ಸ್ಪಂದನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಆಗಮಿಸಿದ ಶಿವಣ್ಣ
ನಟ ವಿಜಯ್ ರಾಘವೇಂದ್ರ ಪ್ರೀತಿಯ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ. ಇನ್ನು ಡಾ. ರಾಜ್ಕುಮಾರ್ ಕುಟುಂಬಕ್ಕೂ ಕೂಡಾ ಈ ಸುದ್ದಿ ಆಘಾತ ನೀಡಿದೆ. ಈಗಾಗಲೇ ರಾಘವೇಂದ್ರ ರಾಜ್ಕುಮಾರ್ ಸ್ಪಂದನಾ ಮೃತದೇಹ ತರಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಸ್ಪಂದನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್ ಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಗಣ್ಯರಿಂದ ಸಂತಾಪ
ಸ್ಪಂದನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೈದ್ರಾಬಾದ್ನಲ್ಲಿ ಶೂಟಿಂಗ್ನಲ್ಲಿ ನಿರತರಾಗಿದ್ದ ಶಿವಣ್ಣ ಆಘಾತಗೊಂಡಿದ್ದಾರೆ. ತಕ್ಷಣವೇ ಶೂಟಿಂಗ್ ಸ್ಥಗಿತಗೊಳಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.
ಸ್ಪಂದನಾ ತಂದೆ ಬಿ.ಕೆ ಶಿವರಾಮ್ ಮನೆಗೆ ವಿಜಯ್ ರಾಘವೇಂದ್ರ ತಂದೆ ಚಿನ್ನೇಗೌಡರು ಆಗಮಿಸಿದರು. ಕಂಬನಿ ಮಿಡಿಯುತ್ತಲೇ ಬಂದ ಚಿನ್ನೇಗೌಡರನ್ನು ನೋಡಿದರೆ ಮನಕಲಕುವಂತಿತ್ತು.
ಥೈಲಾಂಡ್ನಲ್ಲಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಮುಗಿದಿದೆ. ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮೃತದೇಹ ತರಲಾಗುತ್ತದೆ. ಸ್ಪಂದನಾ ಅಂತ್ಯಸಂಸ್ಕಾರಕ್ಕೆ ಜಾಗ ಗುರುತಿಸಿಲ್ಲ. ವಿಜಯ ರಾಘವೇಂದ್ರ ಮತ್ತು ಕುಟುಂಬಸ್ಥರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಬುಧವಾರ ಅಂತ್ಯಸಂಸ್ಕಾರ ನಡೆಸುವುದಾಗಿ ಸ್ಪಂದನಾ ಚಿಕ್ಕಪ್ಪ, ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.