ಹಬ್ಬಕ್ಕೆ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರು – ಹೂವು, ಹಣ್ಣುಗಳ ಬೆಲೆ ಭಾರಿ ಏರಿಕೆ
ಬೆಂಗಳೂರು: ದೇಶದಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನಲೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಸಿಲಿಕಾನ್ ಸಿಟಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂ ಹಾಗೂ ಹಣ್ಣುಗಳ ದರದಲ್ಲಿ ಏರಿಕೆಯಾಗಿರುವುದು ಹಬ್ಬದ ಸಂಭ್ರಮದಲ್ಲಿದ್ದವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್! – ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ ಒಂದು ಕೋಟಿವರೆಗೆ ಬಹುಮಾನ!
ಹೂವು, ಹಣ್ಣುಗಳ ಹಾಗೂ ಇತರೆ ಸಾಮಾಗ್ರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ. ಶುಕ್ರವಾರ ನಡೆಯಲಿರುವ ಹಬ್ಬದ ತಯಾರಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಜನ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಯಶವಂತಪುರ, ಕಲಾಸಿಪಾಳ್ಯ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಜನರ ಖರೀದಿ ಭರಾಟೆಯೂ ಹೆಚ್ಚಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಹೂವು ಹಾಗೂ ಹಣ್ಣುಗಳ ದರ ಹೀಗಿದೆ..
- ಮಲ್ಲಿಗೆ ಕೆ.ಜಿ.ಗೆ 600 ರಿಂದ 800 ರೂಪಾಯಿ
- ಕನಕಾಂಬರ- ಕೆ.ಜಿ.ಗೆ 1,200 ರಿಂದ 1,500 ರೂಪಾಯಿ
- ಗುಲಾಬಿ-150 ರಿಂದ 200 ರೂಪಾಯಿ
- ಚಿಕ್ಕ ಹೂವಿನ ಹಾರ-150ರಿಂದ 200 ರೂ. ರೂಪಾಯಿ
- ದೊಡ್ಡ ಹೂವಿನ ಹಾರ-300 ರಿಂದ 500 ರೂಪಾಯಿ
- ಮರಳೆ ಹೂವು- 600 ರಿಂದ 700 ರೂಪಾಯಿ
- -250 ರಿಂದ 300 ರೂಪಾಯಿ
- ತಾವರೆ ಹೂ-ಜೋಡಿ-50 ರಿಂದ 100 ರೂಪಾಯಿ
- ಏಲಕ್ಕಿ ಬಾಳೆ-120 ರಿಂದ 140 ರೂಪಾಯಿ
- ಸೀಬೆ-120 ರೂಪಾಯಿ
- ಸೇಬು-200-300 ರೂಪಾಯಿ
- ಕಿತ್ತಲೆ-150 ರಿಂದ 200 ರೂಪಾಯಿ
- ದ್ರಾಕ್ಷಿ-180-200 ರೂಪಾಯಿ
- ಪೈನಾಪಲ್-80ರೂ.ಗೆ 1 ಹಣ್ಣು
- ದಾಳಿಂಬೆ-150-200 ರೂಪಾಯಿ
ಇತರೆ ವಸ್ತುಗಳ ಬೆಲೆ
- ಬಾಳೆ ಕಂಬ -ಜೋಡಿಗೆ-50 ರೂಪಾಯಿ
- ಮಾವಿನ ತೋರಣ-20 ರೂಪಾಯಿ
- ವಿಳ್ಯದೆಲೆ-100 ಕ್ಕೆ 150 ರೂಪಾಯಿ
- ತೆಂಗಿನಕಾಯಿ-5ಕ್ಕೆ 100 ರೂಪಾಯಿ