ನಾಗಿನ್ ಡ್ಯಾನ್ಸ್ ಮಾಡುತ್ತಿದ್ದ ವೇಳೆ ನಾಗರಹಾವು ಪ್ರತ್ಯಕ್ಷ! – ಹುಟ್ಟುಹಬ್ಬದಂದೇ ಆಸ್ಪತ್ರೆ ಸೇರಿದ ಯುವಕ!
ಯಾವುದೇ ಸಮಾರಂಭಗಳಿರಲಿ ಅನೇಕರು ನಾಗಿನ್ ನೃತ್ಯವನ್ನು ಮಾಡುತ್ತಾರೆ. ಮನಬಂದಂತೆ ಕುಣಿದು ಕುಪ್ಪಳಿಸುತ್ತಾರೆ. ಇಲ್ಲೊಬ್ಬ ತನ್ನ ಹುಟ್ಟುಹಬ್ಬ ಆಚರಿಸಿದ್ದಾನೆ. ಸೆಲೆಬ್ರೆಷನ್ ಮೂಡ್ನಲ್ಲಿದ್ದಾತ ಕಂಠಪೂರ್ತಿ ಕುಡಿದು ನಾಗಿನ್ ನೃತ್ಯ ಮಾಡಿದ್ದಾನೆ. ಮೋಜಿನಲ್ಲಿದ್ದಾತ ಕುಡಿದ ಮತ್ತಿನಲ್ಲಿ ಜೀವಂತ ಹಾವನ್ನು ಕೈಯಲ್ಲಿ ಹಿಡಿದು ಕಚ್ಚಿಕೊಂಡು ಹುಟ್ಟುಹಬ್ಬದಂದೇ ಆಸ್ಪತ್ರೆ ಸೇರಿದ್ದಾನೆ.
ಈ ಘಟನೆ ರಾಜಸ್ಥಾನದ ಅಲ್ವಾರ್ ಎಂಬಲ್ಲಿ ನಡೆದಿದೆ. ದೀಪಕ್ ಮೇಘವಾಲ್ ಎಂಬ ಯುವಕ ತನ್ನ ಬರ್ತ್ಡೇ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಡಿಜೆಯಲ್ಲಿ ನಾಗಿನ್ ನೃತ್ಯವನ್ನು ಪ್ರದರ್ಶಿಸಿದ್ದಾನೆ. ಈ ವೇಳೆ ನಿಜವಾದ ನಾಗರಹಾವು ಅಲ್ಲಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಆತ ಜೀವಂತ ಹಾವನ್ನು ಕೈಯಲ್ಲಿ ಹಿಡಿದುಕೊಂಡು ನೃತ್ಯ ಮಾಡಲು ಆತ ಶುರು ಮಾಡಿದ್ದಾನೆ.
ಇದನ್ನೂ ಓದಿ: ಮಗನ ಮದುವೆಗೆ ತಂದೆಯೇ ದುಷ್ಮನ್! – ಗಡ್ಡ ಶೇವ್ ಮಾಡಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಅಪ್ಪ!
ಕುಡಿದ ಮತ್ತಿನಲ್ಲಿ ಆತ ಜೀವಂತ ಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಯುವಕನ ಈ ಕೃತ್ಯದಿಂದ ಕೋಪಗೊಂಡ ಹಾವು ಆತನಿಗೆ ಕಚ್ಚಿದೆ. ಬಳಿಕ ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆಯೂ ಆತ ಹಾವನ್ನು ಕೈಯಲ್ಲಿ ಹಿಡಿದು ಬೈಕ್ನಲ್ಲಿ ತೆರಳಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಜನರು ದೀಪಕ್ ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಆಸ್ಪತ್ರೆಗೆ ಹೋಗಬೇಕಾದರೂ ಸಹ ಆತನ ಕೈಯಲ್ಲಿ ಹಾವನ್ನು ಸಹ ನೋಡಬಹುದಾಗಿದೆ.
ಈ ಕುರಿತು ಮಾತನಾಡಿರುವ ಆತನ ಸಂಬಂಧಿಕರು, ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದೀಪಕ್ ಕುಡಿದ ಅಮಲಿನಲ್ಲಿ ಹಾವನ್ನು ಹಿಡಿದಿದ್ದಾನೆ. ಅವರು ಬಹಳಷ್ಟು ನಿರಾಕರಿಸಿದರೂ ಆತ ಒಪ್ಪಲಿಲ್ಲ. ರಾತ್ರಿಯೇ ಆತನನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದ್ದಾರೆ.