ಚೆಸ್ ಚತುರನ ಪೋಷಕರಿಗೆ ಎಲೆಕ್ಟ್ರಿಕ್ ಕಾರು ಉಡುಗೊರೆ ಭರವಸೆ – ಆನಂದ್ ಮಹೀಂದ್ರಾಗೆ ಧನ್ಯವಾದ ತಿಳಿಸಿದ ಪ್ರಜ್ಞಾನಂದ

ಚೆಸ್ ಚತುರನ ಪೋಷಕರಿಗೆ ಎಲೆಕ್ಟ್ರಿಕ್ ಕಾರು ಉಡುಗೊರೆ ಭರವಸೆ – ಆನಂದ್ ಮಹೀಂದ್ರಾಗೆ ಧನ್ಯವಾದ ತಿಳಿಸಿದ ಪ್ರಜ್ಞಾನಂದ

ಚೆಸ್ ವಿಶ್ವಕಪ್‌ನಲ್ಲಿ ಗೆಲ್ಲದಿದ್ದರೂ, ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ ಈಗ ಭಾರತದ ಕಣ್ಮಣಿ. ಫೈನಲ್ ಟೈಬ್ರೇಕರ್ ರೌಂಡ್ಸ್‌ನಲ್ಲಿ ವೀರೋಚಿತ ಸೋಲು ಕಂಡಿರುವ ಪ್ರಜ್ಞಾನಂದ ಬರೀ ಚೆಸ್ ಚತುರ ಮಾತ್ರ ಅಲ್ಲ. ಭಾರತೀಯರ ಮನಸ್ಸು ಗೆದ್ದ ಹೆಮ್ಮೆಯ ಆಟಗಾರ ಕೂಡ. ಪ್ರಜ್ಞಾನಂದನ ಸರಳತೆಯನ್ನು ಆತನ ಚತುರತೆಯನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಮೆಚ್ಚಿಕೊಂಡಿದ್ದರು. ಜೊತೆಗೊಂದು ಉಡುಗೊರೆಯನ್ನು ನೀಡುವುದಾಗಿ ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರಿಗೆ ಚೆಸ್ ಚತುರ ಪ್ರತಿಕ್ರಿಯೆ ನೀಡಿದ್ದಾನೆ.

ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

ಪ್ರಜ್ಞಾನಂದನ ಪೋಷಕರಿಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುವ ಭರವಸೆ ನೀಡಿದ್ದರು. ಇದಕ್ಕೆ ಚೆಸ್ ಪಟು ಪ್ರತಿಕ್ರಿಯೆ ನೀಡಿದ್ದಾರೆ. ಯಾಕೆಂದರೆ, ಇದು ಪ್ರಜ್ಞಾನಂದ ಹೆತ್ತವರ ಬಹಳ ವರ್ಷಗಳ ಕನಸಾಗಿತ್ತು. ಇದೀಗ ಹೆತ್ತವರ ಈ ಬಹುದೊಡ್ಡ ಕನಸು ನನಸಾಗಿಸಿದ್ದಕ್ಕೆ ಪ್ರಜ್ಞಾನಂದ ಅವರು ಆನಂದ್ ಮಹೀಂದ್ರಾಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ‘ನಾನು ನಿಮಗೆ ಹೇಗೆ ಧನ್ಯವಾದಗಳನ್ನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ತುಂಬಾನೇ ಥ್ಯಾಂಕ್ಸ್ ಸರ್. ಇವಿ ಕಾರನ್ನು ಹೊಂದುವುದು ನನ್ನ ಹೆತ್ತವರ ದೀರ್ಘಾವಧಿಯ ಕನಸಾಗಿದೆ. ಇದೀಗ ನೀವು ಅದನ್ನು ನನಸಾಗಿಸಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಪ್ರಜ್ಞಾನಂದ್ ರನ್ನರ್ ಅಪ್ ಆಗುತ್ತಿದ್ದಂತೆಯೇ ಹಲವಾರು ಮಂದಿ ಟ್ವೀಟ್ ಮಾಡಿ, ಥಾರ್ ಗಿಫ್ಟ್ ಮಾಡುವಂತೆ ಆನಂದ್ ಮಹೀಂದ್ರಾ ಅವರನ್ನು ಒತ್ತಾಯಿಸಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಅದೇನೆಂದರೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಹೀಗಾಗಿ ನಾನು ಪ್ರಜ್ಞಾನಂದ ಪೋಷಕರಿಗೆ XUV4OO EV ಎಲೆಕ್ಟ್ರಿಕ್ ವಾಹನವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.  ಆನಂದ್ ಮಹೀಂದ್ರಾ ಅವರ ಕಾರ್ಯಕ್ಕೆ ಹಲವಾರು ಮಂದಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ಚೆಸ್ ವಿಶ್ವಕಪ್ ನ ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲ್ಸೆನ್  ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದರು. ಭಾರತೀಯ ಚೆಸ್ ಪಟು ಪ್ರಜ್ಞಾನಂದಗೆ ಸೋಲಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.

suddiyaana