ತವರಿನವರಿಗೂ ಸಾವಿನ ಸುದ್ದಿ ತಿಳಿಸದೆ ಪತ್ನಿ ಅಂತ್ಯಸಂಸ್ಕಾರ ಮಾಡಿದ ಪತಿ – 20 ದಿನಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ
8 ವರ್ಷದ ಹಿಂದೆ ಅವರಿಬ್ಬರು ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳು ಕೂಡ ಇದ್ದರು. ಆದರೆ ಪತ್ನಿ ಇದೇ ತಿಂಗಳ ಮೊದಲ ವಾರ ದಿಢೀರನೇ ಸಾವಿನ ಮನೆ ಸೇರಿದ್ದರು. ಪತಿ ಯಾರಿಗೂ ಹೇಳದೆ ಶವಸಂಸ್ಕಾರವನ್ನೂ ಮಾಡಿದ್ದ. ಆದರೆ ಸಾವನ್ನಪ್ಪಿದ್ದ 3 ವಾರಗಳ ಬಳಿಕ ಮತ್ತೆ ಶವವನ್ನ ಮೇಲೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅದಕ್ಕೆ ಕಾರಣವೂ ಇದೆ.
ಇದನ್ನೂ ಓದಿ : ಭಿಕ್ಷಾಟನೆಯೇ ಇವರ ಬ್ಯುಸಿನೆಸ್.. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರು ಈ ಖತರ್ನಾಕ್ ಸಹೋದರರು!
ತುಮಕೂರು ಜಿಲ್ಲೆ ಶೆಟ್ಟಿಹಳ್ಳಿಯ ನಿವಾಸಿ ವರ್ಷಿಣಿ ಎಂಬ ಮಹಿಳೆ ಇದೇ ತಿಂಗಳ 2ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಇದೀಗ ಪತಿ ಚೇತನ್ ನೇ ಆಕೆಯನ್ನ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಹೂತಿದ್ದ ಶವವನ್ನ 20 ದಿನಗಳ ನಂತರ ಅಧಿಕಾರಿಗಳು ಹೊರತೆಗೆದು ಶವಪರೀಕ್ಷೆ ನಡೆಸಿದ್ದಾರೆ. ತುಮಕೂರು ಎಸಿ ನೇತೃತ್ವದಲ್ಲಿ ಶವವನ್ನ ಸಿಬ್ಬಂದಿ ಹೊರತೆಗೆದಿದ್ದಾರೆ. ಶವವನ್ನ ಹೊರತೆಗೆದು ಪೋಸ್ಟ್ ಮಾರ್ಟಂ (postmortem) ನಡೆಸಲಿದ್ದಾರೆ. ತುಮಕೂರು (Tumkur) ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಶೆಟ್ಟಿಹಳ್ಳಿ ನಿವಾಸಿ ವರ್ಷಿಣಿ ಎಂಬ ಗೃಹಿಣಿ ಇದೇ ತಿಂಗಳು 2ನೇ ತಾರೀಖು ಸಾವನ್ನಪ್ಪಿದ್ದರು.ಈ ವೇಳೆ ಪತಿ ಚೇತನ್, ಪತ್ನಿ ವರ್ಷಿಣಿಯ ಹೆತ್ತವರಿಗೂ ತಿಳಿಸದೇ ಆಕೆಯನ್ನ ಮಣ್ಣು ಮಾಡಿ ಬಂದಿದ್ದ. ಇದರಿಂದ ಅನುಮಾನಗೊಂಡ ಪೋಷಕರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಚೇತನ್, 2014 ರಲ್ಲಿ ವರ್ಷಿಣಿಯನ್ನ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳು ಇದ್ದಾರೆ.
ಇನ್ನು ಅನುಮಾನದ ಪಿಶಾಚಿಯಾಗಿದ್ದ ಗಂಡ ಚೇತನ್ ಮದುವೆಯಾಗಿದ್ದಾಗಿನಿಂದಲೂ ಹೆಂಡತಿಯನ್ನ ಮನೆಯಲ್ಲೇ ಬಂಧಿಸಿಟ್ಟಿದ್ದ. ಆಗಾಗ ವರದಕ್ಷಿಣೆ ಕಿರುಕುಳವನ್ನ ಕೂಡ ನೀಡ್ತಿದ್ದ ಅಂತಾ ಪೋಷಕರು ಆರೋಪ ಮಾಡಿದ್ದಾರೆ. ಹೀಗಾಗಿ ಅವನೇ ಹೆಂಡತಿಯನ್ನ ಕೊಲೆ ಮಾಡಿ, ಮಣ್ಣು ಮಾಡಿದ್ದಾನೆ ಅಂತಾ ವರ್ಷಿಣಿ ಹೆತ್ತವರು ಆರೋಪಿಸುತ್ತಿದ್ದಾರೆ. ಹೆತ್ತವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ. ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.