾಗಿ ಹಲವು ಆರೋಗ್ಯ ಸಲಹೆಗಳು ನೀಡುತ್ತಿದ್ದಳು. ಆಕೆಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದರು. ಮಾದಕ ವ್ಯಸನ ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ 100 ಕೆಜಿ ಇದ್ದಳು. ಹೀಗಾಗಿ ಆಕೆ ಏಕಾಏಕಿ ತೂಕ ಇಳಿಸಲು ಮುಂದಾಗಿದ್ದಾಳೆ.
ಆಕೆ ಸಮತೋಲಿತ ಆಹಾರ ಮತ್ತು ಕಠಿಣ ವ್ಯಾಯಾಮದ ಕಟ್ಟುಪಾಡುಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾಳೆ. ತೂಕ ಇಳಿಸಿಕೊಂಡ ಬಳಿಕ ಆಕೆ 49 ನೇ ವಯಸ್ಸಿನಲ್ಲಿ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾಳೆ. ಆಕೆಯ ಶವ ಸಾವೊ ಪಾಲೊದಲ್ಲಿನ ಉಬರ್ಲ್ಯಾಂಡಿಯಾ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.