ಹೃದಯಾಘಾತಕ್ಕೆ ಫ್ಯಾಷನ್ ಲೋಕದ ತಾರೆ ವಿಧಿವಶ – ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಖ್ಯಾತ ಮಾಡೆಲ್ ಸಾವು
ಫ್ಯಾಷನ್ ಲೋಕದ ಪ್ರಖ್ಯಾತ ತಾರೆ. ಖ್ಯಾತ ಮಾಡೆಲ್. ಈಕೆಗೆ ಅದೆಷ್ಟೋ ಮಂದಿ ಅಭಿಮಾನಿಗಳು. ಈಕೆ ಸ್ಟೇಜ್ ಮೇಲೆ ಬಂದರೆ ಸಾಕು ವೇದಿಕೆಗೆ ಒಂದು ಕಳೆ. ಅಷ್ಟೊಂದು ಫೇಮಸ್ ಆಗಿದ್ದರು ಬ್ರೆಜಿಲ್ ನ ಖ್ಯಾತ ಮಾಡೆಲ್ ಲಾರಿಸ್ಸಾ ಬೋರ್ಗೆಸ್. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಲಾರಿಸ್ಸಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: WWE ಸ್ಟಾರ್ 36 ವರ್ಷದ ಬ್ರೇ ವ್ಯಾಟ್ ಹೃದಯಾಘಾತಕ್ಕೆ ಬಲಿ – ದೈತ್ಯ ಪ್ರತಿಭೆಯನ್ನ ಕಳೆದುಕೊಂಡು ಕುಸ್ತಿ ಲೋಕದ ಕಂಬನಿ
ಹೃದಯಸ್ತಂಭನದಿಂದ ಸಾಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳಿಗೂ ಕೂಡಾ ಇದೇ ಕಂಟಕವಾಗುತ್ತಿದೆ. ಬ್ರೆಜಿಲ್ ನ ಖ್ಯಾತ ಮಾಡೆಲ್, ಫ್ಯಾಷನ್ ಲೋಕದ ತಾರೆ 33 ವರ್ಷದ ಹರೆಯದ ಲಾರಿಸ್ಸಾ ಬೋರ್ಗೆಸ್, ಕಾರ್ಡಿಯಾಕ್ ಅರೆಸ್ಟ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ. ಮಾಡೆಲ್ ಸಾವಿನ ಕುರಿತು ಅವರ ಕುಟುಂಬಸ್ಥರೇ ಖಚಿತ ಪಡಿಸಿದ್ದಾರೆ. ಇಷ್ಟು ಬೇಗ ನೀನು ನಮ್ಮನ್ನು ತೊರೆದಿದ್ದು ಅತೀವ ದುಃಖ ತಂದಿದೆ ಎಂದು ಸಂಕಟ ಹಂಚಿಕೊಂಡಿದ್ದಾರೆ.
ಫಿಟ್ನೆಸ್ ಮತ್ತು ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು ಲಾರಿಸ್ಸಾ. ಸಾಕಷ್ಟು ಉತ್ಪನ್ನಗಳಿಗೆ ಅವರು ರೂಪದರ್ಶಿಯಾಗಿದ್ದರು. ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಕೂಡಲೇ ಕೋಮಾಗೆ ಜಾರಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.