ವಿಶ್ವಕಪ್ಗೂ ಮುನ್ನ ಕಿಂಗ್ ಕೊಹ್ಲಿಗೆ ಡೈಮಂಡ್ ಬ್ಯಾಟ್ ಗಿಫ್ಟ್! – ಅಬ್ಬಬ್ಬಾ.. ಇದರ ಬೆಲೆ ಇಷ್ಟೊಂದಾ?
![ವಿಶ್ವಕಪ್ಗೂ ಮುನ್ನ ಕಿಂಗ್ ಕೊಹ್ಲಿಗೆ ಡೈಮಂಡ್ ಬ್ಯಾಟ್ ಗಿಫ್ಟ್! – ಅಬ್ಬಬ್ಬಾ.. ಇದರ ಬೆಲೆ ಇಷ್ಟೊಂದಾ?](https://suddiyaana.com/wp-content/uploads/2023/08/15-4.jpg)
ಭಾರತದ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು 15 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆ ವಿರಾಟ್ ಕೊಹ್ಲಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಸೂರತ್ನ ಉದ್ಯಮಿಯೊಬ್ಬರು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಆದರೆ ಇದು ಸಾಮಾನ್ಯ ಬ್ಯಾಟ್ ಅಲ್ಲ.. ಈ ಬ್ಯಾಟ್ ಲಕ್ಷಾಂತರ ರೂಪಾಯಿ ಮೌಲ್ಯದ್ದು!
ಕ್ರಿಕೆಟ್ ಐಕಾನ್ ಆಗಿರುವ ವಿರಾಟ್ ಕೊಹ್ಲಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರು ಹೋದಲ್ಲೆಲ್ಲಾ ಅವರ ಸುತ್ತ ಅಭಿಮಾನಿಗಳು ಸುತ್ತುವರಿದಿರುತ್ತಾರೆ. ಕೊಹ್ಲಿಗೆ ಅಭಿಮಾನಿಗಳಿಂದ ಲೆಕ್ಕವಿಲ್ಲದಷ್ಟು ಉಡುಗೊರೆ ಬರುತ್ತಾ ಇರುತ್ತವೆ. ಇದೀಗ ಗುಜರಾತಿನ ಸೂರತ್ ಮೂಲದ ಉದ್ಯಮಿ ಉತ್ಪಾಲ್ ಮಿಸ್ತ್ರಿ ಎಂಬುವವರು ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಕೊಹ್ಲಿಗಾಗಿ ಲಕ್ಷಾಂತರ ರೂಪಾಯಿ ಮೌಲ್ಯ ಡೈಮಂಡ್ನಿಂದ ತಯಾರಿಸಿದ ಬ್ಯಾಟ್ ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ಆರ್.ಪ್ರಜ್ಞಾನಂದ – ವಿಶ್ವನಾಥನ್ ಆನಂದ್ ಬಳಿಕ 18ರ ಬಾಲಕನ ಅಮೋಘ ಸಾಧನೆ
ಹೌದು, 1.04 ಕ್ಯಾರೆಟ್ ಡೈಮಂಡ್ನಿಂದ ತಯಾರಿಸಲಾಗುವ ಬ್ಯಾಟ್ ಅನ್ನು ಕೊಹ್ಲಿಗೆ ಉಡುಗೊರೆಯಾಗಿ ನೀಡಲು ಉದ್ಯಮಿ ಮುಂದಾಗಿದ್ದಾರೆ. ಡೈಮಂಡ್ ಬ್ಯಾಟ್ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಮತ್ತು ಬ್ಯಾಟ್ನ ರೇಂಜ್ 15 ಎಂಎಂ ನಿಂದ 5 ಎಂಎಂ ವರೆಗೆ ಇರಲಿದೆ. ವಿಶ್ವಕಪ್ಗೂ ಮುನ್ನ ಈ ಬ್ಯಾಟ್ ಅನ್ನು ವಿರಾಟ್ ಅವರಿಗೆ ಉದ್ಯಮಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾರತದ ಪಾಲಿಗೆ ಕೊಹ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಲ್ಲಿದ್ದಾರೆ. ಉದ್ಯಮಿ ಕೊಹ್ಲಿಗೆ ಉಡುಗೊರೆಯಾಗಿ ನೀಡಲು ಸಿದ್ಧವಾಗಿರುವ ಡೈಮಂಡ್ ಬ್ಯಾಟ್ ಅನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಂಡಿತು. ವಜ್ರದ ಉದ್ಯಮಿ ಕ್ರಿಕೆಟ್ ಅಭಿಮಾನಿಯಾಗಿದ್ದು, ವಿರಾಟ್ ಕ್ರಿಕೆಟ್ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಹೊರ ಹೊಮ್ಮುವ ಮುಂಚಿನಿಂದಲೇ ಅವರನ್ನು ಉದ್ಯಮಿ ಅನುಸರಿಸುತ್ತಾ ಬಂದಿದ್ದಾರೆ.