ಮೌಂಟ್‌ ಎವರೆಸ್ಟ್‌ ಏರಲು ಅನುಮತಿ ಪಡೆಯುವ ಶುಲ್ಕ ಭಾರಿ ಹೆಚ್ಚಳ?

ಮೌಂಟ್‌ ಎವರೆಸ್ಟ್‌ ಏರಲು ಅನುಮತಿ ಪಡೆಯುವ ಶುಲ್ಕ ಭಾರಿ ಹೆಚ್ಚಳ?

ವಿಶ್ವದ ಅತಿ ಎತ್ತರವಾದ ಶಿಖರ ಮೌಂಟ್‌ ಎವರೆಸ್ಟ್‌. ಜೀವನದಲ್ಲಿ ಒಮ್ಮೆಯಾದರೂ ಅತಿ ಎತ್ತರವಾದ ಈ ಪರ್ವತವನ್ನು ಹತ್ತಬೇಕು ಅನ್ನೋದು ಅನೇಕರ ಕನಸಾಗಿರುತ್ತದೆ. ಇದೀಗ ನೇಪಾಳ ಸರ್ಕಾರ ಎತ್ತರ ಶಿಖರ ಏರಲು ಪ್ಲಾನ್‌ ಮಾಡಿಕೊಂಡಿದ್ದವರಿಗೆ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. ಮೌಂಟ್ ಎವರೆಸ್ಟ್ ಏರಲು ಅನುಮತಿ ಪಡೆಯಲು ರಾಯಧನ ಶುಲ್ಕವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಮೌಂಟ್ ಎವರೆಸ್ಟ್ ಏರಲು ಅನುಮತಿ ಪಡೆಯಲು ರಾಯಧನ ಶುಲ್ಕವನ್ನು 4,000 ಡಾಲರ್ ನಿಂದ 15,000 ಡಾಲರ್‌ಗೆ ಹೆಚ್ಚಿಸಲು ನೇಪಾಳ ಸರ್ಕಾರ ನಿರ್ಧಸಿದ್ದು 2025 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಚಂದಿರನಿಗೆ ಇನ್ನಷ್ಟು ಹತ್ತಿರವಾದ ಚಂದ್ರಯಾನ – 3 ನೌಕೆ – ಚಂದ್ರನನ್ನು ಸ್ಪರ್ಶಿಸಲು 9 ದಿನಗಳು ಮಾತ್ರ ಬಾಕಿ!

ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ವಕ್ತಾರ ಯುವರಾಜ್‌ ಖತಿವಾಡಾ ಅವರು ಮಾಹಿತಿ ನೀಡಿದ್ದಾರೆ. 2025ರಿಂದ ಮೌಂಟ್ ಎವರೆಸ್ಟ್ ಏರಲು ಬಯಸುವ ವಿದೇಶಿ ಪ್ರಜೆಗೆ 15,000 ಡಾಲರ್ ಹೊಸ ರಾಯಧನ ಶುಲ್ಕವನ್ನು ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಿಸಿದೆ. ಪ್ರಸ್ತಾವವನ್ನು ಸಂಪುಟ ಅನುಮೋದಿಸಿದ ನಂತರ ಹೊಸ ಶುಲ್ಕ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ 8,848.86 ಮೀಟರ್ ಎತ್ತರವಿರುವ ವಿಶ್ವದ ಅತಿ ಎತ್ತರದ ಪರ್ವತ ಏರಲು ಬಯಸುವ ವಿದೇಶಿ ಪರ್ವತಾರೋಹಿ 11,000 ಡಾಲ‌ ರಾಯಧನ ಶುಲ್ಕ ಹಾಗೂ ನೇಪಾಳಿ ಪರ್ವತಾರೋಹಿಗಳು 75,000 ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ 2025 ರಿಂದ ಈ ಶುಲ್ಕ ಹೆಚ್ಚಳವಾಗಲಿದೆ. ಸರ್ಕಾರ ಕೊನೆ ಬಾರಿಗೆ 2015ರ ಜನವರಿಯಲ್ಲಿ ಶುಲ್ಕ ಪರಿಷ್ಕರಿಸಿತ್ತು.

suddiyaana