ಒಂದೇ ರನ್‌ವೇಯಲ್ಲಿ ಏಕಕಾಲಕ್ಕೆ ಎರಡು ವಿಮಾನಗಳು ಟೇಕ್‌ಆಫ್‌ ! – ಮುಂದೇನಾಯ್ತು ಗೊತ್ತಾ?

ಒಂದೇ ರನ್‌ವೇಯಲ್ಲಿ ಏಕಕಾಲಕ್ಕೆ ಎರಡು ವಿಮಾನಗಳು ಟೇಕ್‌ಆಫ್‌ ! – ಮುಂದೇನಾಯ್ತು ಗೊತ್ತಾ?

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನವೊಂದಕ್ಕೆ ಲ್ಯಾಂಡಿಂಗ್​​​​ಗೆ ಅನುಮತಿ ನೀಡಿರುವ ವೇಳೆಯೇ ಮತ್ತೊಂದು ವಿಸ್ತಾರ ವಿಮಾನಕ್ಕೆ ಟೇಕ್‌ ಆಫ್‌ ಕ್ಲಿಯರೆನ್ಸ್‌ ನೀಡಿದ ಘಟನೆ ನಡೆದಿದೆ. ಸಿಬ್ಬಂದಿಗಳ ಅಜಾಗರೂಕತೆ ಭಾರಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ದೆಹಲಿ-ಬಾಗ್ಡೋಗ್ರಾ ವಿಮಾನವು ಇತ್ತೀಚೆಗೆ ಉದ್ಘಾಟನೆಗೊಂಡ ರನ್‌ವೇಯಲ್ಲಿ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನಿಂದ ಬರುತ್ತಿದ್ದ ವಿಸ್ತಾರಾ ವಿಮಾನವು ಇದೇ ರನ್‌ವೇಯಲ್ಲಿ ಬಂದು ಇಳಿದಿದೆ. ತಕ್ಷಣ ರನ್‌ವೇಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಟೇಕ್​​ ಆಫ್​​ ಆಗುತ್ತಿದ್ದ ವಿಮಾನಕ್ಕೆ ವಾಯು ಸಂಚಾರ ನಿಯಂತ್ರಣಾಲಯ (ATC) ಸೂಚನೆ ನೀಡಿದೆ.

ಇದನ್ನೂ ಓದಿ: ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್‌ ಲಿಸ್ಟ್ ಬಿಡುಗಡೆ! – ಕಳಪೆ ದರ್ಜೆಯ ಆಹಾರ ಎಂಬ ಕುಖ್ಯಾತಿ ಪಡೆದ ದಹಿಪುರಿ!

ಇನ್ನು ಎರಡೂ ವಿಮಾನಗಳಿಗೆ ಏಕಕಾಲದಲ್ಲಿ ಒಂದೇ ರನ್‌ವೇಯಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್​​ಗೆ ಅನುಮತಿ ನೀಡಲಾಗಿತ್ತು. ಆದರೆ ತಕ್ಷಣ ATC (ವಾಯು ಸಂಚಾರ ನಿಯಂತ್ರಣಾಲಯ) ನಿಯಂತ್ರಣ ತೆಗೆದುಕೊಂಡು ಭಾರೀ ಅನಾಹುತವನ್ನು ತಪ್ಪಿಸಿದೆ. ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ಎಟಿಸಿ ಅಧಿಕಾರಿಯು ಟೇಕ್-ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ವಿಸ್ತಾರಾ ವಿಮಾನದ ಲ್ಯಾಂಡಿಂಗ್​​​ಗೆ ನಿರ್ದೇಶಿಸಲಾಗಿತ್ತು.

ಇನ್ನು ವಿಮಾನಯಾನ ಅಧಿಕಾರಿಗಳು ದೆಹಲಿಯಿಂದ ಬಾಗ್ಡೋಗ್ರಾ ಹೋರಾಟ ವಿಮಾನದ ಇಂಧನ ಮೀಸಲು ಪರೀಕ್ಷೆ ಮತ್ತು ಬಾಗ್ಡೋಗ್ರಾ ಗಮ್ಯಸ್ಥಾನದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ನೋಡಿಕೊಂಡು ಟೇಕ್​​ ಆಪ್ ಮಾಡಲಾಗುವುದು ಎಂದು ಹೇಳಿದ್ದರು. ಒಂದು ವೇಳೆ ಟೇಕ್​​ ಆಪ್​​​ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿದ್ದರೆ ಖಂಡಿತ ದೊಡ್ಡ ಅನಾಹುತವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳು ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಕಾರ್ಯವಿಧಾನಗಳ ಸಮಯದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇನ್ನು ATC ಯಿಂದ ಬಂದ ಸೂಚನೆಯಂತೆ ಟೇಕ್-ಆಫ್ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದು ಪೈಲೆಟ್​​ ಹೇಳಿದಾಗ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಆಂತಕ ಉಂಟಾಗಿದೆ ಎಂದು ಹೇಳಿದ್ದಾರೆ. ನಂತರ ಎಲ್ಲವನ್ನು ನೋಡಿಕೊಂಡು ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟಕ್ಕೆ ಟೇಕ್​​ ಆಫ್ ಆದೇಶವನ್ನು ನೀಡಲಾಗಿದೆ.

suddiyaana