‘ತನ್ನ ಕೈ ಹಿಡಿದಿರುವ ಮನದನ್ನೆ’ – ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಹಿಡಿದಿದ್ದು ಯಾರ ಕೈ ?

‘ತನ್ನ ಕೈ ಹಿಡಿದಿರುವ ಮನದನ್ನೆ’ – ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಹಿಡಿದಿದ್ದು ಯಾರ ಕೈ ?

ಟಾಲಿವುಡ್‌ನ ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಅಂದರೆ ಮಹಿಳಾ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ದೇವರಕೊಂಡ ಸ್ಮೈಲ್, ರೋಮ್ಯಾಂಟಿಕ್ ಸೀನ್ ನೋಡುವುದೇ ಲೇಡಿ ಫ್ಯಾನ್ಸ್‌ಗೆ ಸಖತ್ ಇಷ್ಟ. ಹೀಗಾಗಿಯೇ ವಿಜಯ್ ದೇವರಕೊಂಡ ಬೋಲ್ಡ್ ಹೀರೋ ಅಂತಾನೇ ಫೇಮಸ್ ಆಗಿದ್ದಾರೆ. ಆದರೀಗ ವಿಜಯ್ ದೇವರಕೊಂಡ ಶೇರ್ ಮಾಡಿರುವು ಒಂದು ಫೋಟೋ ಮಹಿಳಾ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗುವಂತೆ ಮಾಡಿದೆ.

ಇದನ್ನೂ ಓದಿ: ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಡೇಟಿಂಗ್ ವಿಡಿಯೋ ವೈರಲ್ – ಮದುವೆಯಾದರೆ ಚೆಂದ ಅಂತಿದ್ದಾರೆ ಫ್ಯಾನ್ಸ್

ವಿಜಯ್ ದೇವರಕೊಂಡ ಅಭಿಮಾನಿಗಳು ಈಗಲೂ ಕೇಳುವುದು ನಿಮಗೆ ಮದುವೆ ಯಾವಾಗ ಎಂದು. ಜೊತೆಗೆ ವಿಜಯ್ ದೇವರಕೊಂಡ ಯಾರನ್ನು ಲವ್ ಮಾಡುತ್ತಿರಬಹುದು ಎಂಬ ವಿಚಾರದ ಬಗ್ಗೆ ಅನೇಕ ಗಾಸಿಪ್ ಸುದ್ದಿಗಳು ಕೂಡಾ ಹರಿದಾಡುತ್ತಲೇ ಇದೆ. ಇದರ ಮಧ್ಯೆ ವಿಜಯ್ ದೇವರಕೊಂಡ ‘ತನ್ನ ಕೈ ಹಿಡಿದಿರುವ ಮನದನ್ನೆ ಫೋಟೋ ಹಂಚಿಕೊಂಡು ಸದ್ಯದಲ್ಲೇ ಅನೌನ್ಸ್ ಆಗುತ್ತೆ’ ಎಂದಿದ್ದಾರೆ. ಈ ಮೂಲಕ ತನ್ನ ಲವ್ ಲೈಫ್ ಬಗ್ಗೆ ವಿಜಯ್ ಸುಳಿವು ನೀಡಿದ್ದಾರೆ. ಹಾಗಾದ್ರೆ ಆ ಹುಡುಗಿ ಯಾರು?. ಮೊದಲೇ ವಿಜಯ್ ದೇವರಕೊಂಡ ಟಾಲಿವುಡ್‌ನ ಬೋಲ್ಡ್ ಹೀರೋ. ತನಗನಿಸಿದ್ದನ್ನು ನೇರವಾಗಿ ಹೇಳುವ ನಟ. ವಿಜಯ್ ಒಪ್ಪಿಕೊಳ್ಳುವ ಸಿನಿಮಾಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತೆ. ಇದರ ನಡುವೆ ಆಗಸ್ಟ್ 29ರಂದು ವಿಜಯ್ ದೇವರಕೊಂಡ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹುಡುಗಿಯ ಕೈ ಮೇಲೆ ತನ್ನ ಕೈ ಇಟ್ಟಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಬರೆದುಕೊಂಡ ಸಾಲುಗಳು ಅಷ್ಟೇ ಸದ್ದು ಮಾಡುತ್ತಿವೆ. ಏನೋನೋ ನಡೆಯುತ್ತಿದೆ. ಆದರೆ, ಇದು ಮಾತ್ರ ನಿಜಕ್ಕೂ ವಿಶೇಷ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಆಗ್ತಿದ್ದಂತೆ ಅಭಿಮಾನಿಗಳಿಗೆ ನೂರೆಂಟು ಪ್ರಶ್ನೆಗಳು ಎದುರಾಗಿವೆ.

ಇತ್ತೀಚಿಗೆ ಸಮಂತಾ ಜೊತೆ ಕೂಡ ವಿಜಯ್ ಒಡನಾಟ ಚೆನ್ನಾಗಿರುವ ಕಾರಣ, ವಿಜಯ್ ಕೈ ಮೇಲಿರುವ ಆ ಕೈ ಸಮಂತಾ ಅವರದ್ದು ಇರಬಹುದಾ ಅಂತಾ ಕೆಲವರು ಹೇಳಿದರು, ಇನ್ನು ಕೆಲವರು ಆ ಕೈ ರಶ್ಮಿಕಾ ಮಂದಣ್ಣ ಅವರದ್ದಾ? ಎಂದು ಕೇಳುತ್ತಿದ್ದಾರೆ.

ಅಸಲಿಗೆ ಇದು, ವಿಜಯ್ ಮದುವೆ ಮ್ಯಾಟರ್ ಅಲ್ಲ, ರಶ್ಮಿಕಾ ಮಂದಣ್ಣ ಜೊತೆಗಿನ ಹೊಸ ಸಿನಿಮಾದ ಅನೌನ್ಸ್ಮೆಂಟ್ ವಿಚಾರ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

suddiyaana