ಕೇಂದ್ರ ಸರ್ಕಾರದಿಂದ ಬಂಪರ್‌ ಗಿಫ್ಟ್‌! – ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ ಒಂದು ಕೋಟಿವರೆಗೆ ಬಹುಮಾನ!

ಕೇಂದ್ರ ಸರ್ಕಾರದಿಂದ ಬಂಪರ್‌ ಗಿಫ್ಟ್‌! – ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ ಒಂದು ಕೋಟಿವರೆಗೆ ಬಹುಮಾನ!

ಕೇಂದ್ರ ಸರ್ಕಾರ ಸಾಕಷ್ಟು ಜನಪರವಾದ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಇದೀಗ ಮತ್ತೊಂದು ಜನಪರ ಯೋಜನೆಯನ್ನು ಸರ್ಕಾರ ಜನರಿಗೆ ಪರಿಚಯಿಸುತ್ತಿದೆ. ಗ್ರಾಹಕರು ತಾವು ಖರೀದಿಸುವ ಪ್ರತಿ ವಸ್ತುಗಳ ಬಿಲ್‌ ಅನ್ನು ಪಡೆದರೆ 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಕೇಂದ್ರ ಬಹುಮಾನವಾಗಿ ನೀಡಲಿದೆ!

ಹೌದು, ಕೇಂದ್ರ ಸರ್ಕಾರವು ‘ಮೇರಾ ಬಿಲ್‌ ಮೇರಾ ಅಧಿಕಾರ್‌’ (ನನ್ನ ಬಿಲ್‌ ನನ್ನ ಅಧಿಕಾರ) ಎಂಬ ಹೊಸ ಜಿಎಸ್‌ಟಿ ಇನ್‌ವಾಯ್ಸ್‌ (ಬಿಲ್‌) ಪ್ರೋತ್ಸಾಹಕ ಬಹುಮಾನ ಯೋಜನೆಯೊಂದನ್ನು ಪ್ರಕಟಿಸಿದೆ. ಇದನ್ನು ಮೊದಲು 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಸೆ.1ರಿಂದ ಯೋಜನೆ ಆರಂಭವಾಗಲಿದ್ದು 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ: ಒಂದೇ ರನ್‌ವೇಯಲ್ಲಿ ಏಕಕಾಲಕ್ಕೆ ಎರಡು ವಿಮಾನಗಳು ಟೇಕ್‌ಆಫ್‌ ! – ಮುಂದೇನಾಯ್ತು ಗೊತ್ತಾ?

ಗ್ರಾಹಕರು ವಸ್ತುಗಳನ್ನು ಖರೀದಿ ಮಾಡುವಾಗ ಪ್ರತಿ ಬಾರಿ ಬಿಲ್ ಕೇಳುವಂತೆ ಪ್ರೇರೇಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದನ್ನು ಅಸ್ಸಾಂ, ಗುಜರಾತ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಮನ್‌ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮೊದಲಿಗೆ ಆರಂಭಿಸಲಾಗುತ್ತಿದೆ ‘ಮೇರಾ ಬಿಲ್ ಮೇರಾ ಅಧಿಕಾರ್‌’ಮೊಬೈಲ್ ಆ್ಯಪ್‌ ಐಒಎಸ್‌ ಹಾಗೂ ಆ್ಯಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ.

ಲಕ್ಕಿ ಡ್ರಾಗಾಗಿ ಪರಿಗಣಿಸಬೇಕಾದ ಬಿಲ್‌ ರಸೀದಿಯ ಕನಿಷ್ಠ ಖರೀದಿ ಮೌಲ್ಯವು 200 ರೂಪಾಯಿ ಆಗಿದೆ. ಒಬ್ಬರು 1 ತಿಂಗಳಲ್ಲಿ ಗರಿಷ್ಠ 25 ಬಿಲ್‌ಗಳನ್ನು ಆ್ಯಪ್‌ನಲ್ಲಿ ಅಪ್‌ಡೇಟ್‌ ಮಾಡಬಹುದು. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾ ಮಾಡಲಾಗುವುದು ಮತ್ತು ವಿಜೇತರು 10 ಸಾವಿರ ರು.ನಿಂದ 1 ಕೋಟಿ ರು.ವರೆಗೆ ನಗದು ಬಹುಮಾನಕ್ಕೆ ಅರ್ಹರಾಗುತ್ತಾರೆ. ಜಿಎಸ್‌ಟಿಯಲ್ಲಿ (GST) ನೋಂದಾಯಿತವಾದ ಎಲ್ಲ ಪೂರೈಕೆದಾರರ ಬಿಲ್‌ಗಳು ಯೋಜನೆಗೆ ಅರ್ಹವಾಗಿರುತ್ತವೆ. ಜಿಎಸ್‌ಟಿ ನಂಬರ್‌, ಇನ್‌ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಬಿಲ್‌ಗಳು ಹೊಂದಿರಬೇಕು ಎಂದು ಕೇಂದ್ರ ಹೇಳಿದೆ.

suddiyaana