ಬಹುನಿರೀಕ್ಷಿತ ‘ಕಾಂತಾರ 2’ ಚಿತ್ರದ ಬಜೆಟ್ ರಿವೀಲ್! – ಎಲ್ಲೆಲ್ಲಿ ಶೂಟಿಂಗ್ ನಡೆಯಲಿದೆ ಗೊತ್ತಾ?

ಬಾಕ್ಸ್ ಆಫೀಸಲ್ಲಿ ಗೆಲುವಿನ ಜಯಭೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಂಡ ‘ಕಾಂತಾರ’ ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ. ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ರಿಲೀಸ್ ಆಗಿ, ಹಿಟ್ ಕೂಡ ಆಗಿದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಈ ಸಿನಿಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ಟಿ ಅವರ ತಂಡ ಕಾಂತಾರ 2 ಸಿನಿಮಾ ತಯಾರಿಯಲ್ಲಿದೆ. ಇದೀಗ ಕಾಂತಾರ ಪಾರ್ಟ್ 2 ಎಷ್ಟು ಬಜೆಟ್ನಲ್ಲಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ರಿವೀಲ್ ಆಗಿದೆ.
ಇದನ್ನೂ ಓದಿ: 37ನೇ ವಸಂತಕ್ಕೆ ಕಾಲಿಟ್ಟ ನಟರಾಕ್ಷಸ ಡಾಲಿ ಧನಂಜಯ್ – ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಶೈಲಿಯ ಭರ್ಜರಿ ಭೋಜನ
ಕಾಂತಾರಾ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಕಾಂತಾರ-2 ಬಗ್ಗೆ ದೇಶಾದ್ಯಂತ ಜನರಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ ಇದೀಗ ಪಾರ್ಟ್-2 ಮೂಲಕ ಮೋಡಿ ಮಾಡಲು ರೆಡಿಯಾಗುತ್ತಿದೆ. ‘ಕಾಂತಾರ 2’ ಚಿತ್ರದ ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಕಾಂತಾರ ಪಾರ್ಟ್ – 2 ಎಷ್ಟು ಬಜೆಟ್ನಲ್ಲಿ ನಿರ್ಮಾಣವಾಗಲಿದೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಇತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಷಭ್ ಶೆಟ್ಟಿ ನಟನೆಯ ಈ ಸಿನಿಮಾವನ್ನು 125 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರೀಕರಣ ನವೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
‘ಕಾಂತಾರ 1’ ನಿರೀಕ್ಷೆಗೂ ಮೀರಿ ಭಾರಿ ಹಿಟ್ ಆಗಿತ್ತು. ಇದೀಗ ಚಿತ್ರದ ಎರಡನೇ ಭಾಗದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು, ಸಿನಿಮಾದ ಕಥೆ ಹೇಗಿರಲಿದೆ ಎಂಬ ಹಲವು ಲೆಕ್ಕಾಚಾರಗಳು ಪ್ರೇಕ್ಷಕರು ಮತ್ತು ಅಭಿಮಾನಿಗಳಲ್ಲಿ ಮೂಡಿದೆ ಎಂದೇ ಹೇಳಬಹುದು. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನು ಪೂರ್ಣಗೊಳಿಸಿರುವ ರಿಷಭ್, ಚಿತ್ರೀಕರಣದ ಪ್ರಾರಂಭಕ್ಕೆ ಎದುರು ನೋಡುತ್ತಿದ್ದಾರೆ. ಕಾಂತಾರ 2 ಸಿನಿಮಾದ ಮೊದಲ ಭಾಗ ರಿಷಬ್ ಶೆಟ್ಟಿ ಅವರ ಹುಟ್ಟೂರು ಕುಂದಾಪುರದಲ್ಲಿ ನಡೆಯಲಿದ್ದು, ಸಿನಿಮಾದ ಉಳಿದ ಭಾಗದ ಚಿತ್ರೀಕರಣ ಮಂಗಳೂರಿನ ಆಸುಪಾಸಿನಲ್ಲಿ ನಡೆಯಲಿದೆ. ಕಾಂತಾರ 2 ಸಿನಿಮಾದಲ್ಲಿ ಕಾಡು, ಹಳ್ಳಿ ಪ್ರದೇಶ, ನೀರು ಇರುವಂತಹ ಪ್ರದೇಶದಲ್ಲಿಯೇ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ.

ನೋಡಿರಿ

