11 ವರ್ಷದ ಬಾಲಕನ ಕುತ್ತಿಗೆ ಹಿಸುಕಿ ಬೆಡ್ ಕೆಳಗಿನ ಬಾಕ್ಸ್ ನಲ್ಲಿ ಅಡಗಿಸಿಟ್ಟ ಮಹಿಳೆ – ಪರಿಚಯಸ್ಥಳೇ ಕೃತ್ಯ ಎಸಗಿದ್ದೇಕೆ..?

11 ವರ್ಷದ ಬಾಲಕನ ಕುತ್ತಿಗೆ ಹಿಸುಕಿ ಬೆಡ್ ಕೆಳಗಿನ ಬಾಕ್ಸ್ ನಲ್ಲಿ ಅಡಗಿಸಿಟ್ಟ ಮಹಿಳೆ – ಪರಿಚಯಸ್ಥಳೇ ಕೃತ್ಯ ಎಸಗಿದ್ದೇಕೆ..?

11 ವರ್ಷದ ಬಾಲಕನನ್ನ ಕೊಲೆ ಮಾಡಿ ಬೆಡ್ ಕೆಳಗಿನ ಸ್ಟೋರೇಜ್ ಬಾಕ್ಸ್ ನಲ್ಲಿ ಅಡಗಿಸಿ ಇಟ್ಟಿದ್ದ ಘೋರ ಘಣನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪಶ್ಚಿಮ ದೆಹಲಿಯ ಇಂದರ್‌ಪುರಿ ಪ್ರದೇಶದಲ್ಲಿ ಮಹಿಳೆಯೊಬ್ಬರು 11 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಶಂಕಿತ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದ್ದು, ಆಕೆ ಮೃತ ಬಾಲಕನ ಪೋಷಕರಿಗೆ ಪರಿಚಿತರಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ದೇವರ ನಾಡಲ್ಲಿ ದರ್ಶನ ಕೊಟ್ಟ ಮಹಾಬಲಿ – ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತೆ ಈ ಕಪ್ಪೆ!

ಗುರುವಾರ ಆರೋಪಿ ಪೂಜಾ ಮೃತ ಬಾಲಕನ ಮನೆಗೆ ಬಂದು ಆತನ ತಾಯಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾಳೆ ಎಂದು ಘಟನೆಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಹುಡುಗನ ಶಿಕ್ಷಕರು ಅವನ ತಾಯಿಗೆ ಕರೆ ಮಾಡಿ ನಿಮ್ಮ ಪುತ್ರ ಶಾಲೆಗೆ ಬಂದಿಲ್ಲ ಎಂದು ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಬಾಲಕನ ತಾಯಿ, ನಾನು ನನ್ನ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ನನ್ನ ಮಗನ ಶಿಕ್ಷಕರು ಅವನು ತರಗತಿಗೆ ಬಂದಿಲ್ಲ ಎಂದು ಕರೆ ಮಾಡಿ ತಿಳಿಸಿದರು. ಮನೆ ತಲುಪಿದಾಗ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂತು. ನಾನು ಬೀಗವನ್ನು ತೆರೆದು ಒಳಗೆ ಹೋಗಿ ನೋಡಿದಾಗ ಇಡೀ ಮನೆಯನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಮತ್ತು ಕೆಲವು ವಸ್ತುಗಳು ಹಾಸಿಗೆಯ ಮೇಲೆ ಬಿದ್ದಿದ್ದವು.

ಹೀಗಾಗಿ  ಇಡೀ ಮನೆಯನ್ನು ಹುಡುಕಿದಾಗ, ಮಂಚದ ಮೇಲೆ ಹಾಸಿಗೆ ಸರಿಯಾದ ಸ್ಥಳದಲ್ಲಿಲ್ಲ ಎಂದು ಗಮನಿಸಿದೆ. ಅನುಮಾನ ಬಂದು ಬೆಡ್ ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಮಗ ನಿರ್ಜೀವವಾಗಿ ಬಿದ್ದಿರುವುದು ಕಂಡು ಬಂತು. ಬಳಿಕ, ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವನು ಸತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಪ್ರಕರಣ ಸಂಬಂಧ ಅನೇಕ ತಂಡಗಳನ್ನು ರಚಿಸಲಾಗಿದೆ ಮತ್ತು ಶಂಕಿತ ಆರೋಪಿಯ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಗುರುವಾರ ರಾತ್ರಿ 8.30ರ ಸುಮಾರಿಗೆ ಬಿಎಲ್‌ಕೆ ಆಸ್ಪತ್ರೆಯಿಂದ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಆತನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

suddiyaana