ನೀವು ನಿತ್ಯವೂ ಸ್ನಾನ ಮಾಡುತ್ತೀರಾ? – ನಿಮ್ಮ ದೇಹಕ್ಕೆ ಹಾನಿ ಅಂತಿದ್ದಾರೆ ತಜ್ಞರು!

ನೀವು ನಿತ್ಯವೂ ಸ್ನಾನ ಮಾಡುತ್ತೀರಾ? – ನಿಮ್ಮ ದೇಹಕ್ಕೆ ಹಾನಿ ಅಂತಿದ್ದಾರೆ ತಜ್ಞರು!

ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಕೆಲವರಂತೂ ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡುತ್ತಾರೆ. ಮನೆಯಿಂದ ಹೊರಗೆ ಹೋಗಿ ಮನೆಗೆ ವಾಪಸ್‌ ಬಂದ ಕೂಡಲೇ ಸ್ನಾನ ಮಾಡುತ್ತಾರೆ. ಪ್ರತಿನಿತ್ಯ ಸ್ನಾನ ಮಾಡುವುದರಿಂದ ಅನೇಕ ಕಾಯಿಲೆಗಳಿಂದ ಮುಕ್ತವಾಗವಬಹುದೆಂದು ನಂಬಲಾಗಿದೆ. ಆದರೆ, ನಿತ್ಯವು ಸ್ನಾನ ಮಾಡುವುದು ದೇಹಕ್ಕೆ ಹಾನಿಕಾರಕ ಎಂಬ ಮಾತನ್ನು ನೀವು ಕೇಳಿದ್ದೀರಾ? ಅಚ್ಚರಿಯಾದರೂ ಸತ್ಯ!

ಭಾರತ ದೇಶದಲ್ಲಿ ಪ್ರತಿನಿತ್ಯ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ. ಸೂತಕದ ಮನೆಗೆ ಹೋಗಿ ಬಂದರೂ ಕೂಡ ಮನೆ ಒಳಗೆ ಹೋಗುವ ಮುನ್ನ ಸ್ನಾನ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಪ್ರತಿ ನಿತ್ಯ ಸ್ನಾನ ಮಾಡುವುದು ಅನಾರೋಗ್ಯಕ್ಕೆ ದಾರಿ ಮಾಡಿದಂತೆ! ಹೌದು ಪ್ರತಿ ನಿತ್ಯ ಸ್ನಾನ ಮಾಡುವುದರಿಂದ ಚರ್ಮ ರೋಗ ಬರುವ ಸಾಧ್ಯತೆ ಇದೆಯಂತೆ. ಪ್ರತಿದಿನ ಸ್ನಾನ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಏಕೆಂದರೆ ಇದು ರೋಗನಿರೋಧಕ ಶಕ್ತಿ ಕಡಿಮೆ ಮಾಡುವುದರೊಂದಿಗೆ ದೇಹದ ಹಾನಿಗೆ ಕಾರಣವಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತೊಳೆಯುವುದೇ ಇಲ್ವಂತೆ! – ನೀವೂ ಹೀಗೆ ಮಾಡ್ತೀರಾ?

ಸಾಮಾಜಿಕ ಒತ್ತಡದಿಂದಾಗಿ ಸ್ನಾನ

ಸ್ನಾನದ ಅಭ್ಯಾಸಗಳು ವ್ಯಕ್ತಿಯ ಮನಸ್ಥಿತಿ, ತಾಪಮಾನ, ಹವಾಮಾನ, ಲಿಂಗ ಮತ್ತು ಸಾಮಾಜಿಕ ಒತ್ತಡವನ್ನು ಅವಲಂಬಿಸಿರುತ್ತದೆ. ಆದರೆ, ಸಾಮಾಜಿಕ ಒತ್ತಡದಿಂದಾಗಿ ಭಾರತದಲ್ಲಿ ಹೆಚ್ಚಿನ ಜನರು ಪ್ರತಿದಿನ ಸ್ನಾನ ಮಾಡುತ್ತಾರೆ. ನಮ್ಮ ದೈನಂದಿನ ಸ್ನಾನವು ನೀರಿನ ವ್ಯರ್ಥ ಮಾತ್ರವಲ್ಲ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಹೆಚ್ಚು ಸಮಯ ಕಳೆಯಬೇಡಿ

ಇನ್ನು ಸ್ನಾನ ಮಾಡುವಾಗ ನೀರಿನಲ್ಲಿ ಹೆಚ್ಚು ಸಮಯ ಕಳೆಯುವುದು ಒಳ್ಳೆಯದಲ್ಲ. ಒಂದು ವೇಳೆ ನೀವು ನೀರಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ, ನಿಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗಬಹುದು. 3 ರಿಂದ 5 ನಿಮಿಷಗಳ ಕಾಲ ಸ್ನಾನ ಮಾಡಿ ಮತ್ತು ದೇಹದ ಪ್ರಮುಖ ಭಾಗಗಳ ಮೇಲೆ ಮಾತ್ರ ಕೇಂದ್ರೀಕರಿಸಿ. ಅವುಗಳು ಯಾವುವೆಂದರೆ, ಕಂಕುಳು, ತೊಡೆಸಂದು ಮತ್ತು ಮುಖ. ನೀವು ಚರ್ಮದ ಪ್ರತಿ ಇಂಚನ್ನು ಉಜ್ಜಬೇಕಿಲ್ಲ. ಅತಿಯಾಗಿ ಉಜ್ಜುವುದು ಕೂಡ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ನೈಸರ್ಗಿಕ ತೈಲ ಕಡಿಮೆಯಾಗಲಿದೆ

ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿರುವವರು ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚು. ಬಿಸಿನೀರು ಸ್ನಾನ ಮಾಡುವುದರಿಂದ ಚರ್ಮವು ಒಣಗುತ್ತದೆ ಮತ್ತು ದೇಹದಿಂದ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತದೆ. ಈ ತೈಲವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಪ್ರತಿನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಗುರುಗಳಿಗೆ ಹಾನಿಯಾಗುತ್ತದೆ. ಅಲ್ಲದೆ, ಚರ್ಮ ಒಣಗಿ ಚರ್ಮ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನಾನದ ವಿಚಾರದಲ್ಲಿ ನೀರಿನ ತಾಪಮಾನವೂ ವ್ಯತ್ಯಾಸವನ್ನುಂಟು ಮಾಡುತ್ತದೆ. ಹೊರಗೆ ಚಳಿ ಇರುವಾಗ ಬಿಸಿ ನೀರು ಉತ್ತಮ ಅನಿಸಬಹುದು. ಆದರೆ, ಇದು ನಿಮ್ಮ ಚರ್ಮವನ್ನು ಒಣಗಿಸುತ್ತದೆ ಮತ್ತು ತುರಿಕೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ನೀರಿನ ತಾಪಮಾನವನ್ನು ಬಿಸಿಗಿಂತ ಬೆಚ್ಚಗೆ ಇರಿಸಲು ಪ್ರಯತ್ನಿಸಿ.

suddiyaana