ಇಂದಿನಿಂದ ಈ ಮಾರ್ಗದಲ್ಲಿ ವಾರದ ಐದು ದಿನ ಹೆಚ್ಚುವರಿ ಮೆಟ್ರೋ ಸೇವೆ!  

ಇಂದಿನಿಂದ ಈ ಮಾರ್ಗದಲ್ಲಿ ವಾರದ ಐದು ದಿನ ಹೆಚ್ಚುವರಿ ಮೆಟ್ರೋ ಸೇವೆ!  

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿಯಿಂದ ಜನರು ಬೇಸತ್ತು ಮೆಟ್ರೋವನ್ನೇ ಸಂಚಾರಕ್ಕೆ ಅವಲಂಭಿಸಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಮೆಟ್ರೋದಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದಿದೆ. ಇಂದಿನಿಂದ (ಶುಕ್ರವಾರ) ಹೆಚ್ಚುವರಿ ರೈಲುಗಳ ಸೇವೆ ಲಭ್ಯವಾಗಲಿದೆ.

ನಮ್ಮ ಮೆಟ್ರೋ ಸಿಲಿಕಾನ್‌ ಸಿಟಿಯ ಜನರ ಸಂಚಾರ ಜೀವನಾಡಿಯಾಗಿದೆ. ಹೀಗಾಗಿ ಆಫೀಸ್‌, ಕಾಲೇಜ್‌ಗೆ ಮೆಟ್ರೋವನ್ನೇ ಅನೇಕರು ಅವಲಂಭಿಸಿದ್ದಾರೆ. ಪೀಕ್‌ ಅವರ್‌ಗಳಲ್ಲಿ ಮೆಟ್ರೋದಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುತ್ತದೆ. ಇದನ್ನು ನಿಯಂತ್ರಿಸಲು ಹೆಚ್ಚುವರಿ ರೈಲುಗಳ ಸೇವೆಯನ್ನು ನೀಡಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಇಂದಿನಿಂದ ಈ ಹೆಚ್ಚುವರಿ ಮೆಟ್ರೋ ರೈಲ್ವೇ ಸೇವೆ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಚಂದಮಾಮನ ಅಂಗಳದಲ್ಲಿ ಪುಟ್ಟ ಮಗುವೊಂದು ಆಡುತ್ತಿದೆ! – ವಿಡಿಯೋ ಹಂಚಿಕೊಂಡ ಇಸ್ರೋ

ಹೆಚ್ಚುವರಿ ರೈಲ್ವೇ ಸೇವೆ ಸದ್ಯ ನೇರಳೆ ಮಾರ್ಗದಲ್ಲಿ ಮಾತ್ರ ಸಿಗಲಿದೆ. ಅದು ಕೂಡ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮಹಾತ್ಮ ಗಾಂಧಿ ರೋಡ್‌ ಮೆಟ್ರೋ ನಿಲ್ದಾಣಗಳ ನಡುವೆ ಪ್ರಾಯೋಗಿಕವಾಗಿ ಹೆಚ್ಚುವರಿ ರೈಲುಗಳು ಓಡಾಡಲಿವೆ. ಮುಂದೆ ಇತರೆ ಮಾರ್ಗಗಳಲ್ಲಿಯೂ ಕೂಡ ಹೆಚ್ಚುವರಿ ಮೆಟ್ರೋ ರೈಲುಗಳ ಸೇವೆಯನ್ನು ನೀಡಲಾಗುವುದು ಎಂದು ಬಿಎಂಆರ್‌ಸಿಎಲ್‌ ಆಧಿಕಾರಿಗಳು ತಿಳಿಸಿದ್ದಾರೆ.

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಪೀಕ್‌ ಅವರ್‌ನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಾರದ ದಿನಗಳಲ್ಲಿ ನಮ್ಮ ಮೆಟ್ರೋ (ಸೋಮವಾರದಿಂದ ಶುಕ್ರವಾರದವರೆಗೆ) ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

suddiyaana