ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್, ಬುರ್ಖಾ ನಿಷೇಧ! – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ!
ಮುಸ್ಲಿಂ ಮಹಿಳೆಯರು ಹಿಜಾಬ್, ಬುರ್ಖಾ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಇದೀಗ ಸ್ವಿಟ್ಜರ್ಲ್ಯಾಂಡ್ನಲ್ಲಿ ಆಡಳಿತ ನಡೆಸುತ್ತಿರುವ ಬಲಪಂಥೀಯ ಪೀಪಲ್ಸ್ ಪಕ್ಷವು ದೇಶದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ.
ಬುರ್ಖಾ ನಿಷೇಧಗೊಳಿಸಿ ಕಾನೂನು ಜಾರಿಗೆ ತರುವ ವಿಧೇಯಕಕ್ಕೆ ಸ್ವಿಟ್ಜರ್ಲ್ಯಾಂಡ್ ಕೆಳಮನೆಯಾದ ನ್ಯಾಷನಲ್ ಕೌನ್ಸಿಲ್ನಲ್ಲಿ ಅಂಗೀಕಾರ ದೊರೆತಿದೆ. ಹಿಜಾಬ್ ನಿಷೇಧದ ವಿಧೇಯಕಕ್ಕೆ ಕೆಳಮನೆಯಲ್ಲಿ ಅಂಗೀಕಾರ ದೊರೆಕುವ ಮೂಲಕ ಇನ್ಮುಂದೆ ಇದು ಫೆಡರಲ್ ಕಾನೂನು ಆಗಿ ಜಾರಿಗೊಳ್ಳಲಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಹಿಜಾಬ್ ಅಥವಾ ಬುರ್ಖಾ ಧರಿಸಿದರೆ 1,100 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸ್ವಿಸ್ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ನಿಧನ..! – ಟ್ರಂಪ್ ಪುತ್ರನ ಟ್ವಿಟರ್ ಖಾತೆಯಲ್ಲೇ ಸಾವಿನ ಪೋಸ್ಟ್!
ಮುಸ್ಲಿಮ್ ವುಮೆನ್ಸ್ ಗ್ರೂಪ್ ನ ವಕ್ತಾರೆ ಇನೆಸ್ ಎಲ್ ಶಿಕ್ ಈ ನಿಷೇಧದ ಬಗ್ಗೆ ಎಎಫ್ ಪಿ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದು, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೇವಲ 30 ಮಹಿಳೆಯರು ಹಿಜಾಬ್ ಧರಿಸುತ್ತಾರೆ. ಆದರೆ ಸರ್ಕಾರ ಇಡೀ ದೇಶಾದ್ಯಂತ ಮುಸ್ಲಿಂ ವಿರೋಧಿ ಭಾವನೆಯನ್ನು ಹರಡುವ ನಿಟ್ಟಿನಲ್ಲಿ ನಿಷೇಧ ಕಾನೂನನ್ನು ಜಾರಿಗೆ ತಂದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷೇಧ ಕಾಯ್ದೆ ಜಾರಿಯಾಗುವ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲೂ ಮೂಗು, ಬಾಯಿ ಹಾಗೂ ಕಣ್ಣು ಮುಚ್ಚುವ ಹಿಜಾಬ್ ಧರಿಸಲು ಅವಕಾಶವಿಲ್ಲ. ಪೂರ್ಣ ಪ್ರಮಾಣದ ಬುರ್ಖಾ ಧರಿಸುವ ಪದ್ಧತಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇಲ್ಲ. ಆದರೆ ಬೆಲ್ಚಿಯಂ, ಫ್ರಾನ್ಸ್ ದೇಶಗಳು ಹಿಜಾಬ್ ನಿಷೇಧಿಸಿದಂತೆ ನಾವೂ ಕೂಡಾ ಕೆಲವು ಮಾನದಂಡಗಳನ್ನು ಜಾರಿಗೊಳಿಸಿದ್ದೇವೆ ಎಂದು ಸ್ವಿಟ್ಜರ್ ಲ್ಯಾಂಡ್ ತಿಳಿಸಿದೆ.