ಪ್ರಧಾನಿ ಮೋದಿ ‘ಹರ್ ಘರ್ ತಿರಂಗಾʼ ಕರೆಗೆ ಪ್ರೊಫೈಲ್ ಬದಲಾವಣೆ – ಪ್ರಮುಖ ನಾಯಕರ ಗೋಲ್ಡನ್, ಬ್ಲೂ ಟಿಕ್ ತೆಗೆದ ‘X’
77 ನೇ ಸ್ವಾತಂತ್ಯ ದಿನಾಚಣೆಯನ್ನು ಆಚರಿಸಲು ಇಡೀ ದೇಶವೇ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹರ್‌ಘರ್ ತಿರಂಗಾ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ. ಮೋದಿ ಅವರ ‘ಹರ್ ಘರ್ ತಿರಂಗಾ ಕರೆಯಂತೆ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯ ಪ್ರೊಫೈಲ್ ಚಿತ್ರದಲ್ಲಿ ತ್ರಿವರ್ಣ ಧ್ವಜ ಹಾಕಿಕೊಂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಹಲವು ಬಿಜೆಪಿ ನಾಯಕರ ಖಾತೆಗಳಿಗೆ ನೀಡಿದ್ದ ಗೋಲ್ಡನ್, ಬ್ಲೂ ಟಿಕ್ ಅನ್ನು ಎಕ್ಸ್ ತೆಗೆಯಲಾಗಿದೆ.
ಪ್ರಧಾನಿ ಕರೆಯಂತೆ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಹಾಗೂ ವಿವಿಧ ಸಂಸ್ಥೆಗಳು ತಮ್ಮ ಪ್ರೊಫೈಲ್ ಚಿತ್ರದ ಜಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದಾರೆ. ಆದರೆ ‘ಎಕ್ಸ್’ ಖಾತೆಯಲ್ಲಿ ಯಾರ ಪ್ರೊಫೈಲ್ ಚಿತ್ರಗಳು ಬದಲಾಗಿವೆಯೋ ಅವರಿಗೆ ನೀಡಲಾಗಿದ್ದ ಗೋಲ್ಡನ್ ಹಾಗೂ ಬ್ಲೂ ಟಿಕ್‌ಗಳು ಮಾಯವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಖಾತೆಯ ಖಾತ್ರಿಗಾಗಿ ನೀಡಲಾಗುವ ಗುರುತು ಇದಾಗಿದೆ. ಇದರಲ್ಲಿ ನೀಲಿ ಹಾಗೂ ಹೊಂಬಣ್ಣದ ಟಿಕ್‌ಗಳಿವೆ.
ಇದನ್ನೂ ಓದಿ: ಬಿಜೆಪಿ “ಭ್ರಷ್ಟಾಚಾರದ ಅಕ್ಷಯ ಪಾತ್ರೆ” ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ – ಕಾಂಗ್ರೆಸ್ ಲೇವಡಿ
ಎಕ್ಸ್‌ನ ಮಾನದಂಡದಂತೆ ಪ್ರಮುಖ ನಾಯಕರಿಗೆ ಹಾಗೂ ಸಂಸ್ಥೆಗಳ ಖಾತೆಗಳನ್ನು ಮರುಪರಿಶೀಲಿಸುವ ಕಾರ್ಯ ಖಾತೆ ಖಾತ್ರಿಯಾದರೆ ಟಿಕ್‌ಗಳನ್ನು ಮರಳಿ ನೀಡಲಾಗುವುದು ಎಂದು ಹೇಳಲಾಗಿದೆ.
ಖಾತೆ ಖಾತ್ರಿಯ ಟಿಕ್ ಕಳೆದುಕೊಂಡವರಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರಿಗೆ ಸೇರಿದ ಖಾತೆಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೂ ತಮ್ಮ ಪ್ರೊಫೈಲ್ ಚಿತ್ರವನ್ನು ತ್ರಿವರ್ಣವಾಗಿ ಬದಲಿಸಿದ್ದಾರೆ. ಆದರೆ ಅವರಿಗೆ ಎಕ್ಸ್ ನೀಡಿರುವ ಬೂದು ಬಣ್ಣದ ಟಿಕ್ ಹಾಗೇ ಉಳಿದಿದೆ.