ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ – ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಮಳೆ ಅಡ್ಡಿ!
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಆರಂಭವಾಗಿದೆ. ಭಾರತ ಟಾಸ್ ಗೆದ್ದು, ಬ್ಯಾಟಿಂಗ್ ಆರಂಭಿಸಿದೆ. ಟೀಮ್ ಇಂಡಿಯಾ 48 ರನ್ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಬೌಂಡರಿ ಬಾರಿಸಿದರು. ಇನ್ನು ಎರಡನೇ ಓವರ್‌ನಲ್ಲಿ ನಸೀಂ ಶಾ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ ಮೂರನೇ ಓವರ್‌ನಲ್ಲಿ ಶಾಹೀನ್ ಅಫ್ರಿದಿಗೆ ರೋಹಿತ್ ಶರ್ಮಾ ಮತ್ತೊಂದು ಬೌಂಡರಿ ಬಾರಿಸಿದರು. ಆದರೆ ನಸೀಂ ಶಾ ಎದುರು 4ನೇ ಓವರ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದ್ದಾರೆ.
ಇದನ್ನೂ ಓದಿ: ಭಾರತ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ – ಟೀಮ್ ಇಂಡಿಯಾಕ್ಕೆ ಶುಭಹಾರೈಸಿದ ಕ್ರಿಕೆಟ್ ಅಭಿಮಾನಿಗಳು
ಉಭಯ ತಂಡಗಳ ನಡುವಿನ ಕಳೆದ 5 ಮುಖಾಮುಖಿಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, ಪಾಕಿಸ್ತಾನ 1 ಪಂದ್ಯ ಜಯಿಸಿದೆ. ಈ ಪಂದ್ಯದಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ. ಎರಡೂ ತಂಡಗಳು ಪರಸ್ಪರ ಎದುರಾಗುವಾಗ ಭಾರತದ ಬ್ಯಾಟರ್‌ಗಳು ಹಾಗೂ ಪಾಕಿಸ್ತಾನ ವೇಗಿಗಳ ನಡುವಿನ ಪೈಪೋಟಿಯೇ ಹೆಚ್ಚು ಆಸಕ್ತಿ ಕೆರಳಿಸಲಿದೆ. ಈ ಸಲದ ಸನ್ನಿವೇಶವೂ ವಿಭಿನ್ನವಾಗಿಲ್ಲ. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಗೆ ಶಾಹೀನ್ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್ ಸವಾಲೆಸೆಯಲಿದ್ದಾರೆ.
ಇನ್ನು ಹೈವೋಲ್ಟೆಜ್ ಮ್ಯಾಚ್‌ಗೆ ಮಳೆರಾಯ ಅಡ್ಡಿಪಡಿಸುತ್ತಿದ್ದಾನೆ. ಪಂದ್ಯ ಆರಂಭಕ್ಕೂ ಮುನ್ನ ಅಲ್ಲಿ ತುಂತೂರು ಮಳೆ ಸುರಿದಿತ್ತು. ಮ್ಯಾಚ್ ಸ್ಟಾರ್ಟ್ ಆದ ಮೇಲೂ ಕೂಡ ಮಳೆ ಸುರಿದ್ದಿದ್ದು, ಪಂದ್ಯಕ್ಕೆ ಅಡಚಣೆ ಉಂಟಾಗಿತ್ತು. ಹೀಗಾಗಿ ಕೆಲ ಕಾಲ ಮ್ಯಾಚ್ ಮುಂದೂಡಲಾಗಿತ್ತು. ಮಳೆ ನಿಂತ ಬಳಿಕ ಮತ್ತೆ ಮ್ಯಾಚ್ ಪ್ರಾರಂಭವಾಗಿದೆ.