ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್ಫುಡ್ ಲಿಸ್ಟ್ ಬಿಡುಗಡೆ! – ಕಳಪೆ ದರ್ಜೆಯ ಆಹಾರ ಎಂಬ ಕುಖ್ಯಾತಿ ಪಡೆದ ದಹಿಪುರಿ!
ದೇಶದಾದ್ಯಂತ ಸ್ಟ್ರೀಟ್ ಫುಡ್ಗಳು ಬೇಕಾದಷ್ಟು ಇವೆ. ಚಾಟ್ಸ್.. ಬಜ್ಜಿ, ಬೋಂಡಾ.. ಬೆಳಗಿನ ಉಪಹಾರ ಹೀಗೆ ಸಾಕಷ್ಟು ಆಹಾರಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತದೆ. ರಸ್ತೆ ಬರಿಯಲ್ಲಿ ಸಿಗುವ ಪಾನಿಪೂರಿ, ಮಸಾಲ್ ಪೂರಿ, ಟಿಕ್ಕಿ ಪೂರಿ, ಭೇಲ್ ಪೂರಿ, ದಹಿ ಪೂರಿ ಹೀಗೆ ಎಲ್ಲವನ್ನೂ ಇಷ್ಟಪಟ್ಟು ತಿನ್ನುತ್ತಾರೆ. ಇದೀಗ ಆನ್ಲೈನ್ ಫುಡ್ ಮತ್ತು ಟ್ರಾವೆಲ್ ಗೈಡ್ ಟೇಸ್ಟ್ ಅಟ್ಲಾಸ್, ಅತ್ಯಂತ ಕೆಟ್ಟ ದರ್ಜೆಯ ಬೀದಿ ಬದಿ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮಾಡೋದು 1 ಗಂಟೆ ಕೆಲಸ.. ಪಡೆಯೋದು ₹1.2 ಕೋಟಿ ಸಂಬಳ – ಬೋನಸ್ ಜೊತೆಗೆ ಸಿಗುತ್ತೆ ಹಲವು ಸೌಲಭ್ಯ
ಆನ್ಲೈನ್ ಫುಡ್ ಮತ್ತು ಟ್ರಾವೆಲ್ ಗೈಡ್ ಟೇಸ್ಟ್ ಅಟ್ಲಾಸ್, ಅತ್ಯಂತ ಕಳಪೆ ದರ್ಜೆಯ ಭಾರತೀಯ ಬೀದಿ ಬದಿ ಆಹಾರಗಳು ಯಾವುವು ಎಂದು ಅಧ್ಯಯನ ಮಾಡಿದ್ದು. ಇರದ ಪಟ್ಟಿ ಬಿಡುಗಡೆ ಮಾಡಿದೆ. ಈ ಅಧ್ಯಯನದಲ್ಲಿ ಒಟ್ಟು 2,508 ರೇಟಿಂಗ್ ಪಡೆದಿದೆ. ಇದರಲ್ಲಿ ಕೇವಲ 1,773 ಕಾನೂನು ಬದ್ಧವಾಗಿ ಪಡೆದ ರೇಟಿಂಗ್ ಎಂದು ಟೇಸ್ಟ್ ಆಟ್ಲಾಸ್ ತಿಳಿಸಿದೆ. ಇನ್ನು ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಹಲವರ ಫೇವರಿಟ್, ಮಹಾರಾಷ್ಟ್ರದ ಪ್ರಸಿದ್ಧ ದಹಿಪುರಿ ಅಗ್ರಸ್ಥಾನ ಪಡೆದಿದೆ. ಮಧ್ಯಪ್ರದೇಶದ ಸೇವ್ ಎರಡನೇಯ ಅತಿ ಕೆಟ್ಟ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಆಲೂಗೆಡ್ಡೆ ಸ್ಮ್ಯಾಶ್ ಮಾಡಿ, ಬನ್ ನಡುವೆ ಸೇರಿಸಿ ಕೊಡುವ ಗುಜರಾತ್ ಮೂಲದ ಸ್ಟ್ರೀಟ್ ದಾಬೇಲಿ ಮೂರನೇ ಸ್ಥಾನದಲ್ಲಿದೆ.
ಇನ್ನು ಕೆಟ್ಟ ಆಹಾರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಬಾಂಬೆ ಸ್ಯಾಂಡ್ವಿಚ್ ಪಡೆದುಕೊಂಡಿದೆ. ಎಗ್ ಬುರ್ಜಿ, ದಹಿ ವಡಾ ಮತ್ತು ಸಾಬುದಾನ ವಡಾ ಇವು ಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನ ಗಳಿಸಿವೆ. ಇನ್ನು 8ನೇ ಸ್ಥಾನಗಳಿಸಿರುವುದು ಉತ್ತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಖ್ಯಾತಿ ಪಡೆದಿರುವ ಪುರಿ ಚಾಟ್. ಇದಕ್ಕೂ ಕೂಡ ಕಡಿಮೆ ರೇಟಿಂಗ್ ಸಿಕ್ಕಿದ್ದು ಕೆಟ್ಟ ತಿಂಡಿ ಎನ್ನಿಸಿದೆ. ಒಂಬತ್ತನೇ ಸ್ಥಾನದಲ್ಲಿ ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಯಾದ ಗೋಬಿ ಪರೋಟವಿದೆ. ಭಾರತದಲ್ಲಿ ಲಭ್ಯವಿರೋ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್ಗಳ ಲಿಸ್ಟ್ನ ಕೊನೆಯ ಸ್ಥಾನದಲ್ಲಿ ಕರಿದ ತಿನಿಸು ಹಾಗೂ ಎಲ್ಲರೂ ಇಷ್ಟಪಡುವ ಬೋಂಡಾವಿದೆ.