ಆನ್ ಲೈನ್ ಗೇಮಿಂಗ್ ಆ್ಯಪ್ ಬಗ್ಗೆ ಸಚಿನ್ ತೆಂಡೂಲ್ಕರ್ ಜಾಹೀರಾತು – ಕ್ರಿಕೆಟ್ ದೇವರ ಮನೆ ಮುಂದೆ ಶಾಸಕರು ಮತ್ತು ಬೆಂಬಲಿಗರಿಂದ ಬೃಹತ್ ಪ್ರತಿಭಟನೆ

ಆನ್ ಲೈನ್ ಗೇಮಿಂಗ್ ಆ್ಯಪ್ ಬಗ್ಗೆ ಸಚಿನ್ ತೆಂಡೂಲ್ಕರ್ ಜಾಹೀರಾತು – ಕ್ರಿಕೆಟ್ ದೇವರ ಮನೆ ಮುಂದೆ ಶಾಸಕರು ಮತ್ತು ಬೆಂಬಲಿಗರಿಂದ ಬೃಹತ್ ಪ್ರತಿಭಟನೆ

ಸಚಿನ್. ಕ್ರಿಕೆಟ್ ಲೋಕದ ದೇವರು. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಸಾವಿರಾರು ಕ್ರೀಡಾಪ್ರೇಮಿಗಳಿಗೆ ಸಚಿನ್ ಸ್ಪೂರ್ತಿಯಾಗಿದ್ದಾರೆ. ಹತ್ತಾರು ಜಾಹೀರಾತುಗಳ ಮೂಲಕವೂ ಸಚಿನ್ ಮನೆ ಮಾತಾಗಿದ್ದಾರೆ. ಆದರೆ ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್​ಗಳ ಬಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ಈ ನಿರ್ಧಾರ ಬೃಹತ್ ಹೋರಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಚೆಸ್ ಚತುರನ ಪೋಷಕರಿಗೆ ಎಲೆಕ್ಟ್ರಿಕ್ ಕಾರು ಉಡುಗೊರೆ ಭರವಸೆ – ಆನಂದ್ ಮಹೀಂದ್ರಾಗೆ ಧನ್ಯವಾದ ತಿಳಿಸಿದ ಪ್ರಜ್ಞಾನಂದ

ಸಚಿನ್ ತೆಂಡೂಲ್ಕರ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಮುಂಬೈನ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಹೊರಗೆ ಪಕ್ಷೇತರ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಬಚ್ಚು ಕಡು (Bachchu Kadu) ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಭಾರತ ರತ್ನ ಮತ್ತು ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡಿರುವುದು ಶಾಸಕ ಬಚ್ಚು ಕಡು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಬಚ್ಚು ಕಡು, ‘ಯಾವುದನ್ನು ಜಾಹೀರಾತು ಮಾಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಹಾಗಾಗಿ ಈಗ ಲಾಯರ್ ಮೂಲಕ ತೆಂಡೂಲ್ಕರ್​ಗೆ ನೋಟಿಸ್ ಕಳುಹಿಸುತ್ತಿದ್ದೇನೆ. ಸಚಿನ್ ಒಬ್ಬ ಆದರ್ಶ ವ್ಯಕ್ತಿ. ಕೆಲವರಿಗೆ ಅವರು ಕ್ರಿಕೆಟ್ ದೇವರಂತೆ ಬಿಂಬಿತವಾಗಿದ್ದಾರೆ. ಅಲ್ಲದೆ ಸಚಿನ್ ಅವರಿಗೆ ಲಕ್ಷಾಂತರ ಫಾಲೋವರ್ಸ್ ಕೂಡ ಇದ್ದಾರೆ. ಹಾಗಾಗಿ ಸಚಿನ್ ಏನಾದರೂ ತಪ್ಪು ಮಾಡಿದರೆ ಅದು ಯುವ ಪೀಳಿಗೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಆರೋಪಿಸಿದ್ದಾರೆ.

ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಗಾಸಿಪ್​ಗಳಿಂದ ಹಾಗೂ ಸಮಾಜ ಸ್ವಾಸ್ಥ್ಯವನ್ನು ಕದಡುವ ಕೆಲಸಗಳಿಂದ ಸಾಕಷ್ಟು ಅಂತರ ಕಾಪಾಡಿಕೊಳ್ಳುತ್ತಾರೆ. ಹೀಗಾಗಿ ಸಚಿನ್ ಇದುವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡವರಲ್ಲ. ಆದರೆ ಇದೀಗ ಸಚಿನ್ ವಿರುದ್ಧ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಆರೋಪ ಕೇಳಿಬಂದಿದೆ. ಶಾಸಕ ಬಚ್ಚು ಕಡು ತಮ್ಮ ವಕೀಲರ ಮೂಲಕ ಸಚಿನ್ ತೆಂಡೂಲ್ಕರ್ ಅವರಿಗೆ ನೋಟಿಸ್ ಕಳುಹಿಸಿದ್ದರು. ಆದರೆ ಇದಕ್ಕೆ ಸಚಿನ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಬಚ್ಚು ಕಡು ಅವರೇ ನೇರವಾಗಿ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಚಿನ್​ಗೆ ಲೀಗಲ್ ನೋಟಿಸ್ ಕಳುಹಿಸಲಾಗುವುದು ಎಂದು ಬಚ್ಚು ಕಡು ಹೇಳಿದ್ದಾರೆ.

suddiyaana