ಇದೇ ಇನ್ಸ್ಟಾಗ್ರಾಮ್ ನಲ್ಲಿ ನಂ. 1 ಪಾರಂಪರಿಕ ತಾಣ – ವಿಶ್ವದ 7 ಅದ್ಬುತಗಳಲ್ಲಿ ಯಾರು ಮುಂದು?
ತಾಜ್ ಮಹಲ್ ಎಂದರೆ ಅದನ್ನು ಪ್ರೀತಿಯ ಸಂಕೇತ ಎನ್ನಲಾಗುತ್ತದೆ. ತಾಜ್ ಮಹಲ್ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ್ದಾನೆ. ಪ್ರೀತಿಯ ಸಂಕೇತವಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ಗೆ ಪ್ರೀತಿಯ ಸಂಕೇತವಾಗಿ ಇದನ್ನು ನಿರ್ಮಿಸಿದ್ದಾನೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ದೇಶದ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ. ಹೀಗಾಗಿ ತಾಜ್ಮಹಲ್ ನೋಡಲು ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಇದೀಗ ತಾಜ್ ಮಹಲ್ ‘ವಿಶ್ವದ ಅತ್ಯಂತ ಇನ್ಸ್ಟಾಗ್ರಾಮ್ ಮಾಡಿದ ಸಾಂಸ್ಕೃತಿಕ ಪರಂಪರೆಯ ತಾಣ’ ಎಂದು ಗುರುತಿಸಿಕೊಂಡಿದೆ.
ಇದನ್ನೂ ಓದಿ: 400 ಕೋಟಿ ರೂಪಾಯಿ ಬಾಚಿದ ‘ಜೈಲರ್’ ಸಿನಿಮಾ – ಚಿತ್ರ ಗೆದ್ದ ಖುಷಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್
ಇನ್ಸ್ಟಾಗ್ರಾಮ್ ನ ಹ್ಯಾಶ್ಟ್ಯಾಗ್ ಅಧ್ಯಯನದಲ್ಲಿ ತಾಜ್ಮಹಲ್ ಗೆ ವಿಶ್ವದ ಅತ್ಯಂತ ಇನ್ಸ್ಟಾಗ್ರಾಮ್ ಮಾಡಿದ ತಾಣ ಎಂದು ಗುರುತಿಸಿಕೊಂಡಿದೆ. ಹ್ಯಾಶ್ಟ್ಯಾಗ್ ಅಧ್ಯಯನದಲ್ಲಿ, ‘ಮಾನುಮೆಂಟ್ ಆಫ್ ಲವ್’ 2.4 ಮಿಲಿಯನ್ ಹ್ಯಾಶ್ಟ್ಯಾಗ್ಗಳನ್ನು ಪಡೆದುಕೊಂಡಿದೆ (ನಿಖರವಾಗಿ ಹೇಳಬೇಕೆಂದರೆ 2,391,689 ಮಿಲಿಯನ್). ತಾಜ್ ಮಹಲ್ ತನ್ನ ಸುಂದರವಾದ ಉದ್ಯಾನವನಗಳು, ಬೆರಗುಗೊಳಿಸುವ ವಾಸ್ತುಶಿಲ್ಪ ಮತ್ತು ಸುವರ್ಣ ಇತಿಹಾಸಕ್ಕೆ ಬಹಳ ವಿಖ್ಯಾತಿ ಗಳಿಸಿದೆ.
ಹ್ಯಾಶ್ಟ್ಯಾಗ್ ಅಧ್ಯಯನದಲ್ಲಿ ಮೊದಲ ಸ್ಥಾನ ತಾಜ್ ಮಹಲ್ ಪಡೆದುಕೊಂಡಿದ್ದರೆ, ಎರಡನೇ ಸ್ಥಾನವನ್ನು ಫ್ರಾನ್ಸ್ನ ವರ್ಸೈಲ್ಸ್ ಅರಮನೆ ಗಿಟ್ಟಿಸಿಕೊಂಡಿದೆ. ಈ ಅದ್ಭುತವಾದ ವರ್ಸೈಲ್ಸ್ ಅರಮನೆಯು, ರಾಜಮನೆತನದ ಅರಮನೆಯಾಗಿದ್ದು, ಪ್ರಪಂಚದ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಇದೂ ಕೂಡ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ.
ಇನ್ನು ಮೂರನೇ ಸ್ಥಾನದಲ್ಲಿ 2,256,202 ಮಿಲಿಯನ್ ಹ್ಯಾಶ್ಟ್ಯಾಗ್ಗಳೊಂದಿಗೆ USA ಯಲ್ಲಿನ ಲಿಬರ್ಟಿ ಪ್ರತಿಮೆ ಪಡೆದುಕೊಂಡಿದೆ. ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಕ್ರಮವಾಗಿ ಮಚು ಪಿಚು ಮತ್ತು ಪೆಟ್ರಾ ಪಡೆದುಕೊಂಡಿದೆ.
ಗ್ರ್ಯಾಂಡ್ ಕ್ಯಾನ್ಯನ್, 4.3 ಮಿಲಿಯನ್ ಹ್ಯಾಶ್ಟ್ಯಾಗ್ಗಳೊಂದಿಗೆ ವಿಶ್ವದ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಮಾಡಲಾದ ನೈಸರ್ಗಿಕ ವಿಶ್ವ ಪರಂಪರೆಯ ತಾಣದ ಟ್ಯಾಗ್ ಅನ್ನು ಪಡೆದುಕೊಂಡಿದೆ. ತನ್ನ ಅದ್ಭುತವಾದ ಭೌಗೋಳಿಕ ಸೌಂದರ್ಯವನ್ನು ಹೊಂದಿರುವ ಈ ಸ್ಥಳವನ್ನು ಅನುಭವಿಸಲು ಪ್ರಕೃತಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಥಳವು 2022 ರಲ್ಲಿ 4.73 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿದೆ.
ಮತ್ತೊಂದು ನೈಸರ್ಗಿಕ ವಿಶ್ವ ಪರಂಪರೆಯ ತಾಣದಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ವಿಶ್ವದ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಸ್ಥಳ ಇಟಲಿಯ ಅಮಾಲ್ಫಿ ಕೋಸ್ಟ್, ಇದು 3.7 ಮಿಲಿಯನ್ ಹ್ಯಾಶ್ಟ್ಯಾಗ್ಗಳನ್ನು ಪಡೆದಿದೆ. ಇಸ್ತಾನ್ಬುಲ್ ವಿಶ್ವದಲ್ಲೇ ಹೆಚ್ಚು ಇನ್ಸ್ಟಾಗ್ರಾಮ್ ಮಾಡಲಾದ ವಿಶ್ವ ಪರಂಪರೆಯ ನಗರವಾಗಿ, 124.3 ಮಿಲಿಯನ್ಗಿಂತಲೂ ಹೆಚ್ಚು ಹ್ಯಾಶ್ಟ್ಯಾಗ್ಗಳನ್ನು ಹೊಂದಿದೆ. ಇನ್ನು, ಕೊಲೊಸಿಯಮ್ ಮತ್ತು ಟ್ರೆವಿ ಫೌಂಟೇನ್ನಂತಹ ಸಾಂಪ್ರದಾಯಿಕ ಸ್ಥಳಗಳಿಗೆ ನೆಲೆಯಾಗಿರುವ ರೋಮ್ ಎರಡನೇ ಸ್ಥಾನದಲ್ಲಿದೆ. ಇದು 18.5 ಮಿಲಿಯನ್ ಹ್ಯಾಶ್ಟ್ಯಾಗಳನ್ನು ಪಡೆದಿದೆ.