ದೇಹ ಹೊಕ್ಕಿದ ಮೇಲೆ 6 ವಾರಗಳವರೆಗೂ ರೋಗ ಲಕ್ಷಣ ಇರುವುದಿಲ್ಲ – ನಿಧಾನವಾಗಿ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ ನಿಫಾ ವೈರಸ್
ಕೇರಳದಲ್ಲಿ ನಿಫಾ ವೈರಸ್ ಭೀತಿ ಹುಟ್ಟಿಸಿದೆ. ಪ್ರಾರಂಭದಲ್ಲಿ ಮಾಮೂಲಿ ನೆಗಡಿ, ಕೆಮ್ಮು, ತಲೆನೋವು ಜ್ವರ, ಸುಸ್ತು ಆದ ಹಾಗೆ ಅನಿಸುತ್ತದೆ. ವೈರಸ್ ದೇಹ ಪ್ರವೇಶಿಸಿದ ಎರಡರಿಂದ ಆರು ವಾರದವರೆಗೆ ಯಾವುದೇ ರೋಗದ ಲಕ್ಷಣಗಳು ಕಾಣಿಸುವುದಿಲ್ಲ. ಇದಾದ ನಂತರ ದೇಹ ಹೊಕ್ಕಿರುವ ವೈರಸ್ ಸೋಂಕು ಮಾರಣಾಂತಿಕವಾಗಿ ಕಾಡಲಿದೆ.
ಇದನ್ನೂ ಓದಿ: ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ನಿಫಾ ವೈರಸ್ ಕಂಟಕ – ಮಕ್ಕಳ ವಿಚಾರದಲ್ಲಿ ಪೋಷಕರಿಗೂ ಇರಲಿ ಎಚ್ಚರ..!
ಜ್ವರ ಬಂದರೆ ಗಾಬರಿಯಾಗುವ ಅವಶ್ಯಕತೆಯಿಲ್ಲ. ಹಾಗಂತಾ ಪರೀಕ್ಷೆ ಮಾಡದೆ ಇರುವುದು ಕೂಡಾ ಒಳ್ಳೆಯದಲ್ಲ. ಎಲ್ಲಾ ಜ್ವರ ನಿಫಾ ವೈರಸ್ ಕಾರಣಕ್ಕೂ ಬರುವುದಿಲ್ಲ. ಹಾಗಂತಾ ಸ್ವಯಂ ಔಷಧಿ ತೆಗೆದುಕೊಳ್ಳುವುದು ಸರಿಯಲ್ಲ. ಇನ್ನು ನಿಫಾ ವೈರಸ್ ಲಕ್ಷಣಗಳು ಏನು ಅನ್ನುವುದನ್ನು ತಿಳಿದುಕೊಳ್ಳಲೇಬೇಕು.
ನಿಫಾ ವೈರಸ್ ಲಕ್ಷಣಗಳು:
ನಿಫಾ ವೈರಸ್ ಸೋಂಕಿನ ಲಕ್ಷಣಗಳೆಂದರೆ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ.
ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ.
ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ.
ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ.
ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ಸೋಂಕಿತರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು.
ನಿಫಾ ವೈರಸ್ ತಡೆಯಲು ಸಲಹೆಗಳು:
ನಿಫಾ ವೈರಸ್ ಹರಡುವುದನ್ನು ತಡೆಯಲು ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವುದು ಅತಿ ಮುಖ್ಯ.
ಆಗಾಗ ಕೈ ತೊಳೆಯಬೇಕು. ಮಕ್ಕಳಿಗೂ ಈ ರೀತಿ ಮಾಡುವಂತೆ ಪೋಷಕರು ಹೇಳಿಕೊಡಬೇಕು. ಯಾವುದಾದರೂ ವಸ್ತುವನ್ನು ತಿನ್ನುವ ಮೊದಲು ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಬೇಕು.
ವಾಶ್ರೂಮ್ ಬಳಸಿದ ನಂತರ ಹ್ಯಾಂಡ್ ವಾಶ್ ಅಥವಾ ಸೋಪಿನಿಂದ ಕೈಗಳನ್ನು ತೊಳೆಯಬೇಕು
ಮಾರುಕಟ್ಟೆಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಪಾಡಿಕೊಳ್ಳಬೇಕು
ಮಕ್ಕಳು ಮಾಸ್ಕ್ ಧರಿಸಬೇಕು.