ಚಂದಿರನಿಗೆ ಇನ್ನಷ್ಟು ಸನಿಹವಾದ ಚಂದ್ರಯಾನ – 3 – ಲ್ಯಾಂಡರ್‌ ಇಳಿಯಲು ಸೇಫ್‌ ಆದ ಜಾಗ ಹುಡುಕುತ್ತಿರುವ ನೌಕೆ  

ಚಂದಿರನಿಗೆ ಇನ್ನಷ್ಟು ಸನಿಹವಾದ ಚಂದ್ರಯಾನ – 3 – ಲ್ಯಾಂಡರ್‌ ಇಳಿಯಲು ಸೇಫ್‌ ಆದ ಜಾಗ ಹುಡುಕುತ್ತಿರುವ ನೌಕೆ  

ಇಡೀ ಜಗತ್ತು ಭಾರತದ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ – 3 ನೌಕೆಯನ್ನು ಉಡಾವಣೆ ಮಾಡಿದ್ದು, ಹಂತ ಹಂತವಾಗಿ ಯಶಸ್ಸು ಕಾಣುತ್ತಿದೆ. ಇದೀಗ ಚಂದ್ರಯಾನ ನೌಕೆ ಚಂದ್ರನಿಗೆ ಬಹುತೇಕ ಹತ್ತಿರವಾಗುತ್ತಿದೆ. ಅಷ್ಟೇ ಅಲ್ಲದೇ ಸಾಫ್ಟ್‌ ಲ್ಯಾಂಡಿಂಗ್‌ ಗೆ ಸ್ಥಳ ಹುಡುಕಾಟ ನಡೆಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡಿಂಗ್‌ ದಿನಾಂಕ, ಸಮಯ ಬಹಿರಂಗ! – ಮಹತ್ವದ ಮಾಹಿತಿ ಹಂಚಿಕೊಂಡ ಇಸ್ರೋ

ಚಂದ್ರಯಾನ -3 ಯೋಜನೆ ಬಗ್ಗೆ ಭಾರತವು ಸಾಕಷ್ಟು ಭರವಸೆಯನ್ನು ಹೊಂದಿದೆ. ಕಳೆದ ಬಾರಿ ಚಂದ್ರಯಾನ 2 ಮಿಷನ್‌ನಲ್ಲಿ ವಿಫಲವಾದ ನಂತರ ಇಸ್ರೋ ತನ್ನ ತಪ್ಪುಗಳನ್ನು ತಿದ್ದಿಕೊಂಡು ಹೊಸ ಹೆಜ್ಜೆ ಇರಿಸಿದೆ. ಚಂದ್ರಯಾನ-3 ಮಿಷನ್ ತನ್ನ ಕೊನೆಯ ಹಂತದಲ್ಲಿದೆ. ಇಸ್ರೋ ಸೋಮವಾರ ಚಂದ್ರನ ಪ್ರಮುಖ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವಿಕ್ರಮ್‌ ಲ್ಯಾಂಡರ್‌ನ ಎಲ್‌ಎಚ್‌ಡಿಎಸಿ ಕ್ಯಾಮೆರಾ ಅಂದರೆ ಲ್ಯಾಂಡರ್‌ ಹಜಾರ್ಡ್‌ ಡಿಟೆಕ್ಷನ್‌ ಆಂಡ್‌ ಅವಾಯ್‌ಡೆನ್ಸ್ ಕ್ಯಾಮೆರಾ, ಚಂದ್ರನ ಮೇಲ್ಮೈ ಭಾಗದ ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾ, ಚಂದ್ರನ ಮೇಲೆ ಲ್ಯಾಂಡರ್‌ ಇಳಿಯಲು ಸೇಫ್‌ ಆದ ಜಾಗ ಯಾವುದು, ಎಲ್ಲಿ ಗುಡ್ಡ ಪ್ರದೇಶಗಳಿವೆ, ಎಲ್ಲಿ ಕುಳಿಯಂಥ ಪ್ರದೇಶಗಳಿವೆ ಎನ್ನುವ ಮಾಹಿತಿಗಳನ್ನು ಇಸ್ರೋಗೆ ರವಾನೆ ಮಾಡುತ್ತದೆ. ಇದನ್ನು ಪರಿಶೀಲನೆ ಮಾಡಿ, ಇಸ್ರೋ ಯಾವ ಜಾಗ ಸೂಕ್ತ ಎಂದು ಹೇಳುತ್ತದೆಯೋ ಆ ಸ್ಥಳದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯಲು ಅನುವು ಮಾಡಿಕೊಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3 ಮಿಷನ್ ಅಡಿಯಲ್ಲಿ, ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23, 2023 ರಂದು ಸಂಜೆ 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲಿದೆ. ಗಯಾ ಲ್ಯಾಂಡರ್ ಚಂದ್ರನ ಮೇಲೆ ಸಂಜೆ 5.45 ಕ್ಕೆ ಇಳಿಯಲಿದೆ ಎಂದು ಮೊದಲು ಮಾಹಿತಿ ನೀಡಲಾಗಿತ್ತು, ಆದರೆ ಈಗ ಅದರಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ.

suddiyaana