ಮದುವೆಗೂ ಮುನ್ನಆದಿಲ್ ನನ್ನನ್ನು ಗರ್ಭಿಣಿ  ಮಾಡಿದ್ದ.. ಪಡಬಾರದ ಕಷ್ಟ ಪಟ್ಟಿದ್ದೇನೆ! – ಮತ್ತೊಂದು ಆರೋಪ ಮಾಡಿದ ರಾಖಿ ಸಾವಂತ್‌

ಮದುವೆಗೂ ಮುನ್ನಆದಿಲ್ ನನ್ನನ್ನು ಗರ್ಭಿಣಿ  ಮಾಡಿದ್ದ.. ಪಡಬಾರದ ಕಷ್ಟ ಪಟ್ಟಿದ್ದೇನೆ! – ಮತ್ತೊಂದು ಆರೋಪ ಮಾಡಿದ ರಾಖಿ ಸಾವಂತ್‌

ನಟಿ ರಾಖಿ ಸಾವಂತ್‌ ಯಾವಾಗಲೂ ವಿವಾದದ ಮೂಲಕವೇ ಸುದ್ದಿಯಾಗುತ್ತಾರೆ. ಚಿತ್ರರಂಗದಲ್ಲಿ ಆಕೆಗೆ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ರಾಖಿ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಮೂಲಕವೇ ಭಾರಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್​ ಖಾನ್​ ದುರಾನಿ ಜೊತೆ ರಾಖಿ ಸಾವಂತ್​ ಮದುವೆ ಆಗಿದ್ದ ವಿಷಯ ಬಹಳ ದಿನಗಳ ಬಳಿಕ ಹೊರಬಿತ್ತು. ಆದರೆ ಅವರಿಬ್ಬರು ಹೆಚ್ಚು ದಿನಗಳ ಕಾಲ ಜೊತೆಯಾಗಿ ಸಂಸಾರ ಮಾಡಲಿಲ್ಲ. ಇಬ್ಬರ ನಡುವೆ ಬರೀ ಕಲಹಗಳೇ ಹೆಚ್ಚಾಗಿ ಇತ್ತು. ಅದರಿಂದ ಆದಿಲ್​ ಖಾನ್​ ಜೈಲಿಗೂ ಹೋಗಬೇಕಾಯಿತು. ಜೈಲಿನಿಂದ ಹೊರಬರುತ್ತಿದ್ದಂತೆ ಆದಿಲ್‌ ಖಾನ್‌ ಹಾಗೂ ರಾಖಿ ಸಾವಂತ್‌ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆದಿಲ್‌ ವಿರುದ್ಧ ರಾಖಿ ಸಾವಂತ್‌ ಮತ್ತೊಂದು ಗುರುತರ ಆರೋಪ ಮಾಡಿದ್ದಾರೆ. ಮದುವೆಗೂ ಮುಂಚೆ ಆದಿಲ್ ತನ್ನನ್ನು ಗರ್ಭಿಣಿ ಮಾಡಿದ್ದ. ಮದುವೆಗೂ ಮುಂಚೆ ನಾನು ಪ್ರಗ್ನೆಂಟ್ ಆಗಿ ಪಡಬಾರದ ಕಷ್ಟ ಪಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅಂಕಲ್ ನನ್ನ ಖಾಸಗಿ ಅಂಗಗಳನ್ನ ಮುಟ್ಟುತ್ತಿದ್ದರು.. ಗರ್ಭಿಣಿ ಆದಾಗ ಆಂಟಿ ಮಾತ್ರೆ ಕೊಟ್ಟರು – ಭಯಾನಕ ಸತ್ಯ ಹೇಳಿದ ಅತ್ಯಾಚಾರ ಸಂತ್ರಸ್ತೆ

ಆದಿಲ್‌ ಖಾನ್‌ ಜೈಲಿನಿಂದ ಹೊರಬರುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ್ದರು. ತಮಗೆ ರಾಖಿಯಿಂದ ಆದ ಮೋಸದ ಎಲ್ಲ ವಿವರವನ್ನೂ ಬಿಚ್ಚಿಟ್ಟಿದ್ದರು. ಇದೀಗ ರಾಖಿ ಪತ್ರಿಕಾಗೋಷ್ಠಿ ನಡೆಸಿ, ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ. ಮದುವೆಗೂ ಮುಂಚೆ ಆದಿಲ್ ತನ್ನನ್ನು ಗರ್ಭಿಣಿ  ಮಾಡಿದ್ದ. ಮದುವೆಗೂ ಮುಂಚೆ ನಾನು ಪ್ರಗ್ನೆಂಟ್ ಆಗಿ ಪಡಬಾರದ ಕಷ್ಟ ಪಟ್ಟಿದ್ದೇನೆ. ನಾನು ಹಿಂದೂವಾಗಿ ಮುಸ್ಲಿಂ ಧರ್ಮಾಚರಣೆಗಳನ್ನು ಮಾಡುತ್ತಿದ್ದೇನೆ. ಆದಿಲ್ ಒಬ್ಬ ಮುಸ್ಲಿಂ ಆಗಿ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಮುಸ್ಲಿಂ ಜನಾಂಗಕ್ಕೆ ಅವನು ಕಳಂಕ ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಮಂಗಳವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಆದಿಲ್‌ ಮಾತನಾಡಿ ‘ರಾಖಿ ಗರ್ಭಚೀಲವನ್ನು ತೆಗೆಸಿಕೊಂಡಿದ್ದಾಳೆ. ಆಕೆಗೆ ಮಗು ಪಡೆಯುವ ಸಾಮರ್ಥ್ಯವಿಲ್ಲ. ಹಾಗಾಗಿ ಆಕೆಗೆ ಮಗುವಾಗುವುದಿಲ್ಲ’ ಎಂದು ಹೇಳಿದ್ದರು. ಅಂದೇ ವೈದ್ಯರೊಂದಿಗೆ ವಿಡಿಯೋ ಲೈವ್ ಮಾಡಿದ್ದ ರಾಖಿ, ತನಗೆ ಮಗು ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಗರ್ಭಕೋಶದಲ್ಲಿ ಸಮಸ್ಯೆಯಿದ್ದ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದರ ಬಗ್ಗೆಯೂ ಹೇಳಿದ್ದರು.

ಆದಿಲ್ ಮತ್ತು ರಾಖಿ ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಗಂಭೀರವಾದ ವಿಷಯಗಳನ್ನೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರೂ ಯಾವುದೇ ರೀತಿಯಲ್ಲಿ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಯಾರದು, ಸರಿ ಹಾಗೂ ಯಾರದು ತಪ್ಪು ಎನ್ನುವುದನ್ನು ಕೋರ್ಟ್ ನಲ್ಲೇ ನಿರ್ಣಯ ಮಾಡಿಕೊಳ್ಳಬೇಕಿದೆ.

suddiyaana