ನಾಲ್ಕನೇ ಮದುವೆಯಾಗಲು ಮೂರನೇ ಗಂಡನನ್ನು ಕೊಂದೇ ಬಿಟ್ಲು ಪಾಪಿ! – ಹೆಂಡತಿಯ ಕರ್ಮಕಾಂಡ ಬಯಲಾಗಿದ್ದು ಹೇಗೆ ಗೊತ್ತಾ?

ನಾಲ್ಕನೇ ಮದುವೆಯಾಗಲು ಮೂರನೇ ಗಂಡನನ್ನು ಕೊಂದೇ ಬಿಟ್ಲು ಪಾಪಿ! – ಹೆಂಡತಿಯ ಕರ್ಮಕಾಂಡ ಬಯಲಾಗಿದ್ದು ಹೇಗೆ ಗೊತ್ತಾ?

ಸಣ್ಣ ಪುಟ್ಟ ವಿಚಾರಗಳಿಗೆ ಗಂಡ, ಹೆಂಡತಿ ಮಧ್ಯೆ ಜಗಳವಾಗುವುದು ಸಾಮಾನ್ಯ. ಕೆಲವೊಂದು ಬಾರಿ ಸಣ್ಣ ಜಗಳವೇ ದೊಡ್ಡದಾಗಿ ಡಿವೋರ್ಸ್‌ ತೆಗೆದುಕೊಳ್ಳುವ ಹಂತಕ್ಕೆ ಬರುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡ – ಹೆಂಡತಿ ಜಗಳ ಕೊಲೆ, ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿವೆ. ಇಲ್ಲೊಬ್ಬಳು ನಾಲ್ಕನೇ ಮದುವೆಯಾಗಲು ಮೂರನೇ ಪತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಏನಿದು ಪ್ರಕರಣ?

ಬಿಹಾರದ ಪಾಟ್ನಾ ನಿವಾಸಿ, ಅಸ್ಮೇರಿ ಖಾತೂನ್ ಉರಾಫ್ ಈ ಹಿಂದೆ ಎರಡು ಮದುವೆಯಾಗಿದ್ದಳು. ಕಾರಣಾಂತರಗಳಿಂದ ಎರಡು ವರ್ಷಗಳ ಹಿಂದೆ ಸುಭಾಷ್ ಎಂಬಾತನನ್ನು ಮೂರನೇ ಮದುವೆಯಾಗಿದ್ದಳು. ಆದರೆ ಇತ್ತೀಚೆಗೆ ಸುಭಾಷ್ ತನ್ನ ಹೆಂಡತಿಯಲ್ಲಿ ಬದಲಾವಣೆಯನ್ನು ಗಮನಿಸಿದ್ದನು. ಅವನಿಗೆ ಅವಳ ನಡವಳಿಕೆ ಇಷ್ಟವಾಗುತ್ತಿರಲಿಲ್ಲ. ಪತ್ನಿ ಅಸ್ಮೇರಿ ಪ್ರಸ್ತುತ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ಆತನಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅಸ್ಮೇರಿ ತನ್ನ ಪೋಷಕರೊಂದಿಗೆ ಸೇರಿ ಸುಭಾಷ್​ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ಜೊತೆ ಮೊಸರು ಕೇಳಿದ್ದಕ್ಕೆ ಮಾರಾಮಾರಿ.. – ಹೋಟೆಲ್‌ ಸಿಬ್ಬಂದಿಯ ರೌಡಿಸಂಗೆ ಅಮಾಯಕ ಬಲಿ!

ಮೃತ ಸುಭಾಷ್, ಅಸ್ಮೆರಿಗೆ ಮೂರನೇ ಪತಿಯಾಗಿದ್ದ. ಆತ ಮದ್ಯವ್ಯಸನಿಯಾಗಿದ್ದರಿಂದ ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದಲ್ಲದೆ, ಅಸ್ಮೆರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತದೆ. ಘಟನೆಯ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಫುಲ್ವಾರಿ ಪೊಲೀಸರು ಬಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

suddiyaana