ಬಿಜೆಪಿ “ಭ್ರಷ್ಟಾಚಾರದ ಅಕ್ಷಯ ಪಾತ್ರೆ” ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ – ಕಾಂಗ್ರೆಸ್‌ ಲೇವಡಿ

ಬಿಜೆಪಿ “ಭ್ರಷ್ಟಾಚಾರದ ಅಕ್ಷಯ ಪಾತ್ರೆ” ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ – ಕಾಂಗ್ರೆಸ್‌ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಕಮಿಷನ್‌ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಇದೀಗ ರಾಜ್ಯ ಕಾಂಗ್ರೆಸ್‌, ಬಿಜೆಪಿ ಭ್ರಷ್ಟಾಚಾರದ ಅಕ್ಷಯ ಪಾತ್ರೆ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ ಎಂದು ಲೇವಡಿ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು. ಬಿಜೆಪಿ ಅಡಳಿತವೆಂದರೆ “ಭ್ರಷ್ಟಾಚಾರದ ಅಕ್ಷಯ ಪಾತ್ರೆ” ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ. ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ 200% ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಇರುವ KKRDB ಹಣವನ್ನು ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧನೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಇದನ್ನೂ ಓದಿ: ಲಾಲ್‌ಬಾಗ್ ಕಾರ್ಮಿಕನಿಗೆ ಗುದ್ದಿದ ನಟಿ ಕಾರು – ಮಾನವೀಯತೆಗೂ ಕಾರ್ಮಿಕನ ಮಾತನಾಡಿಸದ ನಟಿ ರಚಿತಾರಾಮ್

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ. ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ ಬಿಜೆಪಿ? ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ. ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

suddiyaana