ಅರುಣಾಚಲ ಪ್ರದೇಶದಲ್ಲಿ ಮತ್ತೆ ಖ್ಯಾತೆ ತೆಗೆದ ಚೀನಾ – ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಚೈನೀಸ್ ಬಂಕರ್‌, ಸುರಂಗ ಪತ್ತೆ!

ಅರುಣಾಚಲ ಪ್ರದೇಶದಲ್ಲಿ ಮತ್ತೆ ಖ್ಯಾತೆ ತೆಗೆದ ಚೀನಾ – ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಚೈನೀಸ್ ಬಂಕರ್‌, ಸುರಂಗ ಪತ್ತೆ!

ಅರುಣಾಚಲ ಪ್ರದೇಶ ತನ್ನದೆಂದು ಪ್ರತಿಪಾದಿಸುತ್ತಾ ಬಂದಿರೋ ಚೀನಾ ಪದೇ ಪದೇ ತನ್ನ ನರಿ ಬುದ್ದಿಯನ್ನು ತೋರಿಸುತ್ತಿದೆ. ಭಾರತದ ಅಕ್ಸಾಯ್‌ ಚಿನ್‌ ತನ್ನದೆಂದು ತೋರಿಸುವ ಹೊಸ ನಕ್ಷೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ನೆರೆಯ ಚೀನಾ, ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ರಹಸ್ಯವಾಗಿ ಸುರಂಗ ಮತ್ತು ಬಂಕರ್‌ ನಿರ್ಮಾಣ ಚಟುವಟಿಕೆ ತೀವ್ರಗೊಳಿಸಿರುವ ವಿಷಯ ಬೆಳಕಿಗೆ ಬಂದಿದೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ಅರುಣಾಚಲ ಪ್ರದೇಶದ ಸುಮಾರು 11 ಊರುಗಳ ಹೆಸರುಗಳನ್ನು ಬದಲಾಯಿಸಿತ್ತು. ಅಷ್ಟೇ ಅಲ್ಲದೇ ಅರಣಾಚಲ ಪ್ರದೇಶವನ್ನು ದಕ್ಷಿಣ ಭಾಗ – ಝಂಗಾನ್ ಅಂತಾ ಡ್ರ್ಯಾಗನ್ ಸರ್ಕಾರ ಹೇಳಿಕೊಳ್ಳುತ್ತಾ ಬಂದಿದೆ. ಈ ಬೆನ್ನಲ್ಲೇ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದ ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಪ್ರದೇಶ  ಎಂದು ಹೇಳಿದೆ. ಇವಿಷ್ಟೇ ಅಲ್ಲದೇ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ 70 ಕಿ.ಮೀ. ದೂರದಲ್ಲಿ ವಿವಿಧ ಪ್ರದೇಶಗಳಲ್ಲಿ ಚೀನಾ 3 ಬಂಕರ್‌ಗಳು ಹಾಗೂ 3 ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಿದೆ. ಅಲ್ಲದೇ ಈ 6 ಪ್ರದೇಶಗಳು ಸಹ 15 ಚದರ ಕಿ.ಮೀ. ವಿಸ್ತೀರ್ಣದೊಳಗಿವೆ ಎಂದು ವರದಿ ತಿಳಿಸಿದೆ. 2021ರ ಡಿ.6 ಮತ್ತು 2023 ಆ.18ರಂದು ಬಿಡುಗಡೆ ಮಾಡಲಾದ ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಚೀನಾದ ಮತ್ತೊಂದು ಕುತಂತ್ರ ಬಯಲು – ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ ಮಾಡಿದ ಡ್ರ್ಯಾಗನ್‌ ಸರ್ಕಾರ!

2020ರ ಮೇ 20ರಂದು ಸೈನ್ಯವನ್ನು ಹಿಂಪಡೆಯಲು ಉಭಯ ದೇಶಗಳು ನಿರ್ಧಾರ ಮಾಡಿದ ಬಳಿಕ ವಿಮಾನ ನಿಲ್ದಾಣ, ಹೆಲಿಪ್ಯಾಡ್‌, ರೈಲ್ವೆ, ಕ್ಷಿಪಣಿ ಬೇಸ್‌, ರಸ್ತೆ ಮತ್ತು ಸೇತುವೆ ಮುಂತಾದ ಕಾರ್ಯಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಿದ್ದರೂ, ಸುರಂಗ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಒಂದು ವೇಳೆ ಕ್ಷಿಪಣಿ ಅಥವಾ ರಾಕೆಟ್‌ ದಾಳಿ ನಡೆದರೆ ತಮ್ಮ ಸೈನಿಕರನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಈ ಬಂಕರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಆದರೆ ಈ ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಬಗ್ಗೆ ಪ್ರತಿಕ್ರಿಯಿಸಲು ಭಾರತದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ನಿರ್ಮಾಣಗಳ ಬಗ್ಗೆ ಮಾತನಾಡಿದರು ನಿವೃತ್ತ ಏರ್‌ ವೈಸ್‌ ಮಾರ್ಷಲ್‌ ಮನೋಹರ್‌ ಬಹದ್ದೂರ್‌ ಅವರು, ‘ಇವುಗಳನ್ನು ಕೇವಲ ಸೈನಿಕರನ್ನು ರಕ್ಷಿಸಲು ಅಷ್ಟೇ ಅಲ್ಲದೇ ಕಮಾಂಡ್‌ ಸೆಂಟರ್‌ಗಳಾಗಿಯೂ ಬಳಕೆ ಮಾಡಲಾಗುತ್ತದೆ. ಜೊತೆಗೆ ಇಲ್ಲಿ ಸ್ಪೋಟಕಗಳನ್ನು ಅಡಗಿಸಿಡಲಾಗುತ್ತದೆ. ಇವು ವಾಯು ಮಾರ್ಗದಲ್ಲಿ ಚಲಿಸುವ ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಈ ಮೊದಲು ಲಡಾಖ್‌ ಬಳಿಯೂ ಸಹ ಚೀನಾ ಇಂತಹುದ್ದೇ ರಚನೆಗಳನ್ನು ನಿರ್ಮಾಣ ಮಾಡಿತ್ತು. ಈಗ ಅಕ್ಸಾಯ್‌ ಚಿನ್‌ ಪ್ರದೇಶಗದಲ್ಲಿ ಇವುಗಳ ನಿರ್ಮಾಣ ತೊಡಗಿದೆ ಎಂದು ವರದಿ ತಿಳಿಸಿದೆ.

suddiyaana