ಹೊಸ ನಕ್ಷೆಯನ್ನು ಸಮರ್ಥಿಸಿಕೊಂಡ ಚೀನಾ – ಅತಿರೇಕದ ವ್ಯಾಖ್ಯಾನ ಬೇಡ ಎಂದ ಡ್ರ್ಯಾಗನ್‌ ರಾಷ್ಟ್ರ

ಹೊಸ ನಕ್ಷೆಯನ್ನು ಸಮರ್ಥಿಸಿಕೊಂಡ ಚೀನಾ – ಅತಿರೇಕದ ವ್ಯಾಖ್ಯಾನ ಬೇಡ ಎಂದ ಡ್ರ್ಯಾಗನ್‌ ರಾಷ್ಟ್ರ

ಬೀಜಿಂಗ್: ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶದ ವಿಚಾರವಾಗಿ ಚೀನಾ ಪದೇ ಪದೆ ನರಿ ಬುದ್ದಿ ತೋರಿಸುತ್ತಲೇ ಇದೆ. ಎರಡು ದಿನಗಳ ಹಿಂದಷ್ಟೇ ಈ ಪ್ರದೇಶಗಳು ತನ್ನದೆಂದು ನಕ್ಷೆ ಬಿಡುಗಡೆ ಮಾಡಿದ್ದ ಚೀನಾ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಅಷೇ ಅಲ್ಲದೇ ಈ ವಿಚಾರವಾಗಿ ಭಾರತ ವಸ್ತುನಿಷ್ಠವಾಗಿ ಮತ್ತು ಶಾಂತಚಿತ್ತದಿಂದ ವರ್ತಿಸಬೇಕು. ಈ ಕುರಿತು ಅತಿರೇಕದ ವ್ಯಾಖ್ಯಾನವನ್ನು ಕೈಬಿಡಬೇಕು‌ ಎಂದು ಹೇಳಿದೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಮತ್ತೆ ಖ್ಯಾತೆ ತೆಗೆದ ಚೀನಾ – ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಚೈನೀಸ್ ಬಂಕರ್‌, ಸುರಂಗ ಪತ್ತೆ!

ಈ ಸಂಬಂಧ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆಬ್ ಬಿನ್, ಇದು ತನ್ನ ಕಾನೂನಿಗೆ ಅನುಸಾರವಾಗಿ ಕೈಗೊಂಡಿರುವ ರೂಢಿಗತ ಕ್ರಮವಾಗಿದೆ. ಈ ವಿಚಾರವಾಗಿ ಭಾರತ ವಸ್ತುನಿಷ್ಠವಾಗಿ ಮತ್ತು ಶಾಂತಚಿತ್ತದಿಂದ ವರ್ತಿಸಬೇಕು. ಈ ಕುರಿತು ಅತಿರೇಕದ ವ್ಯಾಖ್ಯಾನವನ್ನು ಕೈಬಿಡಬೇಕು ಎಂದು ಅವರು ಹೇಳಿದ್ದಾರೆ.

ಚೀನಾದ 2023ರ ಸ್ಟ್ಯಾಂಡರ್ಡ್ ಮ್ಯಾಪ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಭಾರತ, ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಂಗಳವಾರ ಹೇಳಿದ್ದರು. ಚೀನಾ ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ನಾವು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ ಎಂದು ಅರಿಂದಮ್ ಬಾಗ್ಚಿ ಅವರು ಟ್ವೀಟ್ ಮಾಡಿದ್ದರು.

suddiyaana