ಬಾಹ್ಯಾಕಾಶದಲ್ಲಿರುವ ಒಟ್ಟು ಸೌರ ಮಿಷನ್ ಗಳೆಷ್ಟು? – ಯಾವ ಯಾವ ದೇಶಗಳು ಉಪಗ್ರಹಳನ್ನು ಉಡಾವಣೆ ಮಾಡಿವೆ?
ಆದಿತ್ಯ -L1, ದೇಶದ ಮೊದಲ ಸೋಲಾರ್ ಮಿಷನ್, ಶ್ರೀ ಹರಿಕೋಟಾದ ಸತೀಶ್ ಧವನ್ ಉಡಾವಣ ಕೇಂದ್ರದಿಂದ PSLV -C57 ರಾಕೆಟ್ ಮೂಲಕ ಉಡಾವಣೆಗೊಂಡು ಭೂಮಿಯ ಕೆಳಕಕ್ಷೆಗೆ ಯಶಸ್ವಿಯಾಗಿ ಸೇರಿದೆ. PSLV ರಾಕೆಟ್ ನ 57 ನೇ ಉಡಾವಣೆ ಇದಾಗಿದ್ದು ಒಟ್ಟು ಏಳು ಪೇಲೋಡ್ ಗಳನ್ನ ಹೊತ್ತ ಆದಿತ್ಯ L1 ಸ್ಪೇಸ್ ಕ್ರಾಫ್ಟ್, ಸೂರ್ಯನ ಹೊರಮೈ ಕರೊನಾ ವಲಯವನ್ನು ಅಧ್ಯಯನ ಮಾಡೋದು, ಅಲ್ಲಿನ ತಾಪಮಾನ, ಸೌರ ಜ್ವಾಲೆ, ಸೌರ ಮಾರುತಗಳ ಹೊರಹೊಮ್ಮುವಿಕೆ, ಬಾಹ್ಯಾಕಾಶ ಹವಾಮಾನದ ಬದಲಾವಣೆಗಳ ಕುರಿತಾಗಿ ಅಧ್ಯಯನ ನಡೆಸಲಿದೆ. ಭಾರತಕ್ಕಿಂತಲೂ ಮುಂಚೆ ಸೂರ್ಯನ ಕುರಿತು ಅಧ್ಯಯನ ನಡೆಸಲು ಕೆಲ ದೇಶಗಳು ಈಗಾಗಲೇ ನೌಕೆಯನ್ನು ಉಡಾವಣೆ ಮಾಡಿದೆ. ಯಾವ್ಯಾವ ದೇಶಗಳ ನೌಕೆ ಬಾಹ್ಯಾಕಾಶದಲ್ಲಿ ಇದೆ ಎಂಬುವುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಖದ ಮೇಲೆ 2 ಸೊಂಡಿಲು.. ಚೂಪಾದ ಹಲ್ಲುಗಳು.. – ಡೈನೋಸಾರ್ಗಿಂತ ಮೊದಲು ಭೂಮಿ ಮೇಲೆ ಬದುಕಿದ್ದ ದೈತ್ಯ ಜೀವಿ ಇದು!
ಈಗಾಗಲೇ ಬಾಹ್ಯಾಕಾಶದಲ್ಲಿ ಸೂರ್ಯನನ್ನು ಅನ್ವೇಷಿಸಲು ಅಮೇರಿಕ, ಯುರೋಪ್, ಜಪಾನ್ ದೇಶಗಳು ಹಲವಾರು ನೌಕೆಗಳನ್ನ ಕಳುಹಿಸಿವೆ. ಇದೀಗ ಆದಿತ್ಯ -L1 ನೌಕೆಯು ಬಾಹ್ಯಾಕಾಶದಲ್ಲಿ ಸೂರ್ಯನನ್ನು ಅನ್ವೇಷಿಸಲು ಹೊರಟ ದೇಶಗಳ ಪಟ್ಟಿಗೆ ಸೇರಲಿದೆ. 1960 ರಲ್ಲಿ NASA ಉಡಾವಣೆ ಮಾಡಿದ Pioneer 5 ಮೊದಲ ಸೌರ ನೌಕೆ ಯಾಗಿದೆ. 2018 ರಲ್ಲಿ ನಾಸಾ ಕಳುಹಿಸಿದ ಪಾರ್ಕರ್ ಸೋಲಾರ್ ಪ್ರೊಬ್, ಸೂರ್ಯನ ಕರೋನಾ ಪದರವನ್ನ ಟಚ್ ಮಾಡಿದ ಮೊದಲ ಸೋಲಾರ್ ಮಿಷನ್ ಆಗಿದೆ. ಇದೂ ಸೂರ್ಯನ ಬಗ್ಗೆ ಅತೀ ಹೆಚ್ಚಿನ ಅಧ್ಯಯನ ಮಾಡುತ್ತಿದೆ. ಸೂರ್ಯನ ತೀವ್ರ ತಾಪಮಾನವನ್ನು ಎದುರಿಸುವ ಹೀಟ್ ಶಿಲ್ಡ್ ಕವಚವನ್ನ ಪಾರ್ಕರ್ ನೌಕೆ ಒಳಗೊಂಡಿದ್ದು 2,500 ಡಿಗ್ರಿ ಫ್ಯಾರನ್ಹೀಟ್ ತಾಪಮಾನವನ್ನ ಎದುರಿಸುವ ಸಾಮರ್ಥ್ಯ ವಿದೆ. ಈಗಾಗಲೇ 20 ಕ್ಕೂ ಹೆಚ್ಚು ಸೌರ ನೌಕೆಗಳು ಬಾಹ್ಯಾಕಾಶದಲ್ಲಿ ಇದ್ದು ಇತ್ತೀಚಿನ ಸೋಲಾರ್ ಮಿಷನ್ ಗಳು ಈ ರೀತಿಯಲ್ಲಿವೆ.
- ಮಿಷನ್ -ಪ್ರಾರಂಭವಾದ ವರ್ಷ
- SOHO – 1995
- ಸ್ಟೀರಿಯೋ -2006
- ಹಿನೋಡ್ (ಸೋಲಾರ್-ಬಿ) – 2006
- SDO – 2010
- IRIS – 2013
- ಸೌರ ಆರ್ಬಿಟರ್ – 2020
ಇದಿಷ್ಟು ಸೂರ್ಯನನ್ನು ಭೂಮಿಯ ಕಡೆಯಿಂದ ನೋಡುತ್ತಿರುವ ಸೌರ ಮಿಷನ್ಗಳು..
ಆದಿತ್ಯ-L1, ಸೂರ್ಯನನ್ನ ಪೂರ್ತಿಯಾಗಿ ಅಧ್ಯಯನ ಮಾಡಲು ಸಾಧ್ಯನಾ!
ಇಸ್ರೋ ವಿಜ್ಞಾನಿಗಳ ಪ್ರಕಾರ ಆದಿತ್ಯ-L1 ನೌಕೆಯು ಸೂರ್ಯನನ್ನ ಪೂರ್ತಿಯಾಗಿ ಅಧ್ಯಯನ ಮಾಡೋವಷ್ಟು ಶಕ್ತಿಯುತವಾಗಿಲ್ಲ. ಯಾಕಂದ್ರೆ ನೌಕೆಯು L1 ಪಾಯಿಂಟ್ ನಲ್ಲಿ ಇದ್ದೂ ಸೂರ್ಯನನ್ನ ಗಮನಿಸಲಿದೆ. ಆದರೆ ಸೂರ್ಯನ ಚಟುವಟಿಕೆಗಳು ಮಲ್ಟಿ directional. ಹಾಗಾಗಿ ಸೂರ್ಯನಿಂದ ಎಲ್ಲಾ ದಿಕ್ಕುಗಳಿಗೆ ಹೊರ ಸೂಸುವ ಸೌರ ಜ್ವಾಲೆಗಳು, ಕರೋನಲ್ ಮಾಸ್ ಎಜೆಕ್ಷನ್ ನಂತಹ ಚಟುವಟಿಕೆಗಳು L1 ಪಾಯಿಂಟ್ ನಲ್ಲಿ ಕುಳಿತು ಅಧ್ಯಯನ ಮಾಡುವ ಆದಿತ್ಯ-L1 ನೌಕೆಗೆ ಕಷ್ಟ ಸಾಧ್ಯ. ಹಾಗಿದ್ದರೂ ಮೊದಲ ಪ್ರಯತ್ನದಲ್ಲಿ ಹ್ಯಾಲೋ ಕಕ್ಷೆಯನ್ನು ಸೇರಿ ಆದಿತ್ಯ ಎಲ್-1 ತನ್ನ ಕೆಲಸ ಶುರು ಮಾಡಿದರೆ ಇಸ್ರೋ ಮೊದಲ ಹಂತದ ಯಶಸ್ಸು ಸಾಧಿಸಿದಂತಾಗಲಿದೆ.. ಅಲ್ಲದೆ ಮುಂದೆ ಯಾವ ಸ್ವರೂಪದಲ್ಲಿ ಸುಧಾರಣೆಗಳೊಂದಿಗೆ ಸೌರ ಮಂಡಲದ ಅಧ್ಯಯನ ನಡೆಸಬೇಕು ಎನ್ನುವ ನಿಟ್ಟಿನಲ್ಲೂ ಇಸ್ರೋಗೆ ಬಹುಮುಖ್ಯ ಮಾಹಿತಿಯನ್ನು ಆದಿತ್ಯ ಎಲ್-1 ನೀಡುವುದು ನಿಶ್ಚಿತವಾಗಿದೆ.