ವಜ್ರದ ಹರಳುಗಳಿಂದಲೇ ತಯಾರಾಯ್ತು ಟೀ ಮಗ್! – ಅಬ್ಬಬ್ಬಾ.. ಇದರ ಬೆಲೆ ಎಷ್ಟು ಗೊತ್ತಾ?

ನಾವು ನೀವೆಲ್ಲಾ ಸಾಮಾನ್ಯವಾಗಿ ಕಾಫಿ ಟೀ ಕುಡಿಯಲು ದಿನಬಳಕೆಗೆ ಸ್ಟೀಲ್ ಗ್ಲಾಸ್ ಅಥವಾ ಪಿಂಗಾಣಿ ಗ್ಲಾಸ್ಗಳನ್ನ ಬಳಸ್ತೇವೆ. ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಅಥವಾ ಗಾಜಿನ ಲೋಟಗಳನ್ನ ಕೊಡ್ತಾರೆ. ಇವುಗಳ ಬೆಲೆ ಎಷ್ಟಿರುತ್ತೆ ಅಂತಾ ಸಾಮಾನ್ಯವಾಗಿ ಗೊತ್ತಿರುತ್ತೆ. ಆದ್ರೆ ಇಲ್ಲೊಂದು ಜಗತ್ತಿನ ಅತ್ಯಂತ ದುಬಾರಿ ಟೀ ಮಗ್ ಇದೆ. ಇದರ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಿ..
ಇದನ್ನೂ ಓದಿ: ವಧುವಿಗೆ ಚಿನ್ನದಲ್ಲೇ ತುಲಾಭಾರ – 70 ಕೆಜಿ ಚಿನ್ನವೂ ವರನ ಪಾಲು!
ಸಾಮಾನ್ಯವಾಗಿ ಒಂದು ಟೀ ಮಗ್ ಬೆಲೆ 200 ರೂಪಾಯಿಂದ ಸಾವಿರ ರೂಪಾಯಿವರೆಗೆ ಬೆಲೆ ಇರುತ್ತೆ. ಆದರೆ ಇಲ್ಲೊಂದು ಟೀ ಮಗ್ ಬಲೆ ಬರೋಬ್ಬರಿ 124 ಕೋಟಿ ರೂಪಾಯಿ..ಇದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೂಡ ಮಾಡಿದೆ. ಇದು ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ಟೀ ಮಗ್ ಎಂಬ ಖ್ಯಾತಿ ಪಡೆದಿದೆ.
ಅರೆ ಟೀ ಹಾಕಲೆಂದೇ ಇರುವ ಈ ಮಗ್ಗೆ ಇಷ್ಟೊಂದು ಬೆಲೆ ಏಕೆ ಅಂತಾ ನಿಮಗೆಲ್ಲಾ ಅನ್ನಿಸಬಹುದು.. ಆದ್ರೆ ಅಲ್ಲೇ ಇರೋದು ಅಸಲಿ ವಿಚಾರ. ಯಾಕಂದ್ರೆ ಈ ಟೀ ಮನ್ನ ಒಳ ಮೈಯನ್ನು ಹಾಗೂ ನಳಿಕೆಯನ್ನು 18 ಕ್ಯಾರೆಟ್ನ ಚಿನ್ನದಿಂದ ತಯಾರಿಸಲಾಗಿದೆ. ಹೊರ ಮೈಯನ್ನು ಸಂಪೂರ್ಣವಾಗಿ ವಜ್ರದ ಹರಳುಗಳಿಂದ ರೂಪಿಸಲಾಗಿದ್ದು ಮಧ್ಯದಲ್ಲಿ ಅತ್ಯಂತ ಆಕರ್ಷಕವಾಗಿ 6.67 ಕ್ಯಾರೆಟ್ ರೂಬಿ ವಜ್ರದಿಂದ ಹೊಳಪು ನೀಡಲಾಗಿದೆ. ಮಗ್ನ ಹಿಡಿಕೆಯನ್ನು ಆನೆಯೊಂದರ ಪಳಿಯುಳಿಕೆ ದಂತದಿಂದ ಮಾಡಲಾಗಿದೆ ಎಂದು ಗಿನ್ನಿಸ್ ಸಂಸ್ಥೆ ತಿಳಿಸಿದೆ.ಈ ಬೆಲೆಬಾಳುವ ವಸ್ತುವಿನ ಒಡೆತನವನ್ನು ಭಾರತೀಯ ಮೂಲದವರು ಸ್ಥಾಪಿಸಿರುವ ಲಂಡನ್ನ ಎನ್ ಸೇಥಿಯಾ ಫೌಂಡೇಶನ್ ಹೊಂದಿದೆ.