ಹೊಸವರ್ಷಕ್ಕೆ ರಿಷಭ್ ಪಂತ್ ಕಮ್‌ಬ್ಯಾಕ್ ಗ್ಯಾರಂಟಿ – ಐಪಿಎಲ್‌ಗೂ ಎಂಟ್ರಿ ಸಾಧ್ಯತೆ

ಹೊಸವರ್ಷಕ್ಕೆ ರಿಷಭ್ ಪಂತ್ ಕಮ್‌ಬ್ಯಾಕ್ ಗ್ಯಾರಂಟಿ – ಐಪಿಎಲ್‌ಗೂ ಎಂಟ್ರಿ ಸಾಧ್ಯತೆ

ಭೀಕರ ಅಪಘಾತಕ್ಕೊಳಗಾಗಿ, ಚೇತರಿಸಿಕೊಂಡಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಸದ್ಯದಲ್ಲೇ ಕಮ್‌ಬ್ಯಾಕ್ ಮಾಡಲಿದ್ದಾರೆ. ಮುಂದಿನ ಸೀಸನ್ ಐಪಿಎಲ್‌ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಲ್ಲದೇ, ಜನವರಿಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲೂ ಪಂತ್ ಆಡುವುದು ಪಕ್ಕಾ ಎನ್ನಲಾಗಿದೆ.

ಇದನ್ನೂ ಓದಿ: ಅಪಘಾತದ ಬಳಿಕ ಸತತ ಅಭ್ಯಾಸದಲ್ಲಿ ನಿರತರಾದ ರಿಷಭ್ – ವೇಗದ ಬಾಲ್‌ಗೆ ಪಂತ್ ಬ್ಯಾಟಿಂಗ್

ರಿಷಭ್ ಪಂತ್ ಅವರ ಅಲಭ್ಯತೆಯಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮುನ್ನಡೆಸಿದ್ದರು. ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಸಂಪೂರ್ಣ ಚೇತರಿಸಿಕೊಂಡಿದ್ದು, ಮುಂದಿನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನೆಡೆಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ, ರಿಷಭ್ ಪಂತ್ ಮುಂದಿನ ವರ್ಷದ ಆರಂಭದಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 25, 2024 ರಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಡಿಸೆಂಬರ್ 30, 2022 ರ ಮುಂಜಾನೆ ರೂರ್ಕಿಯಿಂದ ನವದೆಹಲಿಗೆ ತೆರಳುತ್ತಿದ್ದಾಗ ಪಂತ್ ಅವರ ಕಾರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ ಕಾಲಿಗೆ ಗಂಭೀರ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾಗಿ 8 ತಿಂಗಳುಗಳ ಬಳಿಕ ರಿಷಭ್ ಪಂತ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.

suddiyaana