50 ರ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಡಲು ರಾಹುಲ್‌ಗೇನು ಹುಡುಗಿಯರ ಕೊರತೆಯೇ? – ವಿವಾದ ಹೊತ್ತಿಸಿದ ಕಾಂಗ್ರೆಸ್ ನಾಯಕಿ ಮಾತು!
ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಪ್ಲೈಯಿಂಗ್ ಕಿಸ್ ನೀಡಿರುವ ವಿಚಾರ ಈಗ ದೇಶದ ರಾಜಕೀಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಈ ವಿಚಾರದ ಬಗ್ಗೆ ಎರಡು ಪಕ್ಷಗಳು ಕಿತ್ತಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು, 50 ವರ್ಷದ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಡಲು ರಾಹುಲ್‌ಗೇನು ಹುಡುಗಿಯರ ಕೊರತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್ ಅವರಿಗೆ ಯುವತಿಯರ ಕೊರತೆ ಇಲ್ಲದಿರುವಾಗ 50 ವರ್ಷದ ಮಹಿಳೆಗೆ ಫ್ಲೈಯಿಂಗ್ ಕಿಸ್ ಏಕೆ ಕೊಡುತ್ತಾರೆ ಎಂದು ನೀತು ಸಿಂಗ್ ಅವರು ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಹೊಸ ವಿವಾದವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಟಿಕೆಟ್ ದರದಲ್ಲಿ 50% ಏರಿಕೆ!
ನಮ್ಮ ನಾಯಕ ರಾಹುಲ್ ಗಾಂಧಿಗೆ ಯುವತಿಯರ ಕೊರತೆ ಇಲ್ಲ. ಇಂದು ವೇಳೆ ಫ್ಲೈಯಿಂಗ್ ಕಿಸ್ ಕೊಡುವುದಾದರೆ ಅದನ್ನು ಒಂದು ಯುವತಿಗೆ ಕೊಡುತ್ತಾರೆ ಹೊರತು ಸ್ಮೃತಿ ಇರಾನಿಯಂತಹ 50 ವರ್ಷ ವಯಸ್ಸಾದ ಮಹಿಳೆಗೆ ಏಕೆ ಕೊಡುತ್ತಾರೆ. ರಾಹುಲ್ ವಿರುದ್ಧದ ಎಲ್ಲ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನೀತು ಸಿಂಗ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಪಕ್ಷದ ವಕ್ತಾರ ಗೌರವ್ ಭಾಟಿಯಾ ಟ್ವೀಟ್ ಮಾಡಿದ್ದು, ಸ್ಮೃತಿ ಇರಾನಿಯ ಬಗ್ಗೆ ನೀತು ಸಿಂಗ್ ಆಡಿರುವ ಮಾತು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಭಾಟಿಯಾ ಅವರ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ‘ಮಹಿಳಾ ವಿರೋಧಿ ಪಕ್ಷ’ ಮತ್ತು ಅದು ತನ್ನ ನಾಯಕ ರಾಹುಲ್ ಗಾಂಧಿಯನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ನಿರೂಪಿಸಿದೆ ಎಂದು ಕಿಡಿಕಾರಿದರು.