ಗಂಡನಿಗೆ ಸ್ಲೋ ಪಾಯಿಸನ್‌ ನೀಡುತ್ತಿದ್ದ ಹೆಂಡತಿ – ಕಾಫಿಯಿಂದಲೇ ಕಳಚಿ ಬಿತ್ತು ಆಕೆಯ ಮುಖವಾಡ!

ಗಂಡನಿಗೆ ಸ್ಲೋ ಪಾಯಿಸನ್‌ ನೀಡುತ್ತಿದ್ದ ಹೆಂಡತಿ – ಕಾಫಿಯಿಂದಲೇ ಕಳಚಿ ಬಿತ್ತು ಆಕೆಯ ಮುಖವಾಡ!

ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲ್ಲಲು ತಿಂಗಳುಗಟ್ಟಲೆ ಕಾಫಿಗೆ ವಿಷ ಬೆರೆಸಿದ್ದಾಳೆ. ಈಗ ಆಕೆಯ ಮುಖವಾಡ ಬಯಲಾಗಿದ್ದು, ಗಂಡ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾನೆ!

ಅಮೆರಿಕದ ಆರಿಝೋನಾದಲ್ಲಿ ಈ ಘಟನೆ ನಡೆದಿದೆ. ಮೆಲೊಡಿ ಫೆಲಿಕಾನೊ ಜಾನ್ಸನ್ ಎಂಬುವವರು ಯುಎಸ್​ ಏರ್​ಪೋರ್ಸ್​ ಉದ್ಯೋಗಿಯಾಗಿದ್ದಾನೆ. ಗಂಡನ ಸಾವಿನ ನಂತರ ಸಿಗೋ ಪ್ರಯೋಜನಗಳನ್ನು ಪಡೆಯಲು ಆತನ ಪತ್ನಿಮೆಲೊಡಿ ಫೆಲಿಕ್ಯಾನೋ ಎಂಬಾಕೆ ತನ್ನ ಪತಿಯನ್ನು ತಿಂಗಳುಗಟ್ಟಲೆ ಪ್ರತಿನಿತ್ಯದ ಕಾಫಿಗೆ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆಕೆ ದುಷ್ಕೃತ್ಯವನ್ನು ಜಾನ್ಸನ್ಸ್‌ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾನೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂಓದಿ: ಮಗಳನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟ ತಂದೆ -ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಹುಡುಗಿ ಮನೆಯೊಳಗೆ ಹಾವು ಬಿಟ್ಟ ಪಾಪಿ..!

ಪ್ರತಿದಿನ ಪತ್ನಿ ನೀಡುತ್ತಿದ್ದ ಕಾಫಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದನ್ನು ಆತ ಗಮನಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ. ಕಳೆದ ಮಾರ್ಚ್​ನಿಂದಲೂ ಕಾಫಿಯಲ್ಲಿ ಸ್ಲೋ ಪಾಯಿಸನ್​ ಹಾಕಲು ಪತ್ನಿ ಆರಂಭಿಸಿದ್ದಾಳೆ. ಪತ್ನಿಯ ವರ್ತನೆಯ ಮೇಲೆ ಅನುಮಾನಗೊಂಡ ಜಾನ್ಸನ್​ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾನೆ. ಇತ್ತೀಚೆಗೆ ನೀಡಿದ ಕಾಫಿಯಲ್ಲಿ ಅತಿ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಜಾನ್ಸನ್​, ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪತ್ನಿ ತನಗೆ ನೀಡುತ್ತಿದ್ದ ಕಾಫಿಗೆ ವಿಷ ಬೆರೆಸುತ್ತಿರುವುದು ಜಾನ್ಸನ್​ಗೆ ಗೊತ್ತಾಗಿದೆ.

ಪತ್ನಿ ತನ್ನನ್ನು ಕೊಲ್ಲಲು ಯತ್ನಿಸುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಅಷೇ ಅಲ್ಲದೇ ಆಕೆ ಕಾಫಿಗೆ ವಿಷ ಬೆರೆಸುತ್ತಿರುವ ಸಿಸಿಟಿಯ ದೃಶ್ಯಾವಳಿಯನ್ನು ಪೊಲೀಸರಿಗೆ ತೋರಿಸಿದ್ದಾನೆ. ಆಗತನ ದೂರಿನ ನಂತರ ಪೊಲೀಸರು ತನಿಖೆ ನಡೆಸಿ, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಜಾನ್ಸನ್ ತನ್ನ ಕಾಫಿಯಲ್ಲಿ ಹೆಚ್ಚಿನ ಮಟ್ಟದ ಕ್ಲೋರಿನ್ ಅನ್ನು ಪತ್ತೆಹಚ್ಚಲು ಕೆಲ ಪರೀಕ್ಷಾ ವಿಧಾನಗಳನ್ನು ಬಳಸಿದ್ದು, ಅದನ್ನು ನ್ಯಾಯಾಲಯಕ್ಕೂ ತಿಳಿಸಿದ್ದಾನೆ. ಅಲ್ಲದೆ, ಕೆಲ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತನ್ನ ಹೆಂಡತಿ ತನ್ನನ್ನು ಕೊಲ್ಲುವ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಳು ಎಂದು ಜಾನ್ಸನ್​, ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿದ ನಂತರ ಆಕೆಯನ್ನು ಬಂಧಿಸಲಾಗಿದೆ. ದಂಪತಿಗೆ ಒಂದು ಮಗುವಿದೆ. ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗಿದ್ದರು ಎಂದು ವರದಿಯಾಗಿದೆ.

suddiyaana