‘ಬೈಯಪ್ಪನಹಳ್ಳಿ – ಕೆಆರ್ ‌ಪುರ’ ಮೆಟ್ರೋ ಮಾರ್ಗ ಸೆ.7ಕ್ಕೆ ಪರಿಶೀಲನೆ – ಸಂಚಾರ ಮುಕ್ತ ಯಾವಾಗ?

‘ಬೈಯಪ್ಪನಹಳ್ಳಿ – ಕೆಆರ್ ‌ಪುರ’ ಮೆಟ್ರೋ ಮಾರ್ಗ ಸೆ.7ಕ್ಕೆ ಪರಿಶೀಲನೆ – ಸಂಚಾರ ಮುಕ್ತ ಯಾವಾಗ?

ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತು ಹೋಗಿರುವ ಬೆಂಗಳೂರಿಗರು ನಮ್ಮ ಮೆಟ್ರೋವನ್ನು ಅವಲಂಬಿಸಿದ್ದಾರೆ. ಆದರೆ ಬೆಂಗಳೂರು ನಮ್ಮ ಮೆಟ್ರೋದ ಸಂಪರ್ಕ ಕೊಂಡಿಯಾಗಿರುವ ನೇರಳೆ ಮಾರ್ಗದ ‘ಬೈಯಪ್ಪನಹಳ್ಳಿ-ಕೆ.ಆರ್‌.ಪುರಂ’ ನಡುವಿನ ಮೆಟ್ರೋ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಮಾರ್ಗದಲ್ಲಿ  ರೈಲು ಸಂಚಾರ ಯಾವಾಗ ಪ್ರಾರಂಭವಾಗಲಿದೆ ಎಂದು ಈ ಭಾಗದ ಜನರು ಕಾಯುತ್ತಿದ್ದಾರೆ. ಇದೀಗ ಬಿಎಂಆರ್‌ಸಿಎಲ್‌ ಈ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ನೇರಳೆ ಮಾರ್ಗದ ‘ಬೈಯಪ್ಪನಹಳ್ಳಿ-ಕೆ.ಆರ್‌.ಪುರಂ’ ನಡುವಿನ ರೈಲು ಸಂಚಾರಕ್ಕೆ ಈ ಭಾಗದ ಜನರು ಕಾಯುತ್ತಿದ್ದಾರೆ. ಇಲ್ಲಿ ಅಂತಿಮ ಹಂತದ ತಪಾಸಣೆ ಬಾಕಿ ಇದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ತಂಡವು ಸೆಪ್ಟೆಂಬರ್ 7 ರಂದು ಈ ಮಾರ್ಗವನ್ನು ಪರಿಶೀಲಿಸಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುತ್ತಾ? – ಬಿಎಂಆರ್‌ಸಿಎಲ್‌ ಹೇಳಿದ್ದೇನು?

ಪೂರ್ವ ಬೆಂಗಳೂರು ವ್ಯಾಪ್ತಿಗೆ ಸೇರುವ ಸುಮಾರು ಎರಡು ಕಿಲೋ ಮೀಟರ್ ಉದ್ದದ ಬೈಯಪ್ಪನಹಳ್ಳಿ-ಕೆ.ಆರ್‌.ಪುರಂ’ ಮಧ್ಯದ ನೂತನ ಮಾರ್ಗ ಇದಾಗಿದೆ. ಐಟಿ ಕಾರಿಡಾರ್‌ಗೆ ಈ ಸಂಪರ್ಕಿಸುವ ಕಾಡುಗೋಡಿ ರೈಲು ಮಾರ್ಗಕ್ಕೆ ಇದು ಸಂಪರ್ಕ ಕೊಂಡಿಯಾಗಿದ್ದು, ನಿರ್ಮಾಣ ಕಾರ್ಯ ಮುಗಿದಿದೆ.

ಈಗಾಗಲೇ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಮೆಟ್ರೋ ಸಿಗ್ನಲಿಂಗ್, ಹಳಿ ತಪಾಸಣೆ ಕಾರ್ಯ ನಡೆಯುತ್ತಿದೆ. ಇನ್ನೂ ಮುಂದಿನ ತಿಂಗಳ ಮೊದಲ ವಾರಾಂತ್ಯಕ್ಕೆ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ (CMRS) ತಂಡ ಎರಡು ಕಿಮೀಯ ಈ ಮಾರ್ಗವನ್ನು ಪರಿಶೀಲಿಸಿದ ಬಳಿಕವೇ ಬೈಯಪ್ಪನಹಳ್ಳಿ-ಕೆ.ಆರ್‌.ಪುರಂ’ ಸಂಚಾರ ಆರಂಭವಾಗಲಿದೆ. ನಂತರ ಇದು ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಈ ಕುರಿತು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗದಲ್ಲಿ ಸಿಗ್ನಲ್ ಪರೀಕ್ಷೆ ಮತ್ತು ಇತರ ಪ್ರಯೋಗಗಳು ಪ್ರಗತಿಯಲ್ಲಿವೆ. ಇವೆಲ್ಲ ಕೆಲಸಗಳು ಮುಂದಿನ ಸೆಪ್ಟಂಬರ್ ಸೆಪ್ಟೆಂಬರ್ 6 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಇವೆ. ಬಳಿಕ ಸೆಪ್ಟೆಂಬರ್ 7ರ ಬಳಿಕ CMRS ತಂಡದ ಅಧಿಕಾರಿಗಳು ಈ ಮಾರ್ಗವನ್ನು ಪರಿಶೀಲನೆಗೆ ಒಳಪಡಿಸಲಿದ್ದಾರೆ ಎಂದರು.

ನಮ್ಮ ಮೆಟ್ರೋ ಆಯುಕ್ತರು ಅನುಮೋದನೆ ನೀಡಿದ ನಂತರ ನೇರಳೆ ಮಾರ್ಗದ ವಿಸ್ತರಣೆಯಲ್ಲಿ ಮೆಟ್ರೋ ರೈಲುಗಳು ಓಡಾಡಲಿವೆ. ಬಹು ನಿರೀಕ್ಷಿತ ಮೆಟ್ರೋ ಮಾರ್ಗ ಜುಲೈ ಅಥವಾ ಆಗಸ್ಟ್ ವೇಳೆಗೆ ಕಾರ್ಯಾರಂಭ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಸಂಚಾರ ಮುಕ್ತಗೊಳಿಸುವುದು ವಿಳಂಬವಾಗಿದೆ. ಒಟ್ಟಾರೆ ಕಾಡುಗೋಡಿಯಿಂದ ಚಲಘಟ್ಟವರೆಗೆ 43 ಕಿಲೋ ಮೀಟರ್‌ನ ಸ್ಟ್ರೆಚ್ ಇದಾಗಿದೆ.

ಕೆಆರ್ ಪುರಂ-ಬೈಯಪ್ಪನಹಳ್ಳಿ ಈ ಮಾರ್ಗವು ಕಾಡುಗೋಡಿ (ಐಟಿ ಕಾರಿಡಾರ್), ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ, ಚಲಘಟ್ಟ ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗವನ್ನು ಪ್ರಾರಂಭಿಸಿತು. ಅಲ್ಲದೇ ಈ ನೇರಳೆ ಮಾರ್ಗದ ಮುಖ್ಯ ಸ್ಟ್ರೇಟ್‌ನ ಕಾಮಗಾರಿಗಳು ವಿಳಂಬದಿಂದಾಗಿ ಟೀಕೆಗಳನ್ನು ಟೀಕೆಗಳನ್ನು ಎದುರಿಸಬೇಕಾಯಿತು. ರೈಲ್ವೆ ಗ್ರೀಡರ್‌ನಿಂದಲೂ ಕಾಮಗಾರಿ ತುಸು ತಡವಾಗಿತ್ತು.

suddiyaana