ದೇವರ ನಾಡನ್ನು ಕೇರಳ ಎಂದು ಕರೆಯುವಂತಿಲ್ಲ! – ರಾಜ್ಯಕ್ಕೆ ಹೊಸ ನಾಮಕರಣ?

ದೇವರ ನಾಡನ್ನು ಕೇರಳ ಎಂದು ಕರೆಯುವಂತಿಲ್ಲ! – ರಾಜ್ಯಕ್ಕೆ ಹೊಸ ನಾಮಕರಣ?

ದೇವರ ನಾಡನ್ನು ಇನ್ನುಮುಂದೆ ಕೇರಳ ಎಂದು ಕರೆಯುವಂತಿಲ್ಲ. ಕೇರಳ ರಾಜ್ಯದ ಹೆಸರನ್ನು ಬದಲಾವಣೆ ಮಾಡಲಾಗಿದ್ದು,  ‘ಕೇರಳಂ’ನಾಮಕರಣ ಮಾಡಲಾಗಿದೆ.

ಕೇರಳ ರಾಜ್ಯದ ಅಧಿಕೃತ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ನಿರ್ಣಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಕೇರಳದ ವಿಧಾನಭೆಯಲ್ಲಿ ಪ್ರಸ್ತುತಪಡಿಸಿದ್ದು, ಈ ನಿರ್ಣಯವನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು ಬದಲಿಸಲು ಕೇರಳ ಸರ್ಕಾರ ಕೋರಿದೆ.

ಇದನ್ನೂ ಓದಿ:  ಪತ್ತೆಯಾಯ್ತು 2 ನೇ ವಿಶ್ವಯುದ್ಧ ಕಾಲದ ಬಾಂಬ್‌ – ಬರೋಬ್ಬರಿ 13 ಸಾವಿರ ಜನರ ಸ್ಥಳಾಂತರ

ಭಾರತ ಸಂವಿಧಾನದಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಅದಕ್ಕೆ ತಿದ್ದುಪಡಿ ತಂದು ‘ಕೇರಳಂ’ ಮಾಡುವಂತೆ ಸದನವು ಕೇಂದ್ರ ಸರಕಾರವನ್ನು ಕೋರಿದೆ. ಮುಖ್ಯಮಂತ್ರಿ ಮಂಡಿಸಿದ ನಿರ್ಣಯ ಅಂಗೀಕಾರವಾದ ನಂತರ ಸರ್ಕಾರಿ ದಾಖಲೆಗಳಲ್ಲಿ ಕೇರಳಂ ಹೆಸರು ಬಳಕೆಯಾಗುತ್ತದೆ. ಈ ಬದಲಾವಣೆಯು ಸಂವಿಧಾನದಲ್ಲಿ ಪ್ರತಿಫಲಿಸುತ್ತದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಬರೆಯಲಾಗುತ್ತದೆ.

ರಾಜ್ಯದ ಹೆಸರು ಮಲಯಾಳಂನಲ್ಲಿ ಕೇರಳಂ ಎಂದೇ ಕರೆಯಲಾಗುತ್ತದೆ. 1956ರ ನವೆಂಬರ್ 1ರಂದು ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಯಿತು. ಮಲಯಾಳಂ ಮಾತನಾಡುವ ಎಲ್ಲ ಜನರಿಗೆ ಅಖಂಡ ಕೇರಳ ರಾಜ್ಯ ರಚನೆಯಾಯಿತು. ಆದರೆ ಸಂವಿಧಾನದ ಮೊದಲ ಶೆಡ್ಯೂಲ್​ನಲ್ಲಿ ರಾಜ್ಯದ ಹೆಸರನ್ನು ‘ಕೇರಳ’ ಎಂದು ನಮೂದಿಸಲಾಗಿದೆ. ರಾಜ್ಯದ ಅಧಿಕೃತ ಹೆಸರನ್ನು ಎಲ್ಲ ಅಧಿಕೃತ ಭಾಷೆಗಳಲ್ಲಿ ‘ಕೇರಳಂ’ ಎಂದು ಬದಲಾಯಿಸಲು ಸಂವಿಧಾನದ ಎಂಟನೇ ಶೆಡ್ಯೂಲ್ ಅಡಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸುತ್ತದೆ ಎಂದು ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್​ ಹೇಳಿದ್ದಾರೆ.

suddiyaana