ಮೊದಲ ಪ್ರೀತಿಗೆ ಮನೆಯವರಿಂದ ಸಿಕ್ಕಿದ್ದು ಬೈಗುಳ –ಲವ್ ಸ್ಟೋರಿ ಬಗ್ಗೆ ಬಾಯ್ಬಿಟ್ಟ ನಟಿ ಸಾಯಿಪಲ್ಲವಿ

ಮೊದಲ ಪ್ರೀತಿಗೆ ಮನೆಯವರಿಂದ ಸಿಕ್ಕಿದ್ದು ಬೈಗುಳ –ಲವ್ ಸ್ಟೋರಿ ಬಗ್ಗೆ ಬಾಯ್ಬಿಟ್ಟ ನಟಿ ಸಾಯಿಪಲ್ಲವಿ

ಡಿಂಪಲ್ ಬ್ಯೂಟಿ, ಸಿಂಪಲ್ ಸ್ವೀಟಿ ಸಾಯಿ ಪಲ್ಲವಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಆದರೆ, ಅಭಿಮಾನಿಗಳು ಕೇಳುವುದು ಒಂದೇ ಪ್ರಶ್ನೆ. ಗುಂಗುರು ಕೂದಲ ಚೆಲುವೆಗೆ ಮದುವೆ ಯಾವಾಗ ಎಂದು. ಹೀಗೆ ಕೇಳುತ್ತಿರುವಾಗಲೇ ನಟಿ ಸಾಯಿಪಲ್ಲವಿಯ ಲವ್ ಸ್ಟೋರಿ ಸೀಕ್ರೆಟ್ ರಿವೀಲ್ ಆಗಿದೆ. ಇದೇ ವಿಚಾರಕ್ಕೆ ಸಾಯಿ ಪಲ್ಲವಿ ಮದುವೆ ವಿಚಾರ ಎತ್ತಿದರೆ ಸಾಕು ಫುಲ್ ಟೆನ್ಸನ್ ಮಾಡಿಕೊಳ್ಳುತ್ತಾರಂತೆ.

ಇದನ್ನೂ ಓದಿ:  ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಇರಾ ಖಾನ್ – ಆಮಿರ್ ಖಾನ್ ಮಗಳ ಮದುವೆಗೆ ಸಕಲ ಸಿದ್ಧತೆ

ನಟಿ ಸಾಯಿಪಲ್ಲವಿಯ ಮದುವೆ ಯಾವಾಗ ಎಂದು ಫ್ಯಾನ್ಸ್ ಕೇಳುತ್ತಿರುವ ಈ ಹೊತ್ತಿನಲ್ಲಿ, ಈಕೆಯ ಬಾಲ್ಯದ ಲವ್ ಮ್ಯಾಟರ್ ಬಹಿರಂಗಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು  ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಮದುವೆಯಾಗುತ್ತಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ, ಮದುವೆ ವಿಚಾರದ ಬಗ್ಗೆ ಒಂದು ಮಾತು ಹೇಳುತ್ತಿಲ್ಲ. 1990ರಲ್ಲಿ ಹುಟ್ಟಿರೋ ನಟಿ ಸಾಯಿ ಪಲ್ಲವಿಗೆ ಈಗ 33 ವರ್ಷದ ಅವಿವಾಹಿತೆ. ಕಳೆದ ವರ್ಷ ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಮನೆಯವರೇ ಸಾಯಿ ಪಲ್ಲವಿಗೆ ತಕ್ಕ ವರನನ್ನು ಹುಡುಕುತ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಹೀಗಿರುವಾಗಲೇ ಸಾಯಿಪಲ್ಲವಿ ವಿಚಾರವಾಗಿ ಬಾಲ್ಯದ ಘಟನೆಯೊಂದು ಈಗ ಸುದ್ದಿಯಾಗಿದೆ. ಬಾಲ್ಯದಲ್ಲಿಯೇ ನಟಿ ಪ್ರೇಮಪಾಶಕ್ಕೆ ಸಿಲುಕಿ ಪ್ರೇಮ ಪತ್ರ ಬರೆದಿದ್ದರಂತೆ. ಆದರೆ ಈ ಪ್ರೇಮ ಪತ್ರದ ವಿಷಯ ಮನೆಯವರಿಗೆ ತಿಳಿದು ಸಾಯಿಪಲ್ಲವಿ ಅವರನ್ನು ತೀವ್ರವಾಗಿ ಬೈದಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮ, ಮದುವೆ ಎಂದರೆ ಉಸಾಬರಿಯೇ ಬೇಡ ಎನ್ನುವ ಮಟ್ಟಿಗೆ ಹೋಗಿದ್ದಾರಂತೆ ಸಾಯಿಪಲ್ಲವಿ. ಬಾಲ್ಯದಲ್ಲಿ ಪ್ರೀತಿಯ ವಿಚಾರದಲ್ಲಿ ಸೋಲನ್ನು ಕಂಡಿದ್ದೇನೆ ಎಂದು ಸ್ವತಃ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Sulekha