ಮಹಿಳೆಯರು ಕುಡಿಯದೇ ಇದ್ರೆ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಪ್ಪಿಸಬಹುದು! – ಇಟಲಿ ಪ್ರಧಾನಿ ಪತಿ ವಿವಾದಾತ್ಮಕ ಹೇಳಿಕೆ
ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಪತಿ ಆ್ಯಂಡ್ರಿಯಾ ಗಿಯಾಂಬ್ರುನೋ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಿಳೆಯರು ಹೆಚ್ಚು ಕುಡಿಯದಿದ್ದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಪ್ಪಿಸಬಹುದು ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಿಯಾಂಬ್ರುನೋ ಮಹಿಳೆಯರ ಕುರಿತು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅತ್ಯಾಚಾರಿಗಳನ್ನು ತೋಳಗಳು ಎಂದು ಕರೆಯುವ ಮೂಲಕ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ನಾವು ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – 8 ವರ್ಷಗಳಷ್ಟು ಕಡಿಮೆಯಾಗುತ್ತಿದೆ ಜನರ ಆಯಸ್ಸು!
ಸಂದರ್ಶನದಲ್ಲಿ ಮಾತನಾಡಿದ ಆ್ಯಂಡ್ರಿಯಾ ಗಿಯಾಂಬ್ರುನೋ ಮಹಿಳೆಯರು ಮೊದಲಿಗೆ ಪಾರ್ಟಿಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಏಕೆಂದರೆ ನೀವು ಪಾರ್ಟಿಗೆ ಹೋದರೆ ಅಲ್ಲಿ ಕುಡಿದು ಕುಣಿಯಲು ಶುರು ಮಾಡುತ್ತೀರಾ. ಒಂದು ಸಲ ನೀವು ನಿಮ್ಮ ಪ್ರಜ್ಞೆ ಕಳೆದುಕೊಂಡರೆ ನೀವು ಅಪಾಯಕ್ಕೆ ಸಿಲುಕುತ್ತೀರಾ. ಆಗ ನೀವು ತೋಳಗಳಿಗೆ ಆಹಾರವಾಗುತ್ತೀರಾ. ಒಂದು ವೇಳೆ ನೀವು ಎಲ್ಲಿಗೂ ಹೋಗದೆ ಇದ್ದರೆ ಈ ರೀತಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಇತ್ತ ಪ್ರಧಾನಿ ಅವರ ಪತಿ ಆ್ಯಂಡ್ರಿಯಾ ಗಿಯಾಂಬ್ರುನೋ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕಿಡಿಕಾರಿರುವ ವಿಪಕ್ಷದ ಸದಸ್ಯರು ಇದು ಸ್ವೀಕಾರಾರ್ಹವಲ್ಲ ಮತ್ತು ಪುರುಷ ಪ್ರಧಾನ ಸಮಾಜದ ಪರಿಕಲ್ಪನೆ ಹೊಂದಿದೆ. ಮಹಿಳೆಯರಿಗೆ ಜಾಗರೂಕರಾಗಿರಬೇಕು ಎಂದು ಹೇಳುವ ಗಿಯಾಂಬ್ರುನೋಗೆ ಸ್ರ್ತೀಯರಿಗೆ ಹೇಗೆ ಗೌರವಿಸಬೇಕು ಎಂಬುದರ ಕುರಿತು ನಾವು ಅವರಿಗೆ ಶಿಕ್ಷಣ ನೀಡುತ್ತೇವೆ ಎಂದು ವಿಪಕ್ಷದ ಸದಸ್ಯರು ಕಿಡಿಕಾರಿದ್ದಾರೆ.