ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ – 3 ತಿಂಗಳ ಅವಧಿಯಲ್ಲಿ ಪ್ರಯಾಣ ಮಾಡಿದ ಮಹಿಳೆಯರೆಷ್ಟು?
ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಆರಂಭಿಸಿದ್ದ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಮೂರು ತಿಂಗಳು ಪೂರ್ಣಗೊಂಡಿವೆ. ಬಸ್ ಸಮಸ್ಯೆ ಸೇರಿದಂತೆ ಒಂದಿಷ್ಟು ಸಣ್ಣಪುಟ್ಟ ಯಡವಟ್ಟುಗಳು ಕಂಡು ಬಂದರೂ ಈ ಯೋಜನೆಗೆ ಯಶಸ್ಸು ಸಿಗುತ್ತಿದೆ. ರಾಜ್ಯದ ಮಹಿಳೆಯರು ಶಕ್ತಿ ಯೋಜನೆ ಸದುಪಯೋಗ ಪಡಿಸಿಕೊಂಡು ರಾಜ್ಯ ಪ್ರಯಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸ್ವಿಗ್ಗಿ, ಝೋಮಾಟೊನಂತಹ ಗಿಗ್ ಕಾರ್ಮಿಕರಿಗೆ ಜೀವ, ಅಪಘಾತ ವಿಮೆ ಜಾರಿಗೊಳಿಸಿದ ಸರ್ಕಾರ
ಜೂನ್ 11 ರಂದು ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಸದ್ಯ ಈ ಯೋಜನೆಗೆ ಸೆಪ್ಟೆಂಬರ್ 11ಕ್ಕೆ ಮೂರು ತಿಂಗಳು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ 56 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 1,300 ಕೋಟಿಗೂ ಅಧಿಕ ಉಚಿತ ಟಿಕೆಟ್ ವಿತರಣೆ ಮಾಡಲಾಗಿದೆ ಎಂದು ಕೆಎಸ್ ಆರ್‌ಟಿಸಿ ಮಾಹಿತಿ ನೀಡಿದೆ.
ಜೂನ್ 11 ರಿಂದ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳಲ್ಲಿಯೂ ಒಟ್ಟಾರೆ 56,74,10,196 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಈ ಮೂಲಕ ನಿತ್ಯ ಸರಾಸರಿ 60 ಲಕ್ಷಕ್ಕೂ ಅಧಿಕ ಮಂದಿ ಮಹಿಳೆಯರು ಈ ಯೋಜನೆ ಫಲನುಭವಿಗಳಾಗಿದ್ದಾರೆ ಎಂದು ಕೆಎಸ್ ಆರ್‌ಟಿಸಿ ಮಾಹಿತಿ ನೀಡಿದೆ.