ಈ ನದಿ ನೀರನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ…! ಯಾವುದೋ ಶಕ್ತಿ ಎಳೆದುಕೊಳ್ಳುತ್ತದೆಯಂತೆ…!

ಈ ನದಿ ನೀರನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ…! ಯಾವುದೋ ಶಕ್ತಿ ಎಳೆದುಕೊಳ್ಳುತ್ತದೆಯಂತೆ…!

ಈ ಜಗತ್ತು ವಿಚಿತ್ರ ಸಂಗತಿಗಳು ಮತ್ತು ರಹಸ್ಯಗಳಿಂದ ತುಂಬಿದೆ. ಹಲವು ಬಾರಿ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ ಎಂದೆನಿಸಿದರೆ ಇನ್ನೂ ಕೆಲವು ಬಾರಿ ಕೆಲವು ಸಂಗತಿಗಳನ್ನು ನಂಬಲು ಸಾಧ್ಯವಾಗುವುದಿಲ್ಲ. ಇವುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅವುಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತವೆ ಹೊರತು ನೀಖರ ಉತ್ತರ ಜನಸಾಮಾನ್ಯರಿಗೆ ಸಿಗುವುದಿಲ್ಲ. ಇಂತಹ ಸ್ಥಳಗಳಲ್ಲಿ ದೆಹಲಿಯ ಖೂನಿ ನದಿಯೂ ಒಂದು…!

ರೋಹಿಣಿ ಜಿಲ್ಲೆಯ ಪಶ್ಚಿಮ ದೆಹಲಿಯಲ್ಲಿ ಹರಿಯುವ ಸಣ್ಣ ನದಿ. ರೋಹಿಣಿಯಲ್ಲಿ ಹರಿಯುವ ಯಮುನಾ ನದಿಯ ಇನ್ನೊಂದು ಸಣ್ಣ ಕವಲು ಈ ಖೂನಿ ನದಿ. ಸುತ್ತಮುತ್ತ ಹಚ್ಚಹಸುರಿನ ಸುಂದರ ಜಾಗವಿದು. ನೋಡಿದ ತಕ್ಷಣ ಒಂದು ಆಹ್ಲಾದಕರ ವಾತಾವರಣ ಇಲ್ಲಿ ಯಾರನ್ನೂ ಸೆಳೆಯದೇ ಇರದು. ಆದರೆ, ಈ ಸುಂದರ ಪ್ರದೇಶದ ಬಗ್ಗೆ ಸ್ಥಳೀಯರಲ್ಲಿ ಕೇಳಿದರೆ ಅವರಿಂದ ಬರುವ ಉತ್ತರ ಮಾತ್ರ ಭಯಾನಕ. ಯಾಕೆಂದರೆ, ಇಂದಿಗೂ ಈ ಭಾಗದ ಜನ ಈ ನದಿ ಪ್ರದೇಶವನ್ನು ಭಯದ ನೆರಳಲ್ಲೇ ನೋಡುತ್ತಾರೆ. ಇಲ್ಲಿ ಭೂತ, ಪ್ರೇತಗಳ ಸಂಚಾರವಿದೆ ಎಂಬುದು ಈ ಜನರ ಬಲವಾದ ನಂಬಿಕೆ.

ಇದನ್ನೂ ಓದಿ: ಈ ಮರದ ಗಾಳಿ ಉಸಿರಾಡಿದ್ರೆ ಸಾವು ಖಚಿತ? – ಈ ವೃಕ್ಷದ ಬಗ್ಗೆ ನಿಮಗೆ ಗೊತ್ತಾ?

ಈ ಜಾಗದಲ್ಲಿ ಕತ್ತಲಾಗುತ್ತಿದ್ದಂತೆಯೇ ಬಗೆ ಬಗೆಯ ಅವ್ಯಕ್ತ ಭಯ ಆವರಿಸಲು ಆರಂಭವಾಗುತ್ತದೆ. ಆದೂ ಅಲ್ಲದೇ ನದಿಯ ಹೆಸರು ಅಶುಭ ಸೂಚಕದಂತಿದೆ. ಇದನ್ನು ದೆಹಲಿಯ ಬರ್ಮುಡಾ ಟ್ರೈಯಾಂಗಲ್​ ಎಂದು ಕರೆಯುವವರು ಇದ್ದಾರೆ. ಯಾಕೆಂದರೆ, ಈ ಪ್ರದೇಶಕ್ಕೆ ಹೋದವರು ಮತ್ತೆ ಮರಳಿ ಬಂದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆ. ಜೊತೆಗೆ ಇಲ್ಲಿ ನಡೆದಿರುವ ಸಾವುಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ.

ಖೂನಿ ನದಿ ಬಗ್ಗೆ ಬಗೆಬಗೆ ಭಯಾನಕ ಕತೆಗಳಿವೆ. ಯಾರಾದರೂ ಅಪ್ಪಿ ತಪ್ಪಿಯಾದರೂ ಈ ನದಿಯ ನೀರನ್ನು ಮುಟ್ಟಿದರೆ ತಕ್ಷಣ ಯಾವುದೋ ಶಕ್ತಿ ಇವರನ್ನು ನೀರಿನೊಳಗೆ ಎಳೆದುಕೊಳ್ಳುತ್ತದೆಯಂತೆ…! ಪರಿಣಾಮ ಇವರು ನಿಗೂಢವಾಗಿ ಸಾವನ್ನಪ್ಪುತ್ತಾರಂತೆ. ಇದು ಸ್ಥಳೀಯರಲ್ಲಿ ಇಂದಿಗೂ ಇರುವ ನಂಬಿಕೆ. ಅದೂ ಅಲ್ಲದೆ, ಈ ರೀತಿಯ ಹಲವು ಘಟನೆಗಳು ಈ ಹಿಂದೆಯೇ ಇಲ್ಲಿ ಸಂಭವಿಸಿವೆ ಎಂಬುದು ಸ್ಥಳೀಯರ ಮಾತು.

ಸಣ್ಣ ನದಿಯಾದರೂ ಇಲ್ಲಿ ಹಲವರು ಮುಳುಗಿ ಜೀವ ಕಳೆದುಕೊಂಡಿದ್ದಾರಂತೆ…!

ಈ ನದಿಯಲ್ಲಿ ಬಹುತೇಕರು ಆತ್ಮಹತ್ಯೆ ಮಾಡಿಕೊಂಡವರು. ಆದರೆ, ಹೀಗೆ ಆತ್ಮಹತ್ಯೆ ಮಾಡಿಕೊಂಡವರು ಬಳಿಕ ಆತ್ಮವಾಗಿ ಇಲ್ಲಿ ಕೆಲ ದಶಕದಿಂದ ಜನರನ್ನು ಪೀಡಿಸುತ್ತಿದ್ದಾರೆ ಎಂಬುದು ಜನರ ನಂಬಿಕೆ. ಜೊತೆಗೆ, ಕತ್ತಲಾಗುತ್ತಿದ್ದಂತೆಯೇ ಈ ಪ್ರದೇಶದಲ್ಲಿ ನಮಗೆ ಯಾರೋ ಅಳುವಂತೆ ವಿಚಿತ್ರವಾದ ಶಬ್ದಗಳು ಕೇಳಿಸಿದಂತಾಗುತ್ತದೆ ಎಂದೂ ಸ್ಥಳೀಯರು ಹೇಳುತ್ತಾರೆ. ಜನರ ನಂಬಿಕೆಯೋ…? ಕಾಕತಾಳೀಯವೋ… ಬೇರೆ ನದಿಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಹೆಚ್ಚು ಆಳವಾದ ಜಾಗ ಇಲ್ಲ. ಆದರೂ ಇಲ್ಲಿ ಮುಳುಗಿ ಪ್ರಾಣಬಿಟ್ಟವರ ಸಂಖ್ಯೆಯೇ ಅಧಿಕ…! ಇದೇ ಸ್ಥಳೀಯರನ್ನು ಇನ್ನಷ್ಟು ಭಯದ ಕಡಲಿಗೆ ತಳ್ಳಿದೆ. ಜೊತೆಗೆ, ಬಗೆಗೆ ಬಗೆ ಭಯಾನಕ ಕತೆ, ನಂಬಿಕೆಗಳ ಸೃಷ್ಟಿಸಿಗೆ ಕಾರಣವಾಗಿದೆ.

ರೋಹಿಣಿ ಪ್ರದೇಶದ `ನಿಗೂಢ’ ಕತೆಗೆ ಯಾವುದೇ ಪುರಾವೆಗಳು ಸಿಗುವುದಿಲ್ಲ. ಆದರೂ ಈ ಪ್ರದೇಶ ಭಯದ ಕರಿನೆರಳಿನಲ್ಲೇ ಇದೆ…! ಮೊದಲೇ ಹೇಳಿದಂತೆ ಇದು ಹಚ್ಚಹಸುರಿನ ಸುಂದರ ಪರಿಸರ. ಆದರೆ, ಇಂತಹ ಪರಿಸರದಲ್ಲಿ ಜನ ವಾಸವಾಗಿರುವುದು ಕಾಣುವುದೇ ಇಲ್ಲ. ಕಾರಣ, ಈ ಜಾಗದ ಬಗ್ಗೆ ಹುಟ್ಟಿಕೊಂಡಿರುವ ನಿಗೂಢ ಕತೆಗಳು ಮತ್ತು ದೆವ್ವ, ಭೂತದ ಭಯಗಳು. ಹಾಗೆಂದ ಮಾತ್ರಕ್ಕೆ ಈ ಪ್ರದೇಶಕ್ಕೆ ಯಾರೂ ಹೋಗಲೇಬಾರದೆಂದಿಲ್ಲ. ನೀವೂ ಹೋಗಬೇಕೆಂದಿದ್ದರೂ ಹೋಗಬಹುದು. ಆದರೂ ಕತ್ತಲೆಯಲ್ಲಿ ಇಲ್ಲಿಗೆ ಹೋಗುವುದು ಅಷ್ಟು ಸುರಕ್ಷಿತವಲ್ಲ.

suddiyaana