ಏಷ್ಯಾಕಪ್ ಟೂರ್ನಿಯ 2023ರ ಫೈನಲ್ ತಲುಪಿದ ಟೀಮ್ ಇಂಡಿಯಾ – ಪ್ರಶಸ್ತಿ ಸುತ್ತಿನಲ್ಲಿ ಭಾರತಕ್ಕೆ ಯಾರಾಗ್ತಾರೆ ಎದುರಾಳಿ?
ಏಷ್ಯಾಕಪ್ ಟೂರ್ನಿಯ 2023ರ ಫೈನಲ್ ತಲುಪಿದ ಮೊದಲ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ. ಸೂಪರ್-4 ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಭಾರತ ತಂಡವು ಟೂರ್ನಮೆಂಟ್ನ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ಆಡಲಿದ್ದು, ಎಂಟನೇ ಪ್ರಶಸ್ತಿಗಾಗಿ ಹೋರಾಡಲಿದೆ.
ಇದನ್ನೂ ಓದಿ: ಸ್ಪಿನ್ ಬೌಲರ್ಗಳ ಮುಂದೆ ಮತ್ತೆ ಎಡವಿದ ಟೀಮ್ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳು – ಗಿಲ್ಗೆ ಪಾಠ ಮಾಡಿದ ಗಂಭೀರ್
ಏಷ್ಯಾಕಪ್ ಟೂರ್ನಿಯ 2023ರ ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ನಡೆಯಲಿದೆ. ಭಾರತದ ಫೈನಲ್ ಎದುರಾಳಿಯಾಗಲು ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾಕ್ಕೆ ಅವಕಾಶವಿದೆ. ಶ್ರೀಲಂಕಾದ ಸ್ಪಿನ್ ದಾಳಿಯ ವಿರುದ್ಧ ಕೇವಲ 213 ರನ್ ಗಳಿಸಿದ ಹೊರತಾಗಿಯೂ ಟೀಂ ಇಂಡಿಯಾ 41 ರನ್ ಗಳಿಂದ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದೆ. ಶ್ರೀಲಂಕಾದ ಸೋಲಿನೊಂದಿಗೆ ಬಾಂಗ್ಲಾದೇಶ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಈಗ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಫೈನಲ್ ಪೈಪೋಟಿ ಇದ್ದು, ಸೆಪ್ಟೆಂಬರ್ 14ರ ಗುರುವಾರದಂದು ನಡೆಯುವ ಮುಖಾಮುಖಿಯಲ್ಲಿ ಯಾವ ತಂಡ ಗೆಲ್ಲುತ್ತದೋ ಆ ತಂಡ ಫೈನಲ್ ಪ್ರವೇಶಿಸಲಿದೆ. ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಜೀವದಾನ ನೀಡಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಭಾರತವನ್ನು ಸೋಲಿಸಿದ್ದರೆ, ಆ ನಂತರ ಭಾರತವು ಬಾಂಗ್ಲಾದೇಶವನ್ನು ಸೋಲಿಸಿದ್ದರೆ, ಆಗ ಪಾಕಿಸ್ತಾನದ ಫೈನಲ್ ಹಾದಿ ಕಷ್ಟಕರವಾಗುತ್ತಿತ್ತು.