ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆಕೆಯ ತಮ್ಮನನ್ನೇ ಕೊಂದ – ತುಂಡು ತುಂಡಾಗಿ ಕತ್ತರಿಸಿ ಅಡುಗೆ ಮನೆಯಲ್ಲಿ ಹೂತಿಟ್ಟ ಪಾಪಿ

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆಕೆಯ ತಮ್ಮನನ್ನೇ ಕೊಂದ – ತುಂಡು ತುಂಡಾಗಿ ಕತ್ತರಿಸಿ ಅಡುಗೆ ಮನೆಯಲ್ಲಿ ಹೂತಿಟ್ಟ ಪಾಪಿ

ಆ ಬಾಲಕನಿಗೆ ಯಾರೂ ಇರಲಿಲ್ಲ. ಹೀಗಾಗಿ ವ್ಯಕ್ತಿಯೊಬ್ಬರು ಆತನನ್ನ ಕರೆತಂದು ತಮ್ಮ ಮನೆಯಲ್ಲೇ ಮಗನಂತೆ ಸಾಕಿ ಸಲಹಿದ್ದರು. ಆದರೆ ಅದೇ ಬಾಲಕ ತನ್ನನ್ನು ಸಾಕಿ ಸಲಹಿದ ವ್ಯಕ್ತಿಯ ಮಗಳ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದ್ದನಂತೆ. ಇದ್ರಿಂದ ಸಿಟ್ಟಾದ ಮಹಿಳೆಯ ಪತಿ ಬಾಲಕನನ್ನೇ ಕೊಲೆ ಮಾಡಿ ತುಂಡು ತುಂಡುಗಳಾಗಿ ಕತ್ತರಿಸಿರುವ ದಾರುಣ ಘಟನೆ ನಡೆದಿದೆ.

ಇದನ್ನೂ ಓದಿ : ಬಿಬಿಎಂಪಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್  ಸಾವು – ಡಿ.ಕೆ ಶಿವಕುಮಾರ್ ಸಂತಾಪ

ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಸಿಟ್ಟಿನಲ್ಲಿ ಪತಿಯೇ ಆಕೆಯ ತಮ್ಮನನ್ನ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಂದು ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 17 ವರ್ಷದ ಬಾಲಕ ರಕ್ತ ಸಂಬಂಧಿಯಲ್ಲದಿದ್ದರೂ ಆರೋಪಿಯ ಪತ್ನಿಯ ತಂದೆಯೇ ಸಾಕಿ, ಸಲಹಿದ್ದರು. ಬಾಲಕ ತನ್ನ ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆಂದು ಆರೋಪಿಸಿ ಹತ್ಯೆ ಮಾಡಿದ್ದಾನೆ. ಪೊಲೀಸರ ಪ್ರಕಾರ, ಆರೋಪಿ ಪದೇ ಪದೇ ಎಚ್ಚರಿಕೆ ನೀಡಿದರೂ ಬಾಲಕ ನಿರಂತರವಾಗಿ ಪತ್ನಿಗೆ ಹಿಂಸೆ ನೀಡುತ್ತಿದ್ದ, ವ್ಯಕ್ತಿ ಸೋಮವಾರ ಮುಂಬೈನ ಚೆಂಬೂರಿನಲ್ಲಿ ಬಾಲಕನನ್ನು ಕೊಂದು, ನಂತರ ಆತನ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ತನ್ನ ಅಡುಗೆಮನೆಯಲ್ಲಿ ಬಚ್ಚಿಟ್ಟಿದ್ದ. ಬಾಲಕ ಎರಡು ದಿನ ನಾಪತ್ತೆಯಾದ ನಂತರ ಆರೋಪಿಯ ಮಾವ ಬಾಲಕನ ಬಗ್ಗೆ ವಿಚಾರಿಸಿದ್ದಾರೆ. ಆಗ ಅಳಿಯ ಕೊಟ್ಟ ಉತ್ತರ ಸರಿ ಅನಿಸಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಬಳಿಕ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯ ಪತ್ನಿ ಬಾಲಕನನ್ನು ತನ್ನ ತಮ್ಮ ಎಂದುಕೊಂಡೇ ಸಲಹಿದ್ದಳು. ಆದರೆ ಇಬ್ಬರೂ ರಕ್ತಸಂಬಂಧವನ್ನು ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣದಲ್ಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

suddiyaana