ತಂಗಿ ಜೊತೆ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಖ್ಯಾತ ನಟಿ – ಅಪರ್ಣಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

ತಂಗಿ ಜೊತೆ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಖ್ಯಾತ ನಟಿ – ಅಪರ್ಣಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

ಮಲಯಾಳಂ ಖ್ಯಾತ ನಟಿ ಅಪರ್ಣಾ ನಾಯರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ವಿಚಾರದ ಬಗ್ಗೆ ದಿನಕ್ಕೊಂದು ವಿಚಾರ ಹೊರಬೀಳುತ್ತಿದೆ. ಈ ಮೊದಲು ಅಪರ್ಣಾ ನಾಯರ್ ಸಾವಿಗೆ ಗಂಡನ ಕುಡಿತವೇ ಕಾರಣ ಎಂದು ಹೇಳಲಾಗುತ್ತಿತ್ತು. ಇದೀಗ ಅಪರ್ಣಾ ಸಾವಿಗೆ ಕಾರಣ ತಂಗಿಯೇ ಎನ್ನಲಾಗುತ್ತಿದೆ. ಅಪರ್ಣಾ ತಂಗಿ ಮತ್ತು ಅಪರ್ಣಾ ಗಂಡನ ನಡುವೆ ಇರುವ ಅನೈತಿಕ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಟಿಯನ್ನ ಮದುವೆಯಾಗುವ ಮೂಲಕ ಭಾರೀ ಸುದ್ದಿಯಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅರೆಸ್ಟ್

ಕಳೆದ ವಾರವಷ್ಟೇ ನೇಣಿಗೆ ಶರಣಾಗಿದ್ದ ಮಲಯಾಳಂ ಖ್ಯಾತ ನಟಿ ಅಪರ್ಣಾ ನಾಯರ್ ಸಾವಿನ ಬಗ್ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅಪರ್ಣಾ ಸಾವಿಗೆ ಪತಿಯ ಮತ್ತೊಂದು ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಸ್ವತಃ ಅಪರ್ಣಾ ತಂಗಿಯ ಜೊತೆಯೇ ಪತಿ ಅಫೇರ್ ಇಟ್ಟುಕೊಂಡಿದ್ದಕ್ಕೆ ಅಪರ್ಣಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಅಪರ್ಣಾ ತಂಗಿಯೊಂದಿಗೆ ಪತಿಯು ಸಂಬಂಧ ಇಟ್ಟುಕೊಂಡಿರುವ ವಿಚಾರವಾಗಿ ಹಲವಾರು ಬಾರಿ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ಕುರಿತು ಪೊಲೀಸ್ ಠಾಣೆಗೂ ಅಪರ್ಣಾ ದೂರು ನೀಡಿದ್ದರು. ಆದರೂ, ಅಕ್ಕನ ಗಂಡನ ಜೊತೆ ತಂಗಿ ಸಂಬಂಧ ಮುಂದುವರೆಸಿದ್ದಳು. ಜೊತೆಗೆ ಅಪರ್ಣಾ ಪತಿ ಕೂಡಾ ತನ್ನ ಹೆಂಡತಿಯ ತಂಗಿಯ ಜೊತೆಯೇ ಅಫೇರ್ ಮುಂದುವರೆಸಿದ್ದ. ಇಲ್ಲಿ ತಂಗಿಯೂ ಅಕ್ಕನ ಸಂಸಾರಕ್ಕೆ ಮುಳ್ಳಾಗಿದ್ದಳು. ಇತ್ತ ಪತಿ ಕೂಡಾ ಅಕ್ಕನ ಜೊತೆ ಮದುವೆಯಾಗಿ ನಂತರ ಪತ್ನಿ ತಂಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ತಂಗಿ ಮತ್ತು ಗಂಡ ಇಬ್ಬರು ಸೇರಿ ಮಾಡಿರುವ ದ್ರೋಹಕ್ಕೆ ಮನನೊಂದು ಅಪರ್ಣಾ ನಾಯರ್ ಮನನೊಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅಪರ್ಣಾ ಅವರ ಪತಿಯ ಕುಡಿತವೇ ಸಾವಿಗೆ ಕಾರಣವೆಂದು ಎಫ್.ಐ.ಆರ್ ನಲ್ಲಿ ದಾಖಲಾಗಿತ್ತು. ಗಂಡನ ಕುಡಿತದ ಚಟಕ್ಕೆ ಅಪರ್ಣಾ ಬೇಸತ್ತು ಹೋಗಿದ್ದರಿಂದ, ಈ ವಿಚಾರವನ್ನು ಹಲವಾರು ಬಾರಿ ತಮ್ಮ ತಾಯಿಯ ಜೊತೆ ಹಂಚಿಕೊಂಡಿದ್ದರಂತೆ. ಸಾವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು. ಆಗಸ್ಟ್ 31ರ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವುದರ ಹೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ತಿರುವನಂತಪುರಂ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ನಟಿ ಅಗಲಿದ್ದಾರೆ..

suddiyaana