ವಾಹನ ಸವಾರರಿಗೆ ಬಿಗ್ ಶಾಕ್! – ಇಂದಿನಿಂದಲೇ ಟೋಲ್ ದರ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಈಗ ಬೆಲೆ ಏರಿಕೆಯಿಂದಾಗಿ ಜನರು ಕಂಗೆಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗುವಾಗ ಜೇಬು ತುಂಬಾ ಹಣ ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆಯಿಂದ ಕಂಗೆಂಟ್ಟಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ನೆಲಮಂಗಲ-ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲ ದೇವಿಹಳ್ಳಿ ಎಕ್ಸ್ ಪ್ರೆಸ್ ಹೈವೇ ಟೋಲ್ ಶುಲ್ಕ ಇಂದಿನಿಂದ (ಶುಕ್ರವಾರ) ಹೆಚ್ಚಳವಾಗಲಿದೆ.
ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ!
ಎಕ್ಸ್ ಪ್ರೆಸ್ ಹೈವೇ ಟೋಲ್ ಶುಲ್ಕ ಇಂದಿನಿಂದಲೇ ಜಾರಿಗೆ ಬಂದಿದೆ. ಲಘು ವಾಹನಗಳಿಗೆ ಬರೋಬ್ಬರಿ 5 ರೂಪಾಯಿ, ಹೆವಿ ವಾಹನಗಳಿಗೆ 10 ರೂ. ಹೆದ್ದಾರಿ ಪ್ರಾಧಿಕಾರ ಹೆಚ್ಚಳ ಮಾಡಿದ್ದು, ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ತೆರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಟೋಲ್ ದರ ಹೆಚ್ಚಳದಿಂದಾಗಿ ರೈತಾಪಿ ಜನರ ಮೇಲೆ ಸಹ ಸಾಕಷ್ಟು ಪರಿಣಾಮ ಬೀರುತ್ತದೆ. ದಿಢೀರ್ ಟೋಲ್ ದರದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ.
ಯಾವುಕ್ಕೆ ಎಷ್ಟು ಶುಲ್ಕ..?
ಬಸ್ ಟ್ರಕ್ ಹಳೆ ದರ: 185 – ಸಿಂಗಲ್ ವೇ, 275 – ಡಬಲ್ ವೇ
ಹೊಸ ದರ: 200 – ಸಿಂಗಲ್ ವೇ, 300 – ಡಬಲ್ ವೇ
ಕಾರ್/ಜೀಪು ಹಳೆ ದರ: 50 – ಸಿಂಗಲ್, 80 – ಡಬಲ್
ಹೊಸ ದರ: 55 – ಸಿಂಗಲ್, 85 – ಡಬಲ್
ಎಲ್ಸಿವಿ ಹಳೆ ದರ: 90 – ಸಿಂಗಲ್, 135 – ಡಬಲ್
ಹೊಸ ದರ: 100 – ಸಿಂಗಲ್, 150 – ಡಬಲ್
ಮಲ್ಟಿ ಆಕ್ಸಲ್ ಹಳೆ ದರ: 295 – ಸಿಂಗಲ್, 440 – ಡಬಲ್
ಹೊಸ ದರ: 320 – ಸಿಂಗಲ್, 485 – ಡಬಲ್