ನೈಜರ್‌ ದೇಶದಲ್ಲಿ ಹೆಚ್ಚಾದ ಆಂತರಿಕ ಸಂಘರ್ಷ – ತಕ್ಷಣವೇ ದೇಶ ತೊರೆಯುವಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ  

ನೈಜರ್‌ ದೇಶದಲ್ಲಿ ಹೆಚ್ಚಾದ ಆಂತರಿಕ ಸಂಘರ್ಷ – ತಕ್ಷಣವೇ ದೇಶ ತೊರೆಯುವಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ  

ನವದೆಹಲಿ: ನೈಜರ್‌ ದೇಶದಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗುತ್ತಿದೆ. ಹೀಗಾಗಿ ಆ ದೇಶದಲ್ಲಿರುವ ಭಾರತೀಯರು ತಕ್ಷಣವೇ ದೇಶ ತೊರೆಯುವಂತೆ ಕೇಂದ್ರ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.

ನೈಜರ್ ದೇಶದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಬಂಧಿಸಿರುವ ನೈಜರ್ ಸೇನಾ ಪಡೆ ತನ್ನ ವಶದಲ್ಲಿ ಇಟ್ಟುಕೊಂಡಿದೆ. ಇತ್ತ ನೈಜರ್ ಸೇನಾ ಪಡೆಗೆ ಆಫ್ರಿಕನ್ ರಾಷ್ಟ್ರಗಳು ಹಲವು ನಿರ್ಬಂಧ ವಿಧಿಸಿದೆ. ಈ ಬೆಳವಣಿಗೆಗಳಿಂದ ನೈಜರ್ ದೇಶದಲ್ಲಿ ದಂಗೆ ಶುರುವಾಗಿದೆ. ಅರಾಜಕತೆ ಸೃಷ್ಟಿಯಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ವಿದೇಶಾಂಗ ಇಲಾಖೆ ತನ್ನ ನಾಗರೀಕರಿಗೆ ಮಹತ್ವದ ಸೂಚನೆ ನೀಡಿದೆ. ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರಿಗ ತಕ್ಷಣವೇ ದೇಶ ತೊರೆಯುವಂತೆ ಭಾರತ ವಿದೇಶಾಂದ ಸಚಿವಾಲಯ ಸೂಚನೆ ನೀಡಿದ್ದು, ಇಷ್ಟೇ ಅಲ್ಲ ನೈಜರ್ ದೇಶಕ್ಕೆ ಪ್ರಯಾಣ ಮುಂದೂಡುವಂತೆ ಸೂಚಿಸಿದೆ.

ಇದನ್ನೂ ಓದಿ: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಬಿಜೆಪಿ ಷಡ್ಯಂತ್ರ! – ಕಾಂಗ್ರೆಸ್‌ ಆರೋಪ

ನೈಜರ್ ದೇಶದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ನೈಜರ್ ದೇಶದ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿದೆ. ಹೀಗಾಗಿ ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ನೈಜರ್ ದೇಶ ತೊರೆಯಬೇಕು.ಭಾರತೀ ನಾಗರೀಕರ ಸುರಕ್ಷತೆಗಾಗಿ ದೇಶ ತೊರೆಯುವುದು ಸದ್ಯಕ್ಕಿರುವ ಮಾರ್ಗ. ನೈಜರ್ ದೇಶದಲ್ಲಿರುವ ಭಾರತೀಯರ ರಾಯಭಾರ ಕಚೇರಿ ನಿಮಗೆ ನರೆವು ನೀಡಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.

ಇದುವರೆಗೆ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ನಾಗರೀಕರು ಆನ್‌ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಮಾಡಿಕೊಳ್ಳಿ. ನೈಜರ್‌ನ ಭಾರತ ರಾಯಭಾರ ಕಚೇರಿ ಎಲ್ಲಾ ನೆರವು ನೀಡಲಿದೆ. ಇನ್ನು ನೈಜರ್ ದೇಶಕ್ಕೆ ಪ್ರಯಾಣ ಬೆಳೆಸುವ ಭಾರತೀಯರು ಸದ್ಯಕ್ಕೆ ಮುಂದೂಡುವುದು ಉತ್ತಮ. ಪರಿಸ್ಥಿತಿ ಸುಧಾರಿಸಿದ ಬಳಿಕ ಪ್ರಯಾಣ ಮುಂದುವರಿಸಿ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ಈಗಾಗಲೇ ನೈಜರ್ ದೇಶದ ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ನೈಜರ್ ದೇಶದ ಚುನಾಯಿತ ಸರ್ಕಾರವನ್ನೇ ಸೇನೆ ಪತನಗೊಳಿಸಿದೆ. ಇತ್ತ ನೈಜರ್ ಸೇನಾ ಕಮಾಂಡರ್ ಎಬಿ ಟಿಯಾನಿ ನೀಡಿದ ಘೋಷಣೆ ಆಫ್ರಿಕನ್ ದೇಶಗಳನ್ನು ಮತ್ತಷ್ಟು ಕೆರಳಿಸಿದೆ. ತಾನೇ ನೈಜರ್ ದೇಶದ ಅಧ್ಯಕ್ಷ ಎಂದು ಟಿಯಾನಿ ಘೋಷಣೆ ಮಾಡಿದ್ದಾರೆ. ಇತ್ತ ನೈಜೀರಿಯಾ ಸೇರಿದಂತೆ 15 ಆಫ್ರಿಕನ್ ರಾಷ್ಟ್ರಗಳು ತುರ್ತು ಸಭೆ ನಡೆಸಿದೆ. ನೈಜರ್ ದೇಶದ ಪರಿಸ್ಥಿತಿ ಅವಲೋಕಿಸಿದೆ. ಇಷ್ಟೇ ಅಲ್ಲ ವಶದಲ್ಲಿಟ್ಟುಕೊಂಡಿರುವ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ತಕ್ಷಣವೇ ಒಪ್ಪಿಸುವಂತೆ ಸೂಚಿಸಿದೆ.

ಆದರೆ ಯಾವುದೇ ಸೂಚನೆಗೆ ಬಗ್ಗದ ನೈಜರ್ ಸೇನೆ ದಾಳಿ ಆರಂಭಿಸಿದೆ. ನೈಜರ್ ದೇಶದ ಜೊತೆಗಿನ ವಾಣಿಜ್ಯ ಹಾಗೂ ಇತರ ವ್ಯವಹಾರ ಸಂಬಂಧವನ್ನು ಆಫ್ರಿಕನ್ ದೇಶಗಳು ಕಡಿತಗೊಳಿಸಿದೆ. ವಶದಲ್ಲಿಟ್ಟುಕೊಂಡಿರುವ ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ಆಫ್ರಿಕನ್ ಒಕ್ಕೂಟಕ್ಕೆ ಒಪ್ಪಿಸದಿದ್ದರೆ, ದಾಳಿ ನಡೆಸುವುದಾಗಿ ಆಫ್ರಿಕನ್ ಒಕ್ಕೂಟ ಎಚ್ಚರಿಕೆ ನೀಡಿದೆ. ಇತ್ತ ಆಫ್ರಿಕನ್ ಸೇನಾ ದಾಳಿ ಎದುರಿಸಲು ನೈಜರ್ ದೇಶದ ಸೇನೆ ಕೂಡ ಸಜ್ಜಾಗಿದೆ. ಹೀಗಾಗಿ ನೈಜರ್ ದೇಶದಲ್ಲಿ  ದಂಗೆಯ ಜೊತೆಗೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

suddiyaana