ಅಬ್ಬಬ್ಬಾ.. ಧೋನಿ ಮಗಳ ಶಾಲಾ ಶುಲ್ಕ ಇಷ್ಟೊಂದಾ? – ಝಿವಾ ಓದುತ್ತಿರುವ ಸ್ಕೂಲ್ ಯಾವುದು ಗೊತ್ತಾ?
ಸಿನಿಮಾ ಸ್ಟಾರ್, ಟಿಕೆಟರ್ಸ್, ಗಣ್ಯ ವ್ಯಕ್ತಿಗಳ ಜೀವನ ಶೈಲಿ ಹೇಗಿರುತ್ತೆ ಅಂತಾ ಸದಾ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಕೆಲವರಂತೂ ಎಷ್ಟು ಅಭಿಮಾನಿಗಳೆಂದರೆ ಬೆಳಗ್ಗೆ ಎದ್ದ ಕೂಡಲೇ ತಮ್ಮ ನೆಚ್ಚಿನ ಸ್ಟಾರ್ ಮುಖ ನೋಡಬೇಕು ಅಂತಾ ಅವರ ಫೋಟೋವನ್ನು ತಮ್ಮ ರೂಂಗಳಲ್ಲಿ ಇಟ್ಟು ಕೊಳ್ಳುತ್ತಾರೆ. ಕೆಲವು ಅಭಿಮಾನಿಗಳು ದೇವರ ಮನೆಯಲ್ಲಿ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಅವರ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಬಳಿಕ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ತಮ್ಮಿಷ್ಟದ ವ್ಯಕ್ತಿಯನ್ನು ಎಲ್ಲ ಜಾಲತಾಣ ವೇದಿಕೆಯಲ್ಲಿ ಫಾಲೋ ಮಾಡುತ್ತಿರುತ್ತಾರೆ.
ಇದನ್ನೂ ಓದಿ: ಪಪ್ಪಾ.. ನಾನು ಇನ್ನೂ ಬದುಕಿದ್ದೇನೆ..! – ಮಗಳ ಅಂತ್ಯಸಂಸ್ಕಾರದ ನಂತರ ಬಂತು ವಿಡಿಯೋ ಕಾಲ್!
ಧೋನಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಉತ್ತುಂಗದಲ್ಲಿರುವಾಗಲೇ 2010ರ ಜುಲೈ 4ರಂದು ಸಾಕ್ಷಿ ಅವರನ್ನು ಮದುವೆ ಆದರು. ದಂಪತಿಗೆ ಝಿವಾ ಹೆಸರಿನ ಮುದ್ದಾದ ಮಗಳಿದ್ದಾಳೆ. ಕೂಲ್ ಕ್ಯಾಪ್ಟನ್ಗೆ ಝಿವಾ ಹೆಸರಿನ ಮುದ್ದಾದ ಮಗಳಿದ್ದಾಳೆ. 2015ರ ಫೆ. 6ರಂದು ಝಿವಾ ಜನಿಸಿದಳು. ಮಗಳೆಂದರೆ ಧೋನಿಗೆ ಪಂಚ ಪ್ರಾಣ. ಸಮಯ ಸಿಕ್ಕಾಗಲೆಲ್ಲ ಮಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ಝಿವಾ ಕೂಡ ಅಪ್ಪನ ಮಗಳು. ಧೋನಿ ಎಲ್ಲೇ ಇದ್ದರೂ ಅಲ್ಲಿ ಝಿವಾ ಇರುತ್ತಾಳೆ. ಆದರೆ, ಈಗ ಝಿವಾ ಓದಿನ ಕಡೆ ಗಮನ ಹರಿಸಿದ್ದಾಳೆ. ಸದ್ಯ ಝಿವಾಗೆ 8 ವರ್ಷ. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಓದುತ್ತಿದ್ದಾಳೆ. ಇನ್ನು ಝಿವಾಳ ಶಾಲೆಯ ಫೀಸ್ ಎಷ್ಟಿರಬಹುದು ಎಂಬ ಕುತೂಹಲ ಧೋನಿ ಅವರ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.
ಧೋನಿ ಅವರ ಮುದ್ದಾದ ಮಗಳು ಝಿವಾ ರಾಂಚಿಯ ಟೌರಿಯನ್ ವರ್ಲ್ಡ್ ಶಾಲೆಯ ವಿದ್ಯಾರ್ಥಿನಿ. ಈ ಟೌರಿಯನ್ ಶಾಲೆ ವಿಶ್ವದ ಉತ್ತಮವಾದ ಶಾಲೆಗಳಲ್ಲಿ ಒಂದು. ಹಾಗೇ ಅದರ ಫೀಸ್ ಕೂಡ ದುಬಾರಿ. ಧೋನಿ ಅವರಿಗೆ ತನ್ನ ಮಗಳು ಶೈಕ್ಷಣಿಕ, ಕ್ರೀಡೆ ಅಥವಾ ಕಲೆಯಲ್ಲಿ ಹಿಂದೆ ಉಳಿಯಲು ಬಯಸುವುದಿಲ್ಲ. ಹೀಗಾಗಿ ಎಲ್ಲವನ್ನು ಪೂರೈಸುವ ಟೌರಿಯನ್ ವರ್ಲ್ಡ್ ಶಾಲೆಗೆ ದಾಖಲಿಸಿದ್ದಾರೆ. ಟೌರಿಯನ್ ಶಾಲೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಶಾಲೆಯ ಶುಲ್ಕ ರಚನೆಯನ್ನು ನೋಡಿದರೆ, ಗ್ರೇಡ್ 2 ರಿಂದ 8ರವೆಗೆ ವಾರ್ಷಿಕವಾಗಿ 2 ಲಕ್ಷ 75 ಸಾವಿರ ರೂ. ಅನ್ನು ಪಾವತಿಸಬೇಕಾಗುತ್ತದೆ. ತಿಂಗಳ ಶಾಲಾ ಶುಲ್ಕ 23 ಸಾವಿರ ರೂ.
ಸದ್ಯ ಝಿವಾ ಮೂರನೇ ತರಗತಿ ವಿದ್ಯಾರ್ಥಿನಿ. ಅಲ್ಲದೆ, ಆಕೆ ಡೇ ಸ್ಕಾಲರ್ ಕೂಡ. ಆಕೆಯ ಪ್ರತಿ ತಿಂಗಳ ಶಾಲಾ ಶುಲ್ಕ 23 ಸಾವಿರ ರೂಪಾಯಿ. ಒಂದು ವೇಳೆ ಝಿವಾ ಈ ಶಾಲೆಯ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವಂತಾಗಿದ್ದರೆ ವರ್ಷಕ್ಕೆ 4,40,000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಅಂದಹಾಗೆ ಧೋನಿ ಅವರಿಗೆ ಈ ಮೊತ್ತ ಹೊರೆ ಅಲ್ಲವೇ ಅಲ್ಲ. ಆದರೆ, ಸಾಮಾನ್ಯ ಜನರಿಗೆ ಇದು ಕೈಗೆಟುಕದ ಆಕಾಶ ಎಂಬುದರಲ್ಲಿ ತಪ್ಪಿಲ್ಲ.