ಮೊಬೈಲ್ ಪೌಚ್ ಗೆ ಲಾಟರಿ ಟಿಕೆಟ್ ಇಟ್ಟಿದ್ದೇ ಎಡವಟ್ಟಾಯ್ತು – ₹11.60 ಕೋಟಿ ಗೆದ್ದವನ ಪಾಡು ಅಯ್ಯೋ ಪಾಪ

ಮೊಬೈಲ್ ಪೌಚ್ ಗೆ ಲಾಟರಿ ಟಿಕೆಟ್ ಇಟ್ಟಿದ್ದೇ ಎಡವಟ್ಟಾಯ್ತು – ₹11.60 ಕೋಟಿ ಗೆದ್ದವನ ಪಾಡು ಅಯ್ಯೋ ಪಾಪ

ಲಾಟರಿ ಟಿಕೆಟ್ ಅನ್ನೋದೇ ಹಾಗೆ. ಕಡುಬಡವನನ್ನ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡುತ್ತದೆ. ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದವರು ದಿಢೀರ್ ಶ್ರೀಮಂತರಾಗಿಬಿಡುತ್ತಾರೆ. ಇತ್ತೀಚೆಗಷ್ಟೇ ಕೇರಳದ ಪೌರಕಾರ್ಮಿಕರು ಬರೋಬ್ಬರಿ 10 ಕೋಟಿ ರೂಪಾಯಿ ಲಾಟರಿ ಗೆದ್ದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದರು. ಇಂತಹ ಹತ್ತಾರು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ.

ಇದನ್ನೂ ಓದಿ : ಲೇಟ್‌ ಆಯ್ತು ಎಂದು ರೈಲ್ವೇ ಪ್ಲಾಟ್‌ಫಾರ್ಮ್‌ ಒಳಗೆ ಕಾರು ನುಗ್ಗಿಸಿದ ಬಿಜೆಪಿ ಸಚಿವ!

ಲಾಟರಿ ಅನ್ನೋದು ಅದೃಷ್ಟ. ಇದರಲ್ಲಿ ಕೆಲವೇ ಜನರಿಗೆ ಮಾತ್ರ ಅದೃಷ್ಟ ಹೊಲಿಯಲಿದೆ. ಹಾಗೆಯೇ ಇಲ್ಲೊಬ್ಬರು ಬರೋಬ್ಬರಿ 11.60 ಕೋಟಿ ಗೆದ್ದು ರಾತ್ರೋರಾತ್ರಿ ಕುಬೇರರಾಗಿದ್ದಾರೆ. ಸೆಂಟ್ರಲ್​ ಚೀನಾದ ಹೆನಾನ್ ಪ್ರಾಂತ್ಯದ ಲೀ ಎಂಬ ವ್ಯಕ್ತಿ ಆಗಸ್ಟ್ 16 ರಂದು ಲಾಟರಿ ಟಿಕೆಟ್ ಖರೀದಿಸಿದ್ದ. ಅದೇ ದಿನ ಸಂಜೆ, ಅವರು 10.09 ಮಿಲಿಯನ್ ಯುವಾನ್, ಅಂದರೆ ಸರಿಸುಮಾರು 11.60 ಕೋಟಿಗಳ ಜಾಕ್‌ಪಾಟ್ ಗೆದ್ದಿರುವುದಾಗಿ ತಿಳಿದಿದೆ. ತಾನು 11 ಕೋಟಿ ಗೆದ್ದಿದ್ದೇನೆಂದ ಕೂಡಲೇ ಆತ ಲಾಟರಿ ಟಿಕೆಟ್‌ಗಾಗಿ ಹುಡುಕಲು ಆರಂಭಿಸಿದ್ದಾನೆ. ಮನೆಯಲ್ಲಾ ಹುಡುಕಾಡಿದ ಮೇಲೆ ಆ ಟಿಕೆಟ್​ ತನ್ನ ಮೊಬೈಲ್​ ಪೌಚ್​ನಲ್ಲಿದೆ ಎಂಬುದು ಆತನ ಅರಿವಿಗೆ ಬಂದಿದೆ. ಸೋಮವಾರ ಲಾಟರಿ ಕೇಂದ್ರಕ್ಕೆ ಹೋಗಿ ರಿಡೀಮ್ ಮಾಡಿಕೊಳ್ಳುತ್ತೇನೆ ಎಂದುಕೊಂಡು ಲಾಟರಿ ಟಿಕೆಟ್​ಅನ್ನ ಮೊಬೈಲ್ ಕವರ್​ನಲ್ಲಿ ಇಟ್ಟಿದ್ದಾನೆ. ಆದರೆ ಅದೇ ಆತನಿಗೆ ದುಬಾರಿಯಾಗಿದೆ.

ದುರಂತವೆಂದರೆ ಆ ಟಿಕೆಟ್​ ಮೊಬೈಲ್​ನಿಂದ ಬಿಡುಗಡೆಯಾಗುವ​ ಹೀಟ್​ನಿಂದ ಅಂದ್ರೆ ಬಿಸಿಯಿಂದಾಗಿ ಮೊಬೈಲ್​ಗೆ ಅಂಟಿಕೊಂಡಿದೆ. ನಿಧಾನವಾಗಿ ತೆಗೆಯಲು ಪ್ರಯತ್ನ ಮಾಡಿದರಾದರೂ, ಅದು ಬರಲಿಲ್ಲ. ಬಲವಂತವಾಗಿ ತೆಗೆಯಲು ಪ್ರಯತ್ನಿಸಿದರೆ ಹರಿಯಬಹುದು ಎಂಬ ಭಯ ಲೀ ಗೆ ಉಂಟಾಗಿದೆ. ಇದರಿಂದ ಆತಂಕಿತನಾದ ಲೀ ಮೊಬೈಲ್​ನೊಂದಿಗೆ ಲಾಟರಿ ಅಂಗಡಿಗೆ ಓಡಿದ್ದಾನೆ. 11.60 ಕೋಟಿಯ ಜಾಕ್‌ಪಾಟ್ ತನ್ನ ಕೈಯಿಂದ ಜಾರಿ ಹೋಗಬಹುದು ಎಂದು ಲಾಟರಿ ಟಿಕೆಟ್ ಕೌಂಟರ್‌ಗೆ ಹೋಗಿ, ಅಲ್ಲಿ ನೌಕರರಿಗೆ ಮಾಹಿತಿ ನೀಡಿದ್ದಾರೆ. ನೌಕರರು ಕಷ್ಟಪಟ್ಟು ಟಿಕೆಟ್ ತೆಗೆದಿದ್ದಾರೆ. ಇದರ ನಂತರ, ಲೀ ಆ ಜಾಕ್‌ಪಾಟ್ ಪಡೆಯುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ. ಲೀ ಕಳೆದ ಎಂಟು ವರ್ಷಗಳಿಂದ ನಿರ್ದಿಷ್ಟ ಸಂಖ್ಯೆಯ ಟಿಕೆಟ್ ಖರೀದಿಸುತ್ತಿದ್ದ. ಅಂತಿಮವಾಗಿ ಅದೇ ಸಂಖ್ಯೆ ಅವರನ್ನು ಗೆಲ್ಲಿಸಿದೆ. ಈ ಹಣದಲ್ಲಿ ಈಗ ಮನೆ ಖರೀದಿಸಲು ಮುಂದಾಗಿದ್ದಾರೆ.

ಕೆಲವು ದಿನಗಳ ಹಿಂದೆ 25 ಕೋಟಿ ರೂಪಾಯಿಯ ಮೆಗಾ ಜಾಕ್‌ಪಾಟ್‌ನ ಲಾಟರಿ ಗೆದ್ದಿದ್ದ ವ್ಯಕ್ತಿ, ಟಿಕೆಟ್‌ ಅನ್ನ ಮದ್ಯದಂಗಡಿಯಲ್ಲಿ ಬಿಟ್ಟು ಹೋಗಿದ್ದ. ಅಲ್ಲಿ ಕೆಲಸ ಮಾಡುವ ಮಹಿಳೆ ಅದನ್ನು ತೆಗೆದುಕೊಂಡು ಏಜೆನ್ಸಿ ಬಳಿ ಹೋಗಿದ್ದಳು. ಆದರೆ ನಿಜವಾದ ವಿಜೇತರಾಗದ ಕಾರಣ ಅವರಿಗೆ ಹಣ ನೀಡಿರಲಿಲ್ಲ. ಬಳಿಕ ಮೆಕಾನಿಕ್ ಆಗಿದ್ದ ವ್ಯಕ್ತಿ ಲಾಟರಿ ಕೇಂದ್ರಕ್ಕೆ ತಲುಪಿದಾಗ ಲಾಟರಿ ಇಲಾಖೆಯ ನೌಕರರು ಹಣ ನೀಡಿದ್ದರು.

suddiyaana