ವಿಕ್ರಮ್​ಲ್ಯಾಂಡರ್​ ವಿನ್ಯಾಸ ಮಾಡಿದ್ದು ನಾನೇ..! – ಇಸ್ರೋ ವಿಜ್ಞಾನಿ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ಯಿಯ ಬಂಧನ

ವಿಕ್ರಮ್​ಲ್ಯಾಂಡರ್​ ವಿನ್ಯಾಸ ಮಾಡಿದ್ದು ನಾನೇ..! – ಇಸ್ರೋ ವಿಜ್ಞಾನಿ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ವ್ಯಕ್ಯಿಯ ಬಂಧನ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ -3 ಮಿಷನ್‌ಗೆ ವಿಕ್ರಮ್‌ ಲ್ಯಾಂಡರ್ ಮಾಡ್ಯೂಲ್‌ ವಿನ್ಯಾಸ ಮಾಡಿದ್ದು ನಾನೇ ಎಂದು ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ನಕಲಿ ವಿಜ್ಞಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತಿನ ಸೂರತ್​ ನಗರದ ಮಿಥುಲ್ ತ್ರಿವೇದಿ ಎಂಬಾತ ತಾನು ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂಧರ್ಶನ ನೀಡುತ್ತಿದ್ದ. ಚಂದ್ರಯಾನ -3 ಮಿಷನ್ಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ತಾನೇ ವಿನ್ಯಾಸಗೊಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ. ದೂರು ದಾಖಲಾದ ಹಿನ್ನೆಲೆ ಆತನ್ನು ಬಂಧಿಸಲಾಗಿದೆ ಎಂದು ಎಂದು ಪೊಲೀಸರು  ತಿಳಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ – ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಲ್ಲಿ ಭಾರಿ ವ್ಯತ್ಯಯ!

ಆಗಸ್ಟ್ 24 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವುದನ್ನು ಗಮನಿಸಿದ ನಂತರ ಆರೋಪಿ ಮಿಥುಲ್ ತ್ರಿವೇದಿ ವಿರುದ್ಧ ದೂರು ದಾಖಲಿಸಲಾಗಿತ್ತು. ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ತ್ರಿವೇದಿ ತಾನು ಇಸ್ರೋದಪ್ರಾಚೀನ ವಿಜ್ಞಾನ ಅಪ್ಲಿಕೇಶನ್ ವಿಭಾಗದ” “ಸಹಾಯಕ ಅಧ್ಯಕ್ಷಎಂದು ಹೇಳಿಕೊಂಡಿದ್ದು, ಸಂಬಂಧ ಫೆಬ್ರವರಿ 26, 2022 ರಂದು ನಕಲಿ ನೇಮಕಾತಿ ಪತ್ರವನ್ನು ಸಹ ತಯಾರಿಸಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana