ಪ್ರಿಯಕರನ ಜೊತೆ ಮದುವೆಯಾಗಿದ್ದಕ್ಕೆ ಹೆತ್ತವರ ಸಿಟ್ಟು – ಮಗಳು ಬದುಕಿದ್ದಾಗಲೇ ಅಂತ್ಯಸಂಸ್ಕಾರ ಮಾಡಿ ಪಿಂಡ ಬಿಟ್ಟ ಹೆತ್ತವರು

ಮಗಳು ಮದುವೆ ವಯಸ್ಸಿಗೆ ಬಂದಿದ್ದಳು. ಮನೆಯವರು ತಾವು ನೋಡಿದ ಹುಡುಗನ ಜೊತೆ ಮದುವೆ ಮಾಡಿಸಲು ಸಿದ್ಧತೆ ನಡೆಸಿದ್ದರು. ಆದರೆ, ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಪ್ರೀತಿಸಿದವನ ಜೊತೆ ಮದುವೆಯಾಗಲು ಮನೆಯವರ ವಿರೋಧ ಜೋರಾಗಿತ್ತು. ಹೆತ್ತವರನ್ನೇ ಧಿಕ್ಕರಿಸಿ ನಡೆದಿದ್ದಳು. ಇದರಿಂದ ರೊಚ್ಚಿಗೆದ್ದ ಹೆತ್ತವರು ಸಾಕಿ ಸಲಹಿ ಮುದ್ದು ಮಾಡಿ ಬೆಳೆಸಿದ ಮಗಳು ಬದುಕ್ಕಿದ್ದಾಗಲೇ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಿದ್ದಾರೆ.
ಇದನ್ನೂ ಓದಿ: ಗಂಡನನ್ನು ಬಿಟ್ಟು ಇಬ್ಬರು ಪುರುಷರ ಜೊತೆ ಆಂಟಿಯ ತುಂಟಾಟ – ಪ್ರೇಯಸಿ ಮತ್ತು ಮಗನನ್ನೇ ಕೊಂದ ಪ್ರಿಯಕರ
ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಇಂಥಾ ಒಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ, ಔಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೇಮಲ್ ಗ್ರಾಮದ ಮುನಾ ಮಲಿಕ್ ಅವರ ಪುತ್ರಿ 20 ವರ್ಷದ ದೀಪಾಂಜಲಿ ಮಲಿಕ್ತನ್ನ ಪ್ರಿಯಕರ ರಾಜೇಂದ್ರ ಮಲಿಕ್ ಅವರನ್ನು ಆಗಸ್ಟ್ 28 ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದಳು. ಇದು ಸಹಜವಾಗಿಯೇ ಹೆತ್ತವರ ಮನಸಿಗೆ ನೋವಾಗಿತ್ತು. ತಮ್ಮ ಮಾತು ಧಿಕ್ಕರಿಸಿದ ಮಗಳ ಮೇಲೆ ಹೆತ್ತವರಿಗೆ ವಿಪರೀತ ಸಿಟ್ಟು ಕೂಡಾ ಬಂದಿತ್ತು. ಕೊನೆಗೂ ಹೆತ್ತವರು ಒಂದು ನಿರ್ಧಾರಕ್ಕೆ ಬಂದಿದ್ದರು. ಬದುಕಿದ್ದ ಮಗಳು ಸತ್ತಿದ್ದಾಳೆ ಎಂದು ಘೋಷಿಸಿದ ಹೆತ್ತವರು, ಮಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ಜೊತೆಗೆ ಪಿಂಡಪ್ರಧಾನ ಕೂಡಾ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ದೀಪಾಂಜಲಿಯ ತಂದೆ ಮುನಾ ಮಲಿಕ್, ನಮ್ಮ ಮಗಳು ರಾಜೇಂದ್ರ ಜತೆ ಓಡಿ ಹೋಗಿದ್ದಾಳೆ. ನಾವು ಅವರ ವಿರುದ್ಧ ಔಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಪೊಲೀಸರು ವಿಷಯ ತಿಳಿದು ನಮ್ಮ ಮಗಳನ್ನು ನಮಗೆ ಒಪ್ಪಿಸಿದರು. ಆದರೆ ದೀಪಾಂಜಲಿ ಗ್ರಾಮದ ದೇವಸ್ಥಾನದಲ್ಲಿ ರಾಜೇಂದ್ರನನ್ನು ಮದುವೆಯಾದಳು. ಇದರಿಂದ ನಮಗೆ ತೀವ್ರ ನೋವಾಗಿದೆ. ನಾವು ಅವಳ ಅಂತಿಮ ಸಂಸ್ಕಾರವನ್ನು ಮಾಡಿದ್ದೇವೆ ಮತ್ತು ಈಗ ಅವಳು ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಹೇಳಿದ್ದಾರೆ. ನಾವು ಪಿಂಡದಾನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ, ಆಕೆಗೆ ಸೂಕ್ತನಾದ ವರನನ್ನು ಹುಡುಕಿ ಮದುವೆ ಮಾಡಬೇಕೆಂಬ ಕನಸು ಕಂಡಿದ್ದೆವು, ನಮಗೆ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ.
ಹೆತ್ತವರು ಅಂತ್ಯಸಂಸ್ಕಾರ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೀಪಾಂಜಲಿ, ನನಗೆ ಮದುವೆಯ ವಯಸ್ಸಾಗಿತ್ತು, ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಇನ್ನು ಸೊಸೆಯ ಆಗಮನದಿಂದ ಯುವಕನ ಮನೆಯಲ್ಲಿ ಸಂತಸ ತುಂಬಿದೆ ಎನ್ನಲಾಗಿದೆ.