1 ರೂಪಾಯಿ ನಾಣ್ಯ ತಯಾರಿಕೆಗೆ ಅದರ ಮೌಲ್ಯಕ್ಕಿಂತ ಹೆಚ್ಚಿನ ವೆಚ್ಚ – ಯಾವ್ಯಾವ ನಾಣ್ಯಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ?

1 ರೂಪಾಯಿ ನಾಣ್ಯ ತಯಾರಿಕೆಗೆ ಅದರ ಮೌಲ್ಯಕ್ಕಿಂತ ಹೆಚ್ಚಿನ ವೆಚ್ಚ – ಯಾವ್ಯಾವ ನಾಣ್ಯಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ?

ಅಂಗಡಿಗೆ ಹೋಗಲಿ, ಬಸ್ ಗಳಲ್ಲೇ ಆಗಲಿ ಮೊದಲು ಕೇಳುವುದು ಚೇಂಜ್ ಇದ್ದರೆ ಕೊಡಿ ಎಂದು. ಇತ್ತೀಚಿನ ದಿನಗಳಲ್ಲಿ ವ್ಯಾಪಾರದ ವೇಳೆ ಡಿಜಿಟಲ್ ಪೇಮೆಂಟ್ ಇರೋದ್ರಿಂದ ಅಷ್ಟೇನು ಸಮಸ್ಯೆ ಆಗೋದಿಲ್ಲ. ಆದರೆ ಹೀಗೆ ನೀವು ವಹಿವಾಟು ಮಾಡುವ ಒಂದು ರೂಪಾಯಿಯ ನಾಣ್ಯ (One Rupee Coin) ತಯಾರು ಮಾಡಲು ಎಷ್ಟು ಖರ್ಚಾಗುತ್ತದೆ ಎಂದು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಇಂತಹದ್ದೊಂದು ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ.

ಭಾರತದಲ್ಲೂ ನಾಣ್ಯಗಳ ಚಲಾವಣೆ 1, 2, 5, 10 ರೂಪಾಯಿ ನಾಣ್ಯಗಳನ್ನ ಮುದ್ರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯಗಳು ವಹಿವಾಟು ಅಷ್ಟೇನು ಚಾಲ್ತಿಯಲ್ಲಿಲ್ಲ. ವ್ಯಾಪಾರಿಗಳು, ಸಾರ್ವಜನಿಕರು 10 ರೂಪಾಯಿ ನಾಣ್ಯ ಪಡೆಯಲು ಹಿಂದೇಟು ಹಾಕುತ್ತಾರೆ. ಆದರೆ ಭಾರತ ಸರ್ಕಾರವು ಅನೇಕ ರೀತಿಯ ನಾಣ್ಯಗಳನ್ನು ಮತ್ತು ಕರೆನ್ಸಿಗಳನ್ನು (Indian Currency) ನೋಟುಗಳನ್ನು ಮುದ್ರಿಸುತ್ತದೆ. 1, 2, 5, 10   ರೂಪಾಯಿಗಳ ಮುದ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಸರ್ಕಾರವು ಅದರ ನೈಜ ಮೌಲ್ಯಕ್ಕಿಂತ ಹೆಚ್ಚಿನದನ್ನು ಮುದ್ರಣದಲ್ಲಿ ಖರ್ಚು (Printing Cost) ಮಾಡುತ್ತದೆ, ಅಂತಹ ಹಲವಾರು ನಾಣ್ಯಗಳಿವೆ. ಉದಾಹರಣೆಗೆ, ಒಂದು ರೂಪಾಯಿ ನಾಣ್ಯವನ್ನು ತಯಾರಿಸುವ ವೆಚ್ಚವನ್ನು ತಿಳಿದರೆ ನೀವು ಆಶ್ಚರ್ಯಗೊಳ್ಳುತ್ತೀರ.

ಇದನ್ನೂ ಓದಿ : ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ – ನೀಲಿ ಬಾನಿನ ಬಣ್ಣ ಬದಲಾಗಿದ್ದು ಎಲ್ಲಿ?

ವಾಸ್ತವವಾಗಿ, ಒಂದು ರೂಪಾಯಿ ನಾಣ್ಯವನ್ನು ಮುದ್ರಿಸುವುದರಿಂದ ಸರ್ಕಾರಕ್ಕೆ ಅದರ ಮೂಲ ಮೌಲ್ಯದ ಒಂದು ರೂಪಾಯಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಈಗ ಒಂದು ರೂಪಾಯಿ ನಾಣ್ಯವನ್ನು ತಯಾರಿಸಲು ಎಷ್ಟು ಹಣ ಖರ್ಚಾಗುತ್ತದೆ ಎಂದು ತಿಳಿಯೋಣ. ಭಾರತದ ಒಂದು ರೂಪಾಯಿ ನೂರು ಪೈಸೆಗೆ ಸಮ, ಪ್ರಸ್ತುತ, ಒಂದು ರೂಪಾಯಿ ನಾಣ್ಯವು ಚಲಾವಣೆಯಲ್ಲಿರುವ ಅತ್ಯಂತ ಚಿಕ್ಕ ಭಾರತೀಯ ನಾಣ್ಯ ಎಂದು ಹೇಳಲಾಗುತ್ತದೆ. 1992 ರಿಂದ ಭಾರತೀಯ ಒಂದು ರೂಪಾಯಿ ನಾಣ್ಯಗಳನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ (Stainless steel) ಮಾಡಲಾಗುತ್ತಿದೆ. ದುಂಡನೆಯ ಒಂದು ರೂಪಾಯಿಯ ನಾಣ್ಯಗಳ ತೂಕ 3.76 ಗ್ರಾಂ, ವ್ಯಾಸ 21.93-ಮಿ.ಮೀ, ದಪ್ಪ 1.45 ಮಿ ಮೀ. ಸ್ವತಂತ್ರ್ಯ ಭಾರತದಲ್ಲಿ 1950 ರಲ್ಲಿ ಮೊದಲ ಬಾರಿಗೆ ಒಂದು ರೂಪಾಯಿ ನಾಣ್ಯಗಳನ್ನು ಮುದ್ರಿಸಲಾಯಿತು. ಹಾಗೂ ಇಂದಿಗೂ ಅವು ಚಲಾವಣೆಯಲ್ಲಿವೆ.

ಭಾರತೀಯ ಕರೆನ್ಸಿಯಲ್ಲಿ ಕೆಲವು ನೋಟುಗಳು ಮತ್ತು ನಾಣ್ಯಗಳನ್ನು ಸರ್ಕಾರವು ಮುದ್ರಿಸಿದರೆ, ಕೆಲವು ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI Bank) ಮುದ್ರಿಸುತ್ತದೆ. ಒಂದು ರೂಪಾಯಿ ನೋಟು, ಎಲ್ಲಾ ನಾಣ್ಯಗಳನ್ನು ಸರ್ಕಾರ ಮುದ್ರಿಸಿದರೆ, ರೂ. 2 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ 500 ರೂ.ವರೆಗಿನ ನೋಟುಗಳನ್ನು ಮುದ್ರಿಸುತ್ತದೆ. ಈ ಹಿಂದೆ RBI 2,000 ರೂಪಾಯಿ ನೋಟು ಪ್ರಿಂಟ್ ಮಾಡುತ್ತಿತ್ತು.. ಆದರೆ ಈಗ RBI 2,000 ರೂಪಾಯಿ ನೋಟು ಹಿಂಪಡೆದಿದೆ.

ನಾಣ್ಯಗಳ ತಯಾರಿಕೆಯ ವೆಚ್ಚದ ಬಗ್ಗೆ ಹೇಳುವುದಾದದರೆ, ಪ್ರತಿ ನಾಣ್ಯಕ್ಕೆ ಸರ್ಕಾರವು ವಿಭಿನ್ನ ವೆಚ್ಚಗಳನ್ನು ಭರಿಸಬೇಕಾಗುತ್ತದೆ. 2018 ರಲ್ಲಿ ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಒಂದು ರೂಪಾಯಿ ನಾಣ್ಯದ ಬೆಲೆ ರೂ.1.11 ಆಗಿದೆ. ಅದೇ ಸಮಯದಲ್ಲಿ ₹2 ನಾಣ್ಯಗಳು ರೂ.1.28, ₹.5 ನಾಣ್ಯಗಳು ರೂ.3.69 ಮತ್ತು ₹ನಾಣ್ಯಗಳು ರೂ.5.54 ಆಗಿದೆ. ಆದಾಗ್ಯೂ, ಹೆಚ್ಚಿದ ಬೆಲೆಗಳ ಪ್ರಕಾರ, ಈ ಲೆಕ್ಕಾಚಾರವು ಬದಲಾಗುತ್ತದೆ.

suddiyaana